ಬೆಂಗಳೂರು: ರಾಜ್ಯದಲ್ಲಿ ಮುಂಗಾರು(Monsoon) ಮಳೆ ವಿಳಂಬದಿಂದ ಟೊಮ್ಯಾಟೋ(Tomato) ಬೆಳೆಯಲಾಗದೆ, ಹಾಗೂ ಕೆಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗಿ ಮಣ್ಣಿನ ತೇವಾಂಶದಿಂದಲೇ ಬೆಳೆ ಕೊಳೆತ ಕಾರಣದಿಂದಾಗಿಯೋ ಟೊಮ್ಯಾಟೋ ಬೆಲೆ ಕೈಗೆಟುಕದಷ್ಟು ಗಗನಕ್ಕೇರಿದೆ. ನಮ್ಮಲ್ಲಿ ಮಾಡುವ ಪ್ರತಿದಿನದ ಅಡುಗೆಗೆ ಟೊಮ್ಯಾಟೋ, ಈರುಳ್ಳಿ ಬೇಕೇ ಬೇಕು. ಆದ್ರೆ ದಿಢೀರನೆ ಟೊಮ್ಯಾಟೋ ದರ ದಶಕದ ಗಡಿ ತಲುಪಿದ್ದು ಜನ ಸಾಮಾನ್ಯರಿಗೆ ಹೊರೆಯಾಗಿದೆ. ಜೊತೆಗೆ ತರಕಾರಿ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ಗಳನ್ನೂ ಊಟ-ತಿಂಡಿ ಬೆಲೆ ಏರಿದೆ.
ರಾಜ್ಯದಲ್ಲಿ ತರಕಾರಿ ದರ ಏರಿಕೆಯಾಗಿದ್ದು ವಿಶೇಷವಾಗಿ ಟೊಮ್ಯಾಟೋ ದರ ಗಮನರ್ಹ ರೀತಿಯಲ್ಲಿ ಏರಿಕೆ ಕಂಡಿದೆ. ಒಂದು ವಾರದ ಹಿಂದೆ 40-50 ರೂಗೆ ಸಿಗುತ್ತಿದ್ದ ಟೊಮ್ಯಾಟೋ ಈಗ 100-120ರೂ ಆಗಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಟೊಮ್ಯಾಟೋ ಬೆಳೆಯುವ ಜಿಲ್ಲೆ ಕೋಲಾರ. ಹಾಗೂ ಏಷ್ಯಾದ 2ನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮ್ಯಾಟೋ 1,100 ರೂ.ಗೆ ಮಾರಾಟವಾಗಿದೆ. ಇನ್ನು ಯಾದಗಿರಿಯಲ್ಲಿ 20 ಕೆಜಿ ಟೊಮ್ಯಾಟೋ 2400 ರೂಗೆ ಮಾರಾಟವಾಗಿದೆ. ಈ ವರ್ಷ ಟೊಮ್ಯಾಟೋ ಬೆಳೆ ಕಡಿಮೆಯಾಗಿದ್ದು, ಹವಾಮಾನ ವೈಪರೀತ್ಯದಿಂದ ಉತ್ಪಾದನೆಯೂ ಕುಸಿದಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ ಎಂದು ಕೋಲಾರದ ಮಂಡಿಯಲ್ಲಿ ಟೊಮ್ಯಾಟೋ ಮಾರಾಟ ಮಾಡಲು ಬಂದಿದ್ದ ರೈತ ತಿಳಿಸಿದರು.
ಇದನ್ನೂ ಓದಿ: ತರಕಾರಿ ಕೊಳ್ಳಲಾಗದೆ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ; ಉತ್ತಮ ಬೆಲೆ ಸಿಕ್ಕಿದ್ದಕ್ಕೆ ರೈತರ ಮುಖದಲ್ಲಿ ಮಂದಹಾಸ
ಮುಖ್ಯವಾಗಿ ಕೋಲಾರದಲ್ಲಿ ಈ ವರ್ಷ ಟೊಮ್ಯಾಟೋ ಬಿತ್ತನೆಯು ಕಡಿಮೆಯಾಗಿದೆ. ಕಳೆದ ತಿಂಗಳು ಟೊಮ್ಯಾಟೋ ದರವು ಕುಸಿದಿತ್ತು. ಇದರಿಂದ ಬೇಸರಗೊಂಡಿದ್ದ ಅದೆಷ್ಟೋ ರೈತರು ಟೊಮ್ಯಾಟೋ ಮೇಲೆ ಟ್ಯಾಕ್ಟರ್ ಹತ್ತಿಸಿದ್ದರು. ಆದ್ರೆ ಈಗ ಬೆಲೆ ಏರಿಕೆಯಾಗಿದೆ. ಬೇಡಿಕೆ ಹೆಚ್ಚಾಗಿದೆ. ಆದ್ರೆ ಉತ್ಪಾದನೆ ಇಲ್ಲದ ಕಾರಣಕ್ಕೆ ಕೈ ಕೈ ಹಿಜಿಕಿಕೊಳ್ಳುವಂತಾಗಿದೆ. ಸದ್ಯ ಕೋಲಾರದಲ್ಲಿ ಹಲವಾರು ಕೃಷಿಕರು ಈ ವರ್ಷ ಬೀನ್ಸ್ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದಾರೆ.
Tomato prices soar in Kanpur, Uttar Pradesh
“We are selling tomatoes at Rs 100 kg. Due to rain, the prices have increased,” says a tomato seller pic.twitter.com/UBjxS89XPu
— ANI (@ANI) June 27, 2023
ಇನ್ನು ಕರ್ನಾಟಕ ಅಷ್ಟೇ ಅಲ್ಲದೆ ಇತರೆ ರಾಜ್ಯಗಳಲ್ಲಿಯೂ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ. ಉತ್ತರ ಪ್ರದೇಶ, ಭೂಪಾಲ್ನಲ್ಲಿ ಕೆಜಿಗೆ 100 ರೂ ಇದೆ. ದೆಹಲಿಯಲ್ಲಿ 80 ರೂ ಇದೆ. ಪಂಜಾಬ್ ಹಾಗೂ ಜೈಪುರದಲ್ಲಿ 60 ರೂ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ