ನಿರಂತರ ಮಳೆ, ಕಾಣೆಯಾದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ: ಜನಾಕ್ರೋಶ

ತುಮಕೂರು ಜಿಲ್ಲೆಯಲ್ಲಿ ನಿರತಂತ ಮಳೆಯಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರು ಕ್ಷೇತ್ರಕ್ಕೆ ಕಾಲಿಡದೆ ನಾಪತ್ತೆಯಾಗಿದ್ದಾರೆ. ಸೌಜನ್ಯಕ್ಕೆ ಅಧಿಕಾರಿಗಳ ಸಭೆಯೂ ನಡೆಸಿಲ್ಲ.

ನಿರಂತರ ಮಳೆ, ಕಾಣೆಯಾದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ: ಜನಾಕ್ರೋಶ
ಆರಗ ಜ್ಞಾನೇಂದ್ರ
Follow us
TV9 Web
| Updated By: Rakesh Nayak Manchi

Updated on: May 21, 2022 | 2:56 PM

ತುಮಕೂರು: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ (Rain) ಸುರಿಯುತ್ತಿದೆ. ಇತ್ತ ಜಿಲ್ಲೆಯ ಉಸ್ತುವಾರಿಗಳಾದ ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra) ಅವರು ಕ್ಷೇತ್ರಕ್ಕೆ ಒಂದು ದಿನವೂ ಭೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.  ನಿರಂತರ ಮಳೆಯಿಂದಾಗಿ ಜನರು ಕಂಗೆಟ್ಟಿದ್ದರೂ ಕ್ಯಾರೇ ಎನ್ನದ ಅರಗ ಜ್ಞಾನೇಂದ್ರ ಅವರು, ಸೌಜನ್ಯಕ್ಕೆ ಅಧಿಕಾರಿಗಳ ಒಂದು ಸಭೆಯನ್ನೂ ಕರೆದಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿಗಳು ಆಯಾ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ಮಳೆಗಾಲದ ಸಂಕಷ್ಟ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ತುಮಕೂರು ಜಿಲ್ಲೆಯ ಮಳೆ ಪರಿಸ್ಥತಿ ನಿರ್ವಹಣೆಗೆ ಜಿಲ್ಲಾಡಳಿತಕ್ಕೆ ಈವರೆಗೆ ಸೂಚನೆಯೂ ನೀಡಲ್ಲ.  ಮೇ 4ರಂದು ತುಮಕೂರಿನಲ್ಲಿ ಕೊನೆಯ ಸಭೆ ನಡೆಸಿದ್ದರು. ಆದರೆ, ನಿರಂತರ ಮಳೆಯಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿಗಳು ಕ್ಷೇತ್ರದಲ್ಲಿ ಜನರ ಮುಂದೆ ಬಾರದ ಹಿನ್ನೆಲೆ ಜನಾಕ್ರೋಶಕ್ಕೆ ಕಾರಣವಾಗಿದೆ. ರೈತರ ಹಾಗೂ ಜನರ ಸಂಕಷ್ಟ (Hardship)ಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ.

ಇನ್ನೂ ಓದಿ: ಅರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಪದೇ ಪದೆ ಹೇಳಿಕೆ ಬದಲಿಸೋಕೆ ಎಂದು ಅವರ ವಿರುದ್ಧ ದೂರು ನೀಡಿದ ಮೊಹಮ್ಮದ್‌ ನಲಪಾಡ್

ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಮಳೆ ನೀರು ತುಂಬಿ 30 ಹೆಕ್ಟೇರ್ ರಾಗಿ ಬೆಳೆ ನಾಶಗೊಂಡಿದೆ. 60ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಇನ್ನೊಂದೆಡೆ ಮಾರ್ಕೋನಹಳ್ಳಿ ಸೇರಿದಂತೆ ಜಿಲ್ಲೆಯಲ್ಲಿರುವ ಡ್ಯಾಂಗಳು ಕೂಡ ಭರ್ತಿಯಾಗಿವೆ. ಈ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಮಾಹಿತಿ ಕಲೆಹಾಕಿಲ್ಲ. ಹೀಗಿದ್ದಾಗ ರೈತರು ಅನುಭವಿಸಿದ ನಷ್ಟಕ್ಕೆ ಪರಿಹಾರ ನೀಡುವವರಾದರೂ ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.

ಅಬಕಾರಿ ಪೊಲೀಸರ ಮೇಲೆ ಹಲ್ಲೆ

ಯಾದಗಿರಿ: ನಕಲಿ ಮದ್ಯ ಸಾಗಾಟಗಾರರ ಮೇಲೆ ದಾಳಿ ನಡೆಸಿದ ಅಬಕಾರಿ (Excise) ಪೊಲೀಸರ ಮೇಲೆ ಜನರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಚಂದಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಬಕಾರಿ ಇಲಾಖೆ ಇನ್ಸ್​ಪೆಕ್ಟರ್ ವಿಜಯ್ ಕುಮಾರ್ ಹಿರೇಮಠ ಮತ್ತು ಸಿಬ್ಬಂದಿ ಮೊಹಮ್ಮದ್ ರಫಿ ಮೇಲೆ ಸುಮಾರು 45ಕ್ಕೂ ಹೆಚ್ಚು ಜನರಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆ ಮೇ 19ರಂದು ರಾತ್ರಿ ನಡೆದಿದೆ.

ಇದನ್ನೂ ಓದಿ: Crime News: ಮನೆಕೆಲಸದವಳ ಮೇಲೆ ಹಲ್ಲೆ ನಡೆಸಿ, ಕೂದಲು ಕತ್ತರಿಸಿದ ಮಾಲೀಕರು!

ಮುದುಕಪ್ಪ ಅಳ್ಳಳ್ಳಿ ತೋಟದ ಮನೆಯಲ್ಲಿ ನಕಲಿ ಮದ್ಯ ಸಂಗ್ರಹ ಮಾಡಿಡಲಾಗಿತ್ತು. ಇದನ್ನು ಸಾಗಿಸುವ ವೇಳೆಯಲ್ಲಿ ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಹನುಮಂತರಾಯ ಸಾಹುನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸ್ಥಳದಲ್ಲಿ 40 ಬಾಕ್ಸ್ ನಕಲಿ ಮದ್ಯ ಪತ್ತೆಯಾಗಿದೆ. ಸಾಹುನನ್ನ ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ, ಆಕ್ರೋಶಗೊಂಡ ಸುಮಾರು 45ಕ್ಕೂ ಹೆಚ್ಚು ಜನರಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಸಾಹು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಹಲ್ಲೆಯಲ್ಲಿ ಕೈಜೋಡಿಸಿದ್ದ ಇಬ್ಬರು ಆರೋಪಿಗಳಾದ ಲಕ್ಷ್ಮಣ ಮತ್ತು ರೇವಣಸಿದ್ಧನನ್ನು ಪೊಲೀಸರು ಬಂಧಿಸಿದ್ದು, ಸುಮಾರು 40ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಸಿಲಾಗಿದೆ. ಅಲ್ಲದೆ, ತಪ್ಪಿಸಿಕೊಂಡಿರುವ ಸಾಹುನ ಬಂಧನಕ್ಕೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದಾಗ ಧಾರವಾಡದಲ್ಲಿ ಭೀಕರ ಅಪಘಾತ; 9 ಜನರು ಸಾವು, 4 ಜನರ ಸ್ಥಿತಿ ಗಂಭೀರ

ಇದನ್ನೂ ಓದಿ: PM Modi: ವಿದೇಶ ಪ್ರವಾಸಕ್ಕೆ ತೆರಳುವಾಗ ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವ ಪ್ರಧಾನಿ ಮೋದಿ; ಕಾರಣವೇನು? 

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ