ಸಂವಿಧಾನದ ರಕ್ಷಣೆಗಾಗಿ ‘ವೋಟ್ ಚೋರಿ’ ಅಭಿಯಾನ: ಸುರ್ಜೇವಾಲ
ಪುಲಕೇಶಿನಗರ ವಿಧಾನಸಭಾ ಕಾಂಗ್ರೆಸ್ ವತಿಯಿಂದ ಮತಕಳ್ಳತನ ವಿರುದ್ದ ಸಹಿ ಸಂಗ್ರಹ, ಜನಜಾಗೃತಿ ಅಭಿಯಾನ ನಡೆಯಿತು. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಗಲ್ಲಿ ಗಲ್ಲಿಯಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇರೆಪಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಈ ವೇಳೆ ಕರೆ ಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 03: ಮತಗಳ್ಳತನ ಎಲ್ಲಿಯೂ ಆಗಬಾರದು. ಆ ನಿಟ್ಟಿನಲ್ಲಿ ನಾವು ಚುನಾವಣೆ ಆಯೋಗದ ಕಣ್ಣು ತೆರೆಸಬೇಕಿದ್ದು, ಸಂವಿಧಾನದ ರಕ್ಷಣೆ ಗಾಗಿ ಮತಗಳ್ಳತನ ಅಭಿಯಾನ ಮಾಡುತ್ತಿದ್ದೇವೆ. ಮತ ಹಾಕೋದು ಪ್ರತಿಯೊಬ್ಬರ ಅಧಿಕಾರವಾಗಿದೆ. ಇದರಲ್ಲಿ ಮೋಸ ಆಗಬಾರದು. ದೇಶದಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು, ಅದನ್ನೇ ಕಾಂಗ್ರೆಸ್ (Congress) ಮಾಡುತ್ತಿದ್ದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಪುಲಕೇಶಿನಗರ ವಿಧಾನಸಭಾ ಕಾಂಗ್ರೆಸ್ ವತಿಯಿಂದ ನಡೆದ ‘ವೋಟ್ ಚೋರಿ’ ಸಹಿ ಸಂಗ್ರಹ ಅಭಿಯಾನಕ್ಕೆ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಮತಕಳ್ಳತನ ವಿರುದ್ದ ದೊಡ್ಡ ಹೋರಾಟ ಮಾಡಲಾಗುತ್ತಿದೆ. ದೇಶದಲ್ಲಿ ಹೊಸಕ್ರಾಂತಿಯ ಅಲೆಯನ್ನು, ಬದಲಾವಣೆಯನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಗಲ್ಲಿ ಗಲ್ಲಿಯಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇರೆಪಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ಅನಿವಾರ್ಯ ಎಂದು ಸುರ್ಜೇವಾಲ ಅಭಿಪ್ರಾಯಪಟ್ಟರು.
📍पुलकेशीनगर, बेंगलुरु, कर्नाटक
बीजेपी एक साजिश के तहत ‘वोट चोरी’ कर जनादेश चुरा रही है। यह सीधे सीधे ‘संविधान और लोकतंत्र पर हमला’ है।
आज भाजपा तथा ‘बंधक’ चुनाव आयोग द्वारा किए गए ‘वोट चोरी’ के खिलाफ बेंगलुरु के पुलकेशीनगर में हस्ताक्षर अभियान में शामिल हुआ।
श्री राहुल गांधी… pic.twitter.com/0MyhOXYQln
— Randeep Singh Surjewala (@rssurjewala) October 3, 2025
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಹಿಂದೆ ನಮ್ಮ ಶಾಸಕರನ್ನ ಖರೀದಿ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲಾಗಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಬಿಜೆಪಿ ಸುಳ್ಳು ಭರವಸೆ ನೀಡುತ್ತಿದೆ. ಇವೆಲ್ಲವನ್ನ ರಾಹುಲ್ ಗಾಂಧಿಯವರು ಬಹಿರಂಗ ಮಾಡೋ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಶಕ್ತಿಯುತವಾಗಿದ್ದು, ವೋಟ್ ಚೋರಿ ಕೆಲಸ ನಿಲ್ಲಿಸಬೇಕಿದೆ ಎಂದಿದ್ದಾರೆ. ಶಾಸಕ ಶ್ರೀನಿವಾಸ, ಎಂಎಲ್ಸಿ ಸಲೀಂ ಅಹ್ಮದ್ ಸೇರಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 pm, Fri, 3 October 25




