ನಿರ್ಮಾಣ ಹಂತದ ಕಾಮಗಾರಿ ವೇಳೆ ನಿಗೂಢ ಸ್ಪೋಟ: ವೈಟ್ ಫೀಲ್ಡ್ ಪೊಲೀಸರಿಂದ ಮೂವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2023 | 8:51 PM

ಜೂನ್​ 6ರಂದು ರಾತ್ರಿ 11.30ರ ಸುಮಾರಿಗೆ ನಿರ್ಮಾಣ ಹಂತದ ಕಾಮಗಾರಿ ವೇಳೆ ನಿಗೂಢ ಸ್ಫೋಟಗೊಂಡು ಮೂವರಿಗೆ ಗಾಯ ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸರಿಂದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ.

ನಿರ್ಮಾಣ ಹಂತದ ಕಾಮಗಾರಿ ವೇಳೆ ನಿಗೂಢ ಸ್ಪೋಟ: ವೈಟ್ ಫೀಲ್ಡ್ ಪೊಲೀಸರಿಂದ ಮೂವರ ಬಂಧನ
ಬಂಧಿತರು
Follow us on

ಬೆಂಗಳೂರು: ಕಾಮಗಾರಿ ವೇಳೆ ಅಕ್ರಮವಾಗಿ ಜಿಲೆಟಿನ್​ ಸ್ಫೋಟಿಸಿದ್ದ ಮೂವರನ್ನು ಪೊಲೀಸರು ಸೆರೆ (arrest) ಹಿಡಿದಿದ್ದಾರೆ. ಮಂಜುನಾಥ ರೆಡ್ಡಿ, ಲೋಕೇಶ್, ಸಾಕೇತ್ ಬಂಧಿತರು. ಟಿವಿ9 ಗೆ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಸ್.ಗಿರೀಶ್​ ಪ್ರತಿಕ್ರಿಯೆ ನೀಡಿದ್ದು, ಜೂನ್​ 6ರಂದು ರಾತ್ರಿ 11.30ರ ಸುಮಾರಿಗೆ ನಿಗೂಢ ಸ್ಫೋಟವಾಗಿತ್ತು. ಶ್ರೀನಿವಾಸ, ಮಣಿಕಂಠ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರು ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದರು.

ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಸಹೋದರ, ನಾದಿನಿಯ ಕಿರುಕುಳ: ಮಗಳಿಗೆ ನೇಣುಬಿಗಿದು ಅದೇ ಹಗ್ಗಕ್ಕೆ ಕೊರಳೊಡ್ಡಿದ ತಾಯಿ

ಹಳೆ ವೈಷಮ್ಯ: ದುಷ್ಕರ್ಮಿಗಳಿಂದ ಚಾಕು ಇರಿತ, ಯುವಕ ಸಾವು

ಹುಬ್ಬಳ್ಳಿ: ಹಳೆ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳಿಂದ ಚಾಕು ಇರಿದು ಯುವಕ ಸಾವನ್ನಪ್ಪಿರುವಂತಹ ಘಟನೆ ಹಳೇ ಹುಬ್ಬಳ್ಳಿಯ ಸಿದ್ಧಿಕಿ ಕಲ್ಯಾಣ ಮಂಟಪ ಎದುರು ನಡೆದಿದೆ. ಸಹೋದರನ ಮೇಲಿನ ವೈಷಮ್ಯ ಹಿನ್ನೆಲೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಖಾದರ್ ಬೆಪಾರಿ(26) ಮೃತ ವ್ಯಕ್ತಿ. ಕಾರ್ಯಕ್ರಮಕ್ಕೆ ತೆರಳಿದ್ದಾಗ ಹಲ್ಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಖಾದರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನಿಗಿದ್ದಾನೆ. ಘಟನಾ ಸ್ಥಳಕ್ಕೆ ಕಸಬಾ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ಬಿದ್ದ ಬೈಕ್​: ಕೊಚ್ಚಿಹೋದ ಇಬ್ಬರು ಸವಾರರು

ಆಫರ್​ನಲ್ಲಿ ಮೊಬೈಲ್ ಕೊಡೋದಾಗಿ ಹೇಳಿ ವಂಚನೆ

ಆನೇಕಲ್​: ಆಫರ್​ನಲ್ಲಿ ಮೊಬೈಲ್ ಕೊಡೋದಾಗಿ ಹೇಳಿ ವಂಚನೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್​ನಲ್ಲಿ ನಡೆದಿದೆ. ಪ್ರಕಾಶ್ ವಂಚನೆಗೊಳಗಾದ ಯುವಕ. ನಿಮ್ಮ ನಂಬರ್​ಗೆ ಆಫರ್ ಇದೇ ಮೊಬೈಲ್ ಕಡಿಮೆ ಬೆಲೆಗೆ ಕೊಡೋದಾಗಿ ಹೇಳಿ ವಂಚಿಸಿದ್ದಾರೆ. ಹದಿನೈದು ಸಾವಿರ ಬೆಲೆಯ ವಿವೋ y22 ಮೊಬೈಲ್ ಕೇವಲ 1500 ರೂಗೆ ಕೊಡೋದಾಗಿ ಫೋನ್​ ಮಾಡಿದ್ದಾರೆ. ಇದನ್ನು ನಂಬಿದ ಯುವಕ ಮೊಬೈಲ್ ಬುಕ್ ಮಾಡಿದ್ದ.

ಕೊರಿಯರ್ ಮೂಲಕ ಬಂದ ಬಾಕ್ಸ್ ಓಪನ್ ಮಾಡಿದಾಗ ನಕಲಿ ಎಂಐ ಪವರ್ ಬ್ಯಾಂಕ್​ ಇಟ್ಟು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮತ್ತೆ ಅದೇ ನಂಬರ್​ಗೆ ಫೋನ್​ ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದೇ ರೀತಿ ಸಾಕಷ್ಟು ಜನರಿಗೆ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:41 pm, Mon, 10 July 23