ನಾಳೆ ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ: ಕೆ.ಆರ್.ಮಾರ್ಕೆಟ್ನಲ್ಲಿ ಹೂವು, ಹಣ್ಣು ಖರೀದಿ ಜೋರು
ವರಮಹಾಲಕ್ಷ್ಮೀ ಹಬ್ಬ ಹಿನ್ನಲೆ ಕೆ.ಆರ್ ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಕೆ.ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ ನಡೆದಿದೆ. ನಗರದ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದೆ.
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬ ಹೆಸರೇ ಹೇಳುವಂತೆ ಬೇಡಿದ ವರ ಕರುಣಿಸುವ ಮಹಾಲಕ್ಷ್ಮೀ. (Varamahalakshmi) ಈ ಹಬ್ಬ ಅಥವಾ ವ್ರತ ಆಚರಿಸುವುದರಿಂದ ತಾಯಿ ಲಕ್ಷ್ಮಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರವಾಗಬಹುದು. ಇನ್ನೂ ವರಮಹಾಲಕ್ಷ್ಮೀ ಹಬ್ಬ ಹೆಣ್ಮಕ್ಕಳಿಗೆ ಮೆಚ್ಚಿನ ಹಬ್ಬವೆಂದು ಹೇಳಬಹುದು. ಈ ಹಬ್ಬಕಾಗಿಯೇ ಅವರು ಅಂದವಾಗಿ ರೆಡಿಯಾಗಿ ಮನೆ ತುಂಬಾ ಓಡಾಡುತ್ತಿರುತ್ತಾರೆ. ಈ ಹಬ್ಬಕ್ಕಾಗಿ ಮನೆ ಎರಡು ವಾರಗಳ ಮುಂಚೆಯೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ನಾಳೆ ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವಿದ್ದು, ಸಡಗರದ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಸಿಟಿ ಜನರು ಮುಂದಾಗಿದ್ದಾರೆ.
ಇದನ್ನೂ ಓದಿ; National Mango Day 2022: ಇಂದು ರಾಷ್ಟ್ರೀಯ ಮಾವು ದಿನ, ಹಣ್ಣುಗಳ ರಾಜನ ಬಗ್ಗೆ ಒಂದಿಷ್ಟು ಅರಿಯೋಣ ಬನ್ನಿ
ವರಮಹಾಲಕ್ಷ್ಮೀ ಹಬ್ಬ ಹಿನ್ನಲೆ ಕೆ.ಆರ್ ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಕೆ.ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ ನಡೆದಿದೆ. ನಗರದ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದ್ದು, ಕೆ.ಆರ್ ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಹಬ್ಬದ ವಸ್ತುಗಳನ್ನ ಕೊಳ್ಳಲು ಜನ ಬ್ಯುಸಿಯಾಗಿದ್ದಾರೆ. ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದ್ದಾರೆ.
ಇದನ್ನೂ ಓದಿ; 5G Service: ಆಗಸ್ಟ್ನಿಂದ ಭಾರತದಲ್ಲಿ ಏರ್ಟೆಲ್ 5G ಸೇವೆ: ಮೊದಲ ಗುತ್ತಿಗೆ ಎರಿಕ್ಸನ್ ಪಾಲು
ದರದಲ್ಲಿ ಕೊಂಚ ಏರಿಕೆ:
ಕಳೆದ ಮೂರು ದಿನಕ್ಕೆ ಹೋಲಿಸಿದರೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಹಣ್ಣುಗಳಲ್ಲಿ 30-40 ಏರಿಕೆಯಾದರೆ, ಹೂವುಗಳಲ್ಲಿ 40- 50 ರೂ ಏರಿಕೆಯಾಗಿದೆ. ದರ ಕೊಂಚ ಏರಿಕೆಯಾಗಿದ್ರು ಹಬ್ಬದ ಪರ್ಚೆಸಲ್ಲಿ ಸಿಲಿಕಾನ್ ಸಿಟಿ ಮಂದಿ ಬ್ಯುಸಿಯಾಗಿದ್ದಾರೆ. ಕೋವಿಡ್ ಹಿನ್ನಲೆ ಕಳೆದೆರಡು ಮೂರು ವರ್ಷದಿಂದ ಹಬ್ಬ ಆಚರಿಸದ ಜನರಿಗೆ ಈ ಬಾರಿ ಹಬ್ಬ ಜೋರು ಮಾಡುವ ಉತ್ಸಾಹದಲ್ಲಿದ್ದಾರೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್
ಮಲ್ಲಿಗೆ ಒಂದು ಮಾರು 200 ಕನಕಾಂಬರ ಒಂದು ಮಾರು 300 kg ಸೇವಂತಿಗೆ 400 kg ಗುಲಾಬಿ – 410 kg ಸುಗಂಧರಾಜ 110 kg ಚೆಂಡು ಹೂವು 80 kg
ಇಂದಿನ ಹಣ್ಣುಗಳ ಬೆಲೆ
– ಸೇಬು 180 kg – ದಾಳಿಂಬೆ 150 kg – ಮೂಸಂಬಿ 100 kg – ಆರೆಂಜ್ 220 kg – ಸಪೋಟ 200 kg – ಸೀಬೆಹಣ್ಣು 100 kg – ಏಲಕ್ಕಿ ಬಾಳೆಹಣ್ಣು 80 kg – ದ್ರಾಕ್ಷಿ 200-220 kg
ಅಗತ್ಯ ವಸ್ತುಗಳ ಬೆಲೆ
– ಮಾವಿನ ಎಲೆ 20 – ಕಟ್ಟು – ಬಾಳೆ ಕಂಬ – 50 – ಬೇವಿನ ಸೊಪ್ಪು – 20 – ಕಟ್ಟು – ತುಳಸಿ ತೋರಣ – 50 – ಮಾರು – ಬೆಲ್ಲ (ಅಚ್ಚು / ಉಂಡೆ) – 70 – 80 kg
Published On - 8:48 am, Thu, 4 August 22