ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟ; 221 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

| Updated By: sandhya thejappa

Updated on: Dec 15, 2021 | 10:46 AM

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ.

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟ; 221 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಡಿ.12ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯುತ್ತದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ. ಇಂದು (ಡಿಸೆಂಬರ್ 15) ಫಲಿತಾಂಶ ಹೊರಬೀಳಲಿದ್ದು, ರಾಜ್ಯ ಒಕ್ಕಲಿಗ ಸಂಘದ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಅಂತ ಕಾದು ನೋಡಬೇಕಿದೆ. ಏಕ ಕಾಲದಲ್ಲಿ ಸುಮಾರು 389 ಬೂತ್ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆಗೆ 5 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ. ಪಾರದರ್ಶಕವಾಗಿ ಕೌಂಟಿಂಗ್ ನಡೆಸಲು ಪ್ರತಿಯೊಂದು ಟೇಬಲ್ಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.

ರಾಜ್ಯಾದ್ಯಂತ ಇಂದು ಒಟ್ಟು 221 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 221 ಅಭ್ಯರ್ಥಿಗಳ ಪೈಕಿ ಒಟ್ಟು 35 ಅಭ್ಯರ್ಥಿಗಳ ಆಯ್ಕೆಯಾಗುತ್ತಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಹೊಸೊರು ನಗರ ಸೇರಿ 141 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 141 ಅಭ್ಯರ್ಥಿಗಳ ಫೈಕಿ 15 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ.

ಎಲ್ಲಾ ಭೂತ್​ಗಳು ಟೇಬಲ್ ಮೇಲೆ ಸೆಟಲ್ ಆಗಿದೆ.  ಸಿಬ್ಬಂದಿಗಳು, ಕೌಂಟಿಂಗ್ ಏಜೆಂಟ್ಸ್ ಬರುತ್ತಿದ್ದಾರೆ. 389 ಮತಗಟ್ಟೆಗಳು ಹಾಗೂ ಟೇಬಲ್​ಗಳಿವೆ. ಎಲ್ಲಾ ಟೇಬಲ್​ಗಳಲ್ಲೂ ಸಿ ಸಿ ಕ್ಯಾಮರಾ ಅಳವಡಿಸಲಾಗಿದೆ. 141  ಅಭ್ಯರ್ಥಿಗಳ ಫಲಿತಾಂಶವನ್ನ ಸೂಕ್ಷ್ಮವಾಗಿ ಗಮನಿಸಬೇಕು. 3 ಗಂಟೆಯ ಒಳಗೆ ರಿಸಲ್ಟ್ ಫೈನಲ್ ಆಗತ್ತೆ . ಮುನ್ನಡೆ ಮತ್ತು ಹಿನ್ನಡೆ ಗೊತ್ತಾಗಲ್ಲ. ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟವಾಗಲಿದೆ. ಕೆಲ ಜಿಲ್ಲೆಗಳಿಗಲ್ಲಿ ಮತ ಎಣಿಕೆ ಆರಂಭವಾಗಿದೆ. 15 ದಿನಗಳ ಒಳಗೆ ಅಧ್ಯಕ್ಷ ಸ್ಥಾನದ ಆಯ್ಕೆ‌ ಪ್ರಕ್ರಿಯೆ ಮುಗಿಸಬೇಕು. ಇವತ್ತಿನ ಫಲಿತಾಂಶದ ಬಳಿಕ ಅಧ್ಯಕ್ಷ ಸ್ಥಾನದ ಆಯ್ಕೆಗೆ ದಿನಾಂಕ‌ ನಿಗದಿ ಮಾಡಲಾಗುತ್ತದೆ ಅಂತ ಚುನಾವಣಾಧಿಕಾರಿ ರವೀಂದ್ರ ಹೇಳಿಕೆ ನೀಡಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ 141, ಮೈಸೂರು 9, ಮಂಡ್ಯ 16, ಹಾಸನ 11, ತುಮಕೂರು 7, ಚಿತ್ರದುರ್ಗ 5, ಕೋಲಾರ ಮತ್ತು ಚಿಕ್ಕಬಳ್ಳಾಪುರ 12, ದಕ್ಷಿಣ ಕನ್ನಡ ಮತ್ತು ಉಡುಪಿ 3, ಕೊಡಗು 4, ಶಿವಮೊಗ್ಗ ಮತ್ತು ಉತ್ತರ ಕನ್ನಡ 9, ಚಿಕ್ಕಮಗಳೂರು 4 ಸೇರಿ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 1,049 ಮತಕೇಂದ್ರಗಳಿದ್ದು 5,20,721 ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಭಾರಿ ಕುತೂಹಲ ಹುಟ್ಟಿಸಿರುವ ಒಕ್ಕಲಿಗ ಸಂಘದ ಚುನಾವಣೆ 5 ವರ್ಷಗಳಿಗೊಮ್ಮೆ ನಡೆಯುತ್ತೆ. ಮೂರು ವರ್ಷಗಳಿಂದ ಅಧ್ಯಕ್ಷರಿಲ್ಲದೇ ಆಡಳಿತಾಧಿಕಾರಿ ನೇತೃತ್ವದಲ್ಲಿ ಒಕ್ಕಲಿಗ ಸಂಘ ಮುಂದುವರೆದಿತ್ತು. ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಸ್ಥಾನಕ್ಕೆ ಚುನಾವಣೆ ನಡೆದಿದೆ.

ಇದನ್ನೂ ಓದಿ

Pushpa: The Rise: ‘ಪುಷ್ಪ ಚಿತ್ರ ನಾಲ್ಕು ಸಿನಿಮಾಗಳಿಗೆ ಸರಿಸಮ’: ಅಲ್ಲು ಅರ್ಜುನ್ ಹೀಗೆ ಹೇಳಿದ್ದೇಕೆ?

ಮೂಲವ್ಯಾಧಿ ನರಕ ಯಾತನೆಯಿಂದ ಹೊರಬರಲು ಇವುಗಳನ್ನು ಸೇವಿಸಿ

Published On - 9:10 am, Wed, 15 December 21