ಕನ್ನಡವನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಸಚಿವ ಡಾ.ಅಶ್ವತ್ಥ್ ನಾರಾಯಣ

| Updated By: preethi shettigar

Updated on: Jan 24, 2022 | 3:42 PM

ಕನ್ನಡ ಭಾಷೆ ಬೆಳೆಯಬೇಕು ಎಂದು ನಮ್ಮ ಸರ್ಕಾರ ಒತ್ತು ನೀಡಿದೆ. ನಮ್ಮ ಸರ್ಕಾರದಿಂದ ಪಿಟಿಷನ್ ಕೂಡ ಹಾಕಿದ್ದೇವೆ. ಇಂಗ್ಲೀಷನ್ನೇ ತಲೆ ಮೇಲೆ ಹೊತ್ತು ಮೆರೆಸುತ್ತಿರುವಾಗ ಸಂಸ್ಕೃತಕ್ಕೆ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ.

ಕನ್ನಡವನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಸಚಿವ ಡಾ.ಅಶ್ವತ್ಥ್ ನಾರಾಯಣ
ಸಚಿವ ಅಶ್ವತ್ಥ್ ನಾರಾಯಣ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕನ್ನಡ ಭಾಷೆಯ ಮೇಲೆ ನಮ್ಮ ರಾಜ್ಯ ನಿರ್ಮಾಣ ಆಗಿರುವುದು. ಕನ್ನಡವನ್ನು ಯಾವುದೇ ಕಾರಣಕ್ಕೂ ಕೈಬಿಡುವ ಮಾತಿಲ್ಲ. ಅದರ ಜತೆಗೆ ಸಂಸ್ಕೃತ ಭಾಷೆ ಬೆಳೆಸಲು ಒತ್ತು ನೀಡಲಾಗಿದೆ ಅಷ್ಟೇ. ಅಂಬೇಡ್ಕರ್ ಕೂಡ ಸಂಸ್ಕೃತ ಭಾಷೆ ಬೆಳೆಸುವಂತೆ ಮನವಿ ಮಾಡಿದ್ದರು. ಎಲ್ಲಾ ರೀತಿಯ ಬೇಡಿಕೆ ಇದೆ. ಕೊವಿಡ್(COVID 19) ಹಿನ್ನೆಲೆ ಪ್ರಕಾಶನ ಮುಚ್ಚಿಹೋಗಿದೆ. ಅದಕ್ಕಾಗಿ ಪ್ರತೀ ವರ್ಷ 2-3ಕೋಟಿ ರೂ. ನೀಡಬೇಕು. 700 ಎಕರೆಯಲ್ಲಿ ಕನ್ನಡ ವಿಶ್ವವಿದ್ಯಾಲಯ (Kannada University) ನಿರ್ಮಾಣ ಆಗಿದೆ. ಕನ್ನಡಕ್ಕೆ ಹೆಚ್ಚು ಒತ್ತನ್ನು ನೀಡಿರುವ ಏಕೈಕ ಸರ್ಕಾರ ನಮ್ಮದು ಎಂದು ಸಂಸ್ಕೃತ ವಿವಿ ವಿರೋಧಿಗಳಿಗೆ ಸಚಿವ ಡಾ.ಅಶ್ವತ್ಥ್ ನಾರಾಯಣ(Ashwath Narayana) ಟಾಂಗ್​ ನೀಡಿದ್ದಾರೆ.

ಕನ್ನಡ ಕಡ್ಡಾಯ ಮಾಡುವಂತಿಲ್ಲ ಎಂದು ಕೋರ್ಟ್ ಇಂಟ್ರಿಮ್ ಮಾಡಿದೆ. ನಾವೇ ಕಡ್ಡಾಯ ಮಾಡಬೇಕು ಎಂದು ಒತ್ತು ನೀಡಿದ್ದೇವೆ. ಕನ್ನಡ ಭಾಷೆ ಬೆಳೆಯಬೇಕು ಎಂದು ನಮ್ಮ ಸರ್ಕಾರ ಒತ್ತು ನೀಡಿದೆ. ನಮ್ಮ ಸರ್ಕಾರದಿಂದ ಪಿಟಿಷನ್ ಕೂಡ ಹಾಕಿದ್ದೇವೆ. ಇಂಗ್ಲೀಷನ್ನೇ ತಲೆ ಮೇಲೆ ಹೊತ್ತು ಮೆರೆಸುತ್ತಿರುವಾಗ ಸಂಸ್ಕೃತಕ್ಕೆ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಮಹಿಳಾ ವಿವಿಯನ್ನು ಮುಚ್ಚಲ್ಲ: ಡಾ.ಅಶ್ವತ್ಥ್ ನಾರಾಯಣ

ವಿಜಯಪುರ ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ. ರಾಜಕೀಯಕ್ಕಾಗಿ ಕೆಲವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಹಿಳಾ ವಿವಿಯನ್ನು ಮುಚ್ಚಲ್ಲ. ವಿಕೇಂದ್ರಿಕರಣ ಮಾಡಬೇಕು ಎನ್ನುವುದು ಉದ್ದೇಶ. ಜನ ಪ್ರತಿನಿಧಿಗಳು, ವಿಶ್ವವಿದ್ಯಾಲಯ ಮುಖ್ಯಸ್ಥರ ಜೊತೆಗೆ ಕೇವಲ ಕನ್ಸಲ್ಟೇಷನ್ ಮಾಡುತ್ತಿದ್ದೇವೆ ಅಷ್ಟೇ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಚಾರ

ಇದು ಸಿಎಂ ಬೊಮ್ಮಾಯಿಯವರ ನಿರ್ಧಾರಕ್ಕೆ ಬಿಟ್ಟಿದ್ದು. ಯಾರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಯಾರನ್ನು ಬಿಡಬೇಕು ಎಂದು ಸಿಎಂ ನಿರ್ಧರಿಸುತ್ತಾರೆ. ಇದರ ಬಗ್ಗೆ ನಾನೇನೂ ಮಾತನಾಡಲ್ಲ ಎಂದು  ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಸರ್ಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ: ಸಚಿವ ಸಿಎನ್​ ಅಶ್ವತ್ಥ್​ ನಾರಾಯಣ್​

ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆ ಪಡೆಯದಿದ್ದರೆ ಪರಿಹಾರವಿಲ್ಲ: ಸಚಿವ ಜೆಸಿ ಮಾಧುಸ್ವಾಮಿ

 

Published On - 3:33 pm, Mon, 24 January 22