ವೋಟರ್​ ಐಡಿ ಹಗರಣ: ಮತದಾರರ ಮಾಹಿತಿ ಸಂಗ್ರಹಿಸಲು ಬಿಎಲ್​ಒಗಳಿಗೆ ಹಣ ನೀಡುತ್ತಿದ್ದ ಚಿಲುಮೆ ಸಂಸ್ಥೆ

ಚಿಲುಮೆ ಸಂಸ್ಥೆ ಸರ್ಕಾರಿ ಸಂಸ್ಥೆಗಳ ಬಿಎಲ್​ಒಗಳಿಗೂ ಹಣ ಪಾವತಿಸಿ, ಮತದಾರರ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ.

ವೋಟರ್​ ಐಡಿ ಹಗರಣ: ಮತದಾರರ ಮಾಹಿತಿ ಸಂಗ್ರಹಿಸಲು ಬಿಎಲ್​ಒಗಳಿಗೆ ಹಣ ನೀಡುತ್ತಿದ್ದ ಚಿಲುಮೆ ಸಂಸ್ಥೆ
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Nov 22, 2022 | 9:37 AM

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವೋಟರ್​ ಐಡಿ ಪರಿಷ್ಕರಣೆಯಲ್ಲಿನ ಅಕ್ರಮ (Bengaluru Voter list refinement Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಚಿಲುಮೆ ಸಂಸ್ಥೆ ಸರ್ಕಾರಿ ಸಂಸ್ಥೆಗಳ ಬಿಎಲ್​ಒ (BLO) ಗಳಿಗೂ ಹಣ ಪಾವತಿಸಿ, ಮತದಾರರ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಚಿಲುಮೆ ಸಂಸ್ಥೆಗೆ ಮತದಾರರಿಗೆ ಅರಿವು ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಕೆಲಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ಒಪ್ಪಿಕೊಂಡಿತ್ತು.

ಆದರೆ ಇದೀಗ ಚಿಲುಮೆ ಸಂಸ್ಥೆ ಬಿಎಲ್​ಒಗಳಿಗೆ ಹಣ ನೀಡಿ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಮತದಾರರ ಮಾಹಿತಿ ಸಂಗ್ರಹಣೆಗೆ 1 ವೋಟರ್​ ಐಡಿಗೆ 25 ರೂ. ಹೊಸ ವೋಟರ್​ ಐಡಿ ಮಾಹಿತಿ ನೀಡಿದರೆ 13 ರೂಪಾಯಿ ನಿಗದಿ ಮಾಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸರ್ಕಾರದಿಂದ ಬಿಎಲ್​ಒಗಳಿಗೆ ವಾರ್ಷಿಕ 6 ಸಾವಿರ ಗೌರವಧನ ನೀಡಲಾಗುತ್ತದೆ. ಹೀಗಾಗಿ ಇದರಿಂದ ಅಸಮಾಧಾನಗೊಂಡಿದ್ದರು. ಹಾಗೇ ಬಿಎಲ್​ಒಗಳು ಫೀಲ್ಡ್​ಗೆ ಬಾರದಂತೆ ಚಿಲುಮೆ ಸಂಸ್ಥೆ ಬಿಎಲ್​ಒಗಳಿಗೆ ಸೂಚಿಸಿತ್ತು.

ಇಷ್ಟೇ ಅಲ್ಲದೇ ಚಿಲುಮೆ ಬಿಎಲ್​​ಒಗಳ ಯೂಸರ್ ನೇಮ್, ಪಾಸ್​ವರ್ಡ್​ ಪಡೆದಿತ್ತು. ಇದರಿಂದ ಮತದಾರರ ಐಡಿ ಡಿಲೀಟ್​​, ಹೊಸ ಮತದಾರರನ್ನು ಸೇರ್ಪಡೆ ಮಾಡುತ್ತಿತ್ತು. ಚಿಲುಮೆ ಸಂಸ್ಥೆ ಮತದಾರನ ಹೆಸರು, ವೋಟರ್​ ಐಡಿ ನಂಬರ್​, ಮನೆ ನಂಬರ್​, ಬೂತ್​ ನಂಬರ್ ಸೇರಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತಿತ್ತು.

ಕೊನೆಗೂ ಸಮೀಕ್ಷಾ ಆ್ಯಪ್​ ಓಪನ್ ಮಾಡಿದ ಟೆಕ್ನಿಕಲ್​ ಟೀಂ

ಮತದಾರರ ಮಾಹಿತಿ ಸಂಗ್ರಹಿಸಲು, ಬಳಸಾಲಾಗಿದ್ದ ಡಿಜಿಟಲ್ ಸಮೀಕ್ಷಾ ಆ್ಯಪ್​ನ್ನು ಸರ್ಕಾರಿ ಟೆಕ್ನಿಕಲ್​ ಟೀಂ ಓಪನ್​ ಮಾಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಆ್ಯಪ್​ ಸರ್ವರ್ ​ಡೌನ್​ ಮಾಡಿದ್ದರು. ಸದ್ಯ ಆ್ಯಪ್​ ಓಪನ್ ಆಗಿದ್ದು, ಆ್ಯಪ್​ನಲ್ಲಿದ್ದ ಪ್ರತಿ ಅಂಶವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇನ್ನು ಆ್ಯಪ್​ನಲ್ಲಿ ಹಲವು ಕ್ಷೇತ್ರಗಳ ಮತದಾರರ ಮಾಹಿತಿ ಇರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ರವಿಕುಮಾರ್​ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada