Varamahalakshmi: ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಜೋರು: ಖರೀದಿ ಭರಾಟೆಗೆ ಮಳೆ, ಬೆಲೆ ಏರಿಕೆಯ ಕಡಿವಾಣ
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವಾಲಯ ಹೊರಭಾಗದಲ್ಲೂ ಹಾಗೂ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
ಬೆಂಗಳೂರು: ನಾಡಿನಾದ್ಯಂತ ಇಂದು ಸಂಭ್ರಮದ ವರಮಹಾಲಕ್ಷ್ಮೀ (Varamahalakshmi) ಹಬ್ಬವಿದ್ದು, ಸಿಲಿಕಾನ್ ಸಿಟಿ ಜನರು ವರಮಹಾಲಕ್ಷ್ಮೀ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಹಿನ್ನಲೆ ಕೆ.ಆರ್ ಮಾರ್ಕೆಟ್ನಲ್ಲಿ ಹಬ್ಬದ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದು, ಹೂ, ಹಣ್ಣು, ತರಕಾರಿಯನ್ನು ಜನರು ಖರೀದಿಸುತ್ತಿದ್ದಾರೆ. ಹಬ್ಬದ ಸಂಭ್ರಮದಿಂದಾಗಿ ಮಾರ್ಕೆಟ್ನಲ್ಲಿ ಜನ ಸಾಗರ ಹಿನ್ನೆಲೆ ಕೆ.ಆರ್ ಮಾರ್ಕೆಟ್ನ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದ ಒಂದುವಾರದಿಂದ ಸಿಲಿಕಾನ್ ಸಿಟಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಹಿನ್ನಲೆ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕೆ.ಆರ್ ಮಾರ್ಕೇಟ್ನಲ್ಲಿ ಇಂದು ಹೂವು ಹಣ್ಣುಗಳ ದರ ಹೀಗಿದೆ.
ಇಂದಿನ ಹೂವುಗಳ ಬೆಲೆ
ಮಲ್ಲಿಗೆ ಒಂದು ಮಾರು 210, ಕನಕಾಂಬರ ಒಂದು ಮಾರು 320 kg, ಸೇವಂತಿಗೆ 400 kg, ಗುಲಾಬಿ – 410 kg, ಸುಗಂಧರಾಜ 110 kg, ಚೆಂಡು ಹೂವು 80 kg.
ಇಂದಿನ ಹಣ್ಣುಗಳ ಬೆಲೆ
ಸೇಬು 180 kg, ದಾಳಿಂಬೆ 150 kg, ಮೂಸಂಬಿ 100 kg, ಆರೆಂಜ್ 220 kg, ಸಪೋಟ 200 kg, ಸೀಬೆಹಣ್ಣು 100 kg, ಏಲಕ್ಕಿ ಬಾಳೆಹಣ್ಣು 80 kg, ದ್ರಾಕ್ಷಿ 200-220 kg.
ಅಗತ್ಯ ವಸ್ತುಗಳ ಬೆಲೆ
ಮಾವಿನ ಎಲೆ 20 – ಕಟ್ಟು, ಬಾಳೆ ಕಂಬ – 50, ಬೇವಿನ ಸೊಪ್ಪು – 20 – ಕಟ್ಟು, ತುಳಸಿ ತೋರಣ – 50 – ಮಾರು, ಬೆಲ್ಲ (ಅಚ್ಚು / ಉಂಡೆ) – 70 – 80 ರೂ. ಆಗಿದೆ.
ಗೊರವನಹಳ್ಳಿಯಲ್ಲಿ ವಿಶೇಷ ಪುಷ್ಪಾಲಂಕಾರ
ತುಮಕೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವಾಲಯ ಹೊರಭಾಗದಲ್ಲೂ ಹಾಗೂ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಿದ್ದು, ಮುಂಜಾನೆಯೇ ದೂರದೂರದಿಂದ ಮಳೆಯ ಆತಂಕದ ನಡುವೆಯೂ ಭಕ್ತರು ಆಗಮಿಸುತ್ತಿದ್ದಾರೆ. ಮಹಾಲಕ್ಷ್ಮಿ ದೇವಾಲಯ ಟ್ರಸ್ಟ್ ವತಿಯಿಂದ ಸಕಲ ಸಿದ್ದತೆ ಮಾಡಿದ್ದಕೊಂಡಿದ್ದು, ಬೆಳಿಗ್ಗೆ 6 ಗಂಟೆಯಿಂದ ಪಂಚಾಮೃತ ಅಭಿಷೇಕ ಆರಂಭ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರಿಗೆ ಅಚ್ಚುಮೆಚ್ಚಿನ ಹಬ್ಬವಾಗಿರುವ ವರಮಹಾಲಕ್ಷ್ಮಿ ಹಬ್ಬ.
ದೇವಾಲಯ ಕಡೆಯಿಂದ ಬರುವ ಮುತ್ತೈದೆ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಗುವುದು. ಜೊತೆಗೆ ಮದುವೆಯಾಗದ ಯುವತಿಯರಿಗೆ ದೇವಾಲಯ ವತಿಯಿಂದ ಲಕ್ಷ್ಮಿ ದೇವರ ಮುಂದೆ ಇಟ್ಟು ಪೂಜಿಸಿ ಕರಿಮಣಿ ನೀಡಲಿದ್ದಾರೆ. ಕರಿಮಣಿ ತೆಗೆದುಕೊಂಡು ಹೋಗಿ ಮನೆಯ ದೇವರ ಕೊಣೆಯಲ್ಲಿ ಇಟ್ಟು 48 ದಿನ ಪೂಜೆ ಮಾಡಿದ್ರೇ ಮದುವೆಯಾಗುವ ಪ್ರತೀತಿ ಇದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಟ್ರಸ್ಟ್ ಕಡೆಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಭಕ್ತರು ಪುನೀತರಾದರು.
Published On - 9:01 am, Fri, 5 August 22