AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲ್ ಬಾಗ್​ನಲ್ಲಿ ಪಶ್ಚಿಮ ಘಟ್ಟದ ಕಾಡು ನಿರ್ಮಾಣ; ಆರು ಎಕರೆ ಜಾಗದಲ್ಲಿ 300ಕ್ಕೂ ಹೆಚ್ಚು ಬಗೆಯ ಗಿಡಗಳು

ಪಶ್ಚಿಮ ಘಟ್ಟದ ಕಾಡುಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಅಗೋಲ್ಲ ಹೇಳಿ. ಪ್ರತಿಯೊಬ್ಬರು ಇಷ್ಟ ಪಡ್ತಾರೆ. ನಗರ ಅಭಿವೃದ್ಧಿಯತ್ತ ಸಾಗುತ್ತಿದ್ದಂತೆ ಈ ಮರಗಿಡಗಳು ಅಳಿವಿನಂಚಿನಲ್ಲಿವೆ. ಆದ್ರೀಗಾ ನಮ್ಮ ಸಿಲಿಕಾನ್ ಸಿಟಿಯಲ್ಲಿ ಈ ಫಾರೆಸ್ಟ್ ನಿರ್ಮಾಣವಾಗುತ್ತಿದೆ.‌ ಎಲ್ಲಿ ಎಂಬ ಮಾಹಿತಿಗಾಗಿ ಈ ವರದಿ ಓದಿ.

ಲಾಲ್ ಬಾಗ್​ನಲ್ಲಿ ಪಶ್ಚಿಮ ಘಟ್ಟದ ಕಾಡು ನಿರ್ಮಾಣ; ಆರು ಎಕರೆ ಜಾಗದಲ್ಲಿ 300ಕ್ಕೂ ಹೆಚ್ಚು ಬಗೆಯ ಗಿಡಗಳು
ಕಾಡು ನಿರ್ಮಾಣಕ್ಕೆ ಗಿಡಗಳನ್ನು ನೆಡಲಾಗಿದೆ.
Poornima Agali Nagaraj
| Updated By: ಆಯೇಷಾ ಬಾನು|

Updated on: Mar 02, 2024 | 10:40 AM

Share

ಬೆಂಗಳೂರು, ಮಾರ್ಚ್.02: ನಿತ್ಯ ಹರಿದ್ವರ್ಣದ ಕಾಡುಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಅಗೋಲ್ಲ ಹೇಳಿ.‌ ದಟ್ಟ ಅಡವಿಯ ಮಧ್ಯೆ ಸ್ವಲ್ಪ ಹೊತ್ತು ಇದ್ದು ಬಂದ್ರೆ ಸಾಕು ಅಂತ ಎಷ್ಟೋ‌ ಜನ ಪಶ್ಚಿಮ ಘಟ್ಟಗಳು, ಮಲೆನಾಡು, ಊಟಿ, ಕೇರಳ, ಅಗೊಂಬೆ ಸೇರಿದಂತೆ ವಿವಿಧೆಡೆ ಪ್ರವಾಸಗಳಿಗೆ ಹೋಗಿ ಬರ್ತಾರೆ. ಆದ್ರೆ ಇನ್ಮುಂದೆ ಈ ವೆಸ್ಟರ್ನ್ ಗಾರ್ಡ್ಗಳನ್ನ (Western Ghats) ನೋಡ್ಬೇಕು ಅಂದ್ರೆ ದೂರದ ಊರಿಗಳಿಗೆ ಹೋಗ್ಬೇಕಿಲ್ಲ.‌ ಬದಲಾಗಿ ನಗರದ ಸಸ್ಯಕಾಶಿ ಲಾಲ್ ಬಾಗ್ (Lal Bagh) ಬಂದ್ರೆ ಸಾಕು. ಇಲ್ಲಿ ನೀವು ಕಾಡಿನ ಅನುಭವ ಪಡೆಯಬಹುದು.

ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿ ಮಾರ್ಪಾಡಾಗುತ್ತಿದೆ. ಈ ಮಧ್ಯೆ ಹಸಿರೀಕರಣಕ್ಕೆ ಹೆಚ್ಚು ಒತ್ತು ಕೊಡುವುದೇ ಕಡಿಮೆಯಾಗಿ ಹೋಗಿದೆ.‌ ಸದ್ಯ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಪಾಳು ಬಿದ್ದ ಜಾಗದಲ್ಲಿ 6 ಎಕರೆಯ ಕಲ್ಲು ಬಂಡೆಯಂತಹ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನ ಹಾಕಿದ್ದು, ಪಶ್ಚಿಮ ಘಟ್ಟದ ರೀತಿ ಅಭಿವೃದ್ದಿ ಪಡಿಸಲು ಮುಂದಾಗಿದೆ. ಈಗಾಗಲೇ ಈ ಗಿಡಗಳನ್ನ ಹಾಕಿ 5 ರಿಂದ 6 ತಿಂಗಳು‌ ಕಳೆದಿದ್ದು, ಇನ್ನು ಐದು ವರ್ಷದಲ್ಲಿ ಈ ಗಿಡಗಳು ದೊಡ್ಡದಾಗಿ ಬೆಳೆಯಲಿವೆ.

ಇದನ್ನೂ ಓದಿ: ಅಬ್ದುಲ್​ ಕಲಾಂ ಸ್ಪೂರ್ತಿಯಿಂದ ಹುಟ್ಟಿದ ರಾಮೇಶ್ವರಂ ಕೆಫೆಯಿಂದಲೇ ಅಂಬಾನಿ ಮಗನ ಮದ್ವೆಗೆ ಊಟ

ದಟ್ಟ ಕಾಡಿನಂತೆಯೇ ನಿರ್ಮಾಣವಾಗಲಿವೆ. ಇನ್ನು ಇಲ್ಲಿ ಉಳುಗೇರಿ, ಪ್ರುತ್ರಂಜೀವ, ಎಣ್ಣೆ ಮರ, ಗಾರ್ಸಿನಿಯಾ, ಮ್ಯಾಂಗೋ ಸ್ಟೀನ್, ನವಿಲಾಡಿ, ದೂಪದ ಮರ, ಡಯಾಸ್ ಸ್ಪರಸ್, ಪಾಲ್ಸ ಹಣ್ಣು,‌ ಸ್ರೋಪ್ ಪೈನ್, ಅಂಟುವಾಳ, ಮಡ್ಡಿ ದೀಪದ ಮರ, ಸ್ಫೈಸ್ ಮರಗಳು, ರುದ್ರಾಕ್ಷಿ ಮರ, ತಾರೇ ಮರ, ಆರ್​ಡಿಸಿಯಾ ಎಮಿಲಿಸಿಸ್‌ ಸೇರಿದಂತೆ ಹಲವು ಅಪರೂಪದ ಗಿಡಗಳನ್ನು ಹಾಕಲಾಗಿದೆ. ಈ ಗಿಡಗಳು ಅಳಿವಿನಂಚಿನಲ್ಲಿದ್ದು, ಹೊಸ ವೈವಿಧ್ಯತೆಯನ್ನ ಸೃಷ್ಟಿಮಾಡಲು ತೋಟಾಗಾರಿಕಾ ಇಲಾಖೆ ಮುಂದಾಗಿದೆ.

ಈ ಫಾರೆಸ್ಟ್ ನಿರ್ಮಿಸಲು ಒಟ್ಟು 45 ಲಕ್ಷದಷ್ಟು ಖರ್ಚು ಮಾಡಿದ್ದು, ಸಧ್ಯ ಬಾಟಾನಿಕಲ್ ಗಾರ್ಡಾನ್ ಬಗ್ಗೆ ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ನೋಡುವುದಕ್ಕೆ ಅವಾಕಾಶ ಮಾಡಿಕೊಡಲಾಗುತ್ತಿದೆ.‌ ಮುಂದಿನ ದಿನಗಳ‌ಲ್ಲಿ ಇಲ್ಲಿ ಮರಗಳು ದೊಡ್ಡದಾದ ನಂತರ ಪ್ರವಾಸಿಗರು ನೋಡಲು ಅವಕಾಶ ಮಾಡಿಕೊಡಲಾಗುತ್ತೆ. ಪಕ್ಷಿಗಳು ಜೀವಿಸಲು ಅನುಕೂಲವಾಗುವ ರೀತಿಯಲ್ಲಿ ‌ಪಶ್ಚಿಮ ಘಟ್ಟದ ಕಾಡನ್ನ ನಿರ್ಮಿಸಲಾಗುತ್ತಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ