AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಕ್ಯಾಂಟೀನ್​ಗೆ ಹೊಸ ಸಹಾಯವಾಣಿ; ಆಹಾರ, ಸ್ವಚ್ಛತೆ ನೋಡಿಕೊಳ್ಳಲು ಬಿಬಿಎಂಪಿಯಿಂದ ಅಧಿಕಾರಿ ನೇಮಕ

ಪ್ರತಿ ಇಂದಿರಾ ಕ್ಯಾಂಟೀನ್​ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇಂದಿರಾ ಕ್ಯಾಂಟೀನ್​ಗೆ ಹೊಸ ಸಹಾಯವಾಣಿ; ಆಹಾರ, ಸ್ವಚ್ಛತೆ ನೋಡಿಕೊಳ್ಳಲು ಬಿಬಿಎಂಪಿಯಿಂದ ಅಧಿಕಾರಿ ನೇಮಕ
ಇಂದಿರಾ ಕ್ಯಾಂಟೀನ್
Shivaraj
| Updated By: ಆಯೇಷಾ ಬಾನು|

Updated on: Jul 11, 2023 | 9:17 AM

Share

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸಾಗಿರುವ ಇಂದಿರಾ ಕ್ಯಾಂಟೀನ್(Indira Canteen)​ ಸಾವಿರಾರು ಬಡ ಜನರ ಹೊಟ್ಟೆ ತುಂಬಿಸುತ್ತಿದೆ. ಇಂದಿರಾ ಕ್ಯಾಂಟಿನ್​ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ(Siddaramaiah) ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಇಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ(BBMP) ಮುಂದಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್​ನಲ್ಲಿ ಹಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಈಗ ಪ್ರತಿ ಇಂದಿರಾ ಕ್ಯಾಂಟೀನ್​ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಂದಿರಾ ಕ್ಯಾಂಟೀನ್​ನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸ್ವಚ್ಚತೆ ಬಗ್ಗೆ ನಿಗಾ ಇಡಲು ತಮ್ಮದೇ ಅಧಿಕಾರಿ ನೇಮಿಸಲು ಬಿಬಿಎಂಪಿ ಪಾಲಿಕೆ ಮುಂದಾಗಿದೆ. ಇದರ ಜೊತೆಗೆ ಹೊಸ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಇನ್ಮಂದೆ ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲಿದೆ ವೆರೈಟಿ ಊಟ: ಇಲ್ಲಿದೆ ಹೊಸ ಮೆನು

ಇಂದಿರಾ ಕ್ಯಾಂಟೀನ್​ಗೆ ಸಹಾಯವಾಣಿ

1533 ಸಹಾಯವಾಣಿ ಮೂಲಕ ಜನರಿಗೆ ಸೇವೆ ನೀಡಲು ಹೊಸ ಸಹಾಯವಾಣಿ ರೂಪಿಸಲಾಗಿದ್ದು ಎಲ್ಲಾ ಇಂದಿರಾ ಕ್ಯಾಂಟೀನ್​ಗೂ ಸಹಾಯವಾಣಿ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಇದರ ಜೊತೆಗೆ ರಸ್ತೆ ಬದಿ ಕಸ ಸುರಿಯುವುದನ್ನ ತಡೆಯಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಕಸ ಸುರಿಯುವವರ ಮೇಲೆ ನಿಗಾ ವಹಿಸಲು ಪಾಲಿಕೆ ಮಾರ್ಷಲ್ಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ತಂಡ ರಚನೆ ಮಾಡಿದೆ. ರಸ್ತೆ ಬದಿ ಕಸ ಹಾಕುವವರ ಮೇಲೆ ನಿಗಾ, ಬ್ಲಾಕ್ ಸ್ಪಾಟ್, ರಸ್ತೆ ಗುಂಡಿ ಮೇಲೂ ಈ ತಂಡ ನಿಗಾ ವಹಿಸಲಿದೆ. ತ್ಯಾಜ್ಯ ವಿಲೇವಾರಿ ಮಾಡೋ ಬಿಬಿಎಂಪಿ ಕಾಂಪ್ಯಾಕ್ಟರ್​ಗಳ ಮೇಲೂ ನಿಗಾ ಇಡಲಾಗುತ್ತೆ. ಪ್ರಾಯೋಗಿಕವಾಗಿ ಒಂದು ವಲಯದಲ್ಲಿ ಯೋಜನೆ ಆರಂಭ ಮಾಡಲು ಪಾಲಿಕೆ ಮುಂದಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ