ಸಧ್ಯಕ್ಕೆ ಕಡಿಮೆಯಾಗೋದಿಲ್ಲ ಟೊಮೆಟೊ ಬೆಲೆ; ಇನ್ನೂ 2 ತಿಂಗಳ ಕಾಲ ಶತಕ ಬಾರಿಸಲಿದೆ

ಈಗಾಗಲೇ ಟೊಮೆಟೊ ಶತಕ ಬಾರಿಸಿದೆ. ತರಕಾರಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಟೊಮೆಟೊ ಬದಲು ಹುಣಸೆ ಸೇರಿದಂತೆ ಇತರೆ ಪದಾರ್ಥವನ್ನ ಬಳಸಲು ಶುರು ಮಾಡಿದ್ದಾರೆ. ಅದರಂತೆ ಸಧ್ಯಕ್ಕೆ ಹೊಸ ಕ್ರಾಫ್ಟ್ ಬರುವವರೆಗೂ ಟೊಮೆಟೊ ಬೆಲೆ ಕಡಿಮೆ ಆಗೋದಿಲ್ಲವೆಂದು ರೈತರು ಹೇಳುತ್ತಿದ್ದಾರೆ.

ಸಧ್ಯಕ್ಕೆ ಕಡಿಮೆಯಾಗೋದಿಲ್ಲ ಟೊಮೆಟೊ ಬೆಲೆ; ಇನ್ನೂ 2 ತಿಂಗಳ ಕಾಲ ಶತಕ ಬಾರಿಸಲಿದೆ
ಟೊಮೆಟೊ ಬೆಲೆ ಏರಿಕೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 8:07 AM

ಬೆಂಗಳೂರು: ಈಗಾಗಲೇ ಟೊಮೆಟೊ(Tomato) ಶತಕ ಬಾರಿಸಿದೆ. ತರಕಾರಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಟೊಮೆಟೊ ಬದಲು ಹುಣಸೆ ಸೇರಿದಂತೆ ಇತರೆ ಪದಾರ್ಥವನ್ನ ಬಳಸಲು ಶುರು ಮಾಡಿದ್ದಾರೆ. ಅದರಂತೆ ಸಧ್ಯಕ್ಕೆ ಹೊಸ ಕ್ರಾಫ್ಟ್ ಬರುವವರೆಗೂ ಟೊಮೆಟೊ ಬೆಲೆ ಕಡಿಮೆ ಆಗೋದಿಲ್ಲವೆಂದು ರೈತರು ಹೇಳುತ್ತಿದ್ದಾರೆ. ಹೌದು ಹೊಸ ಬೆಳೆ ಬಂದ ಮೇಲೆ ಮಾತ್ರ ಬೆಲೆ ಕಡಿಮೆಯಾಗುವ ಸಂಭವವಿದ್ದು, ಈ ಹೊಸ ಬೆಳೆ ಬರಬೇಕು ಅಂದ್ರೆ, ಒಂದರಿಂದ ಎರಡು ತಿಂಗಳಾದ್ರು ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ.

ಟೊಮೆಟೊ ಬೆಲೆ ಏರಿಕೆಗೆ ಕಾರಣಗಳೇನು? ಇಲ್ಲಿವೆ

ಟೊಮೆಟೊ  ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಮಳೆ ಕೊರತೆ, ಟೊಮೆಟೊ ಬೆಳೆಯ ವ್ಯವಸಾಯದ ವೇಳೆ ಮಳೆಯ ಕೊರತೆ ಅಧಿಕವಾಗಿತ್ತು. ಇದೇ ವೇಳೆ ಟೊಮೆಟೊದಲ್ಲಿ ಎಲೆರೋಗವು ಕಾಣಿಸಿಕೊಂಡಿತ್ತು. ಈ ಎರಡು ಪ್ರಮುಖ ಕಾರಣಗಳಿಂದ ಈ ಬಾರಿ ಕಡಿಮೆ ಬೆಳೆ ಬೆಳೆದಿದ್ದಾರೆ. ಅಲ್ಲದೇ ಉತ್ತರ ಪ್ರದೇಶ, ಚತ್ತೀಸ್ ಘಡ್, ಡೆಲ್ಲಿಯಲ್ಲಿಯೂ ಟೊಮೆಟೊ  ಬೆಳೆ ಈ ವರ್ಷ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಿಂದ ನಮ್ಮ‌ ರಾಜ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕರ್ನಾಟಕದಿಂದ ಈ ಭಾಗಗಳಿಗೆ ಟೊಮೆಟೊ  ರಪ್ತು ಮಾಡಲಾಗುತ್ತಿದೆ. ಈ ವರ್ಷ ಟೊಮೆಟೊಗೆ  ಹೊರರಾಜ್ಯಗಳಿಂದಲೂ ಅತ್ಯಧಿಕ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ಟೊಮೆಟೊ  ಸಿಗದ ಕಾರಣ ಹೆಚ್ಚಿನ ಬೆಲೆ ನಿಗಧಿ ಪಡಿಸಿ, ವ್ಯಾಪಾರ‌ ಮಾಡಲಾಗುತ್ತಿದೆ. ಅಲ್ಲದೇ ಪ್ರತಿಭಾರಿ ನಮ್ನ ರಾಜ್ಯಕ್ಕೆ ನಾಸಿಕ್ ಇಂದ ಟೊಮೆಟೊ  ಬರುತ್ತಿತ್ತು. ಆದ್ರೆ, ಈ ಬಾರಿ ನಾಸಿಕ್‌ನಲ್ಲಿಯು ಬೆಳೆ ಬಂದಿಲ್ಲ. ಹೀಗಾಗಿ ನಾಸಿಕ್ ,ತಮಿಳುನಾಡು, ಚನೈಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ:Tomato Price : ಈ ರಾಜ್ಯದಲ್ಲಿ 250ರೂ.ಗೆ ತಲುಪಿದ ಒಂದು ಕೆಜಿ ಟೊಮೆಟೊ ಬೆಲೆ

ಟೊಮೆಟೊ ಬೆಲೆ ಏರಿಕೆಗೆ ಕಾರಣವಾಯ್ತಾ? ಅಷಾಡ ಮಾಸ

ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಪ್ರತಿವರ್ಷ ವ್ಯಾಪಾರ ಕಡಿಮೆಯಾಗುತ್ತೆ. ವರ್ಷ ಅಧಿಕ ಮಾಸ ಬಂದಿರುವ ಹಿನ್ನೆಲೆ ಒಂದು ತಿಂಗಳುಗಳ ಕಾಲ ಯಾವುದೇ ಮದುವೆ, ಕಾರ್ಯಕ್ರಮಗಳು ನಡೆಯೋದಿಲ್ಲ. ಇದನ್ನ ಗಮನದಲ್ಲಿಟ್ಟುಕೊಂಡು ಕಡಿಮೆ ಬೆಳೆ ಬೆಳೆದಿದ್ದಾರಾ ರೈತರು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಪ್ರತಿವರ್ಷ ಜೂನ್ – ಜೂಲೈ ತಿಂಗಳಲ್ಲಿ ಅಷಾಡ ಮಾಸದಲ್ಲಿ ಟೊಮೆಟೊ ಹೆಚ್ಚು ಬೆಳೆದು ನಷ್ಟ ಮಾಡಿಕೊಂಡಿದ್ದೆ ಹೆಚ್ಚು.‌ ಟೋಮಾಟೊ ವ್ಯಾಪಾರವಾಗದೇ ರಸ್ತೆಗೆ ಎಸೆದು ಹೋದ ಎಷ್ಟೋ ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಈ ವರ್ಷ ಈ ರೀತಿಯಾಗಿ ಆಗಬಾರದು ಎನ್ನುವ ಕಾರಣಕ್ಕೆ ರೈತರು ಹೆಚ್ಚಿನದ್ದಾಗಿ ಬೆಳೆಯದೇ, ಬೇಡಿಕೆಗೆ ತಕ್ಕಷ್ಟು ಟೊಮೆಟೊ ಸಿಗದ ಹಿನ್ನೆಲೆ ಬೆಲೆ ಏರಿಕೆಯಾಗಿರುವ ಸಾಧ್ಯತೆಯಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ