Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಸೇಫ್ಟಿ ಐಲ್ಯಾಂಡ್​ನ ಮೊದಲ ಸಕ್ಸಸ್ ಸ್ಟೋರಿ ಹೇಳಿದ ಕಮಿಷನರ್​​ ದಯಾನಂದ​

ಬೆಂಗಳೂರು ನಗರದಲ್ಲಿನ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪೊಲೀಸರು ಹೊಸ ತಂತ್ರಜ್ಞಾನವೊಂದು ನಗರಕ್ಕೆ ಪರಿಚಯಿಸಿದ್ದಾರೆ. ಸಂಕಷ್ಟದಲ್ಲಿರುವವರು ತುರ್ತು ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲು ಬೆಂಗಳೂರು ಪೊಲೀಸರು ನಗರದಾದ್ಯಂತ ಸುಮಾರು 30 "ಸುರಕ್ಷತಾ ದ್ವೀಪ" (Safety Island) ಸಾಧನಗಳನ್ನು ಸ್ಥಾಪಿಸಿದ್ದಾರೆ.

Bengaluru News: ಸೇಫ್ಟಿ ಐಲ್ಯಾಂಡ್​ನ ಮೊದಲ ಸಕ್ಸಸ್ ಸ್ಟೋರಿ ಹೇಳಿದ ಕಮಿಷನರ್​​ ದಯಾನಂದ​
Safety Island
Follow us
ವಿವೇಕ ಬಿರಾದಾರ
| Updated By: Digi Tech Desk

Updated on:Jun 27, 2023 | 2:49 PM

ಬೆಂಗಳೂರು: ನಗರದಲ್ಲಿ ಅಪರಾಧ (Crime) ಪ್ರಕರಣಗಳು ಹೆಚ್ಚುತ್ತಿತ್ತು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು (Bengaluru Police) ಹೊಸ ತಂತ್ರಜ್ಞಾನವೊಂದು ನಗರಕ್ಕೆ ಪರಿಚಯಿಸಿದ್ದಾರೆ. ಸಂಕಷ್ಟದಲ್ಲಿರುವವರು ತುರ್ತು ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗದೆ ಇದ್ದರೇ ಈ ತಂತ್ರಜ್ಞಾನದ ಮೊರೆ ಹೋಗಬಹುದಾಗಿದೆ. ಅದು “ಸುರಕ್ಷತಾ ದ್ವೀಪ” (Safety Island). ಬೆಂಗಳೂರು ಪೊಲೀಸರು ನಗರದಾದ್ಯಂತ ಸುಮಾರು 30 ಯಂತ್ರಗಳನ್ನು ಸ್ಥಾಪಿಸಿದ್ದಾರೆ. ವಿಶೇಷವಾಗಿ ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯವಾದ ಪ್ರದೇಶಗಳಲ್ಲಿ ಪೊಲೀಸರು ಈ ಮಷೀನ್​​ಗಳನ್ನು​ ಅಳವಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ದಯಾನಂದ​ ಅವರು ಮಾತನಾಡಿ ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಸೇಫ್ಟಿ ಐಲ್ಯಾಂಡ್ ಹಾಗೂ ಸಿಸಿಟಿವಿಗಳನ್ನು ಹಾಕಲಾಗಿದೆ. ನಗರದ ವಿವಿಧ ಭಾಗದಲ್ಲಿ ಸೇಫ್ಟಿ ಐಲ್ಯಾಂಡ್ ಸ್ಥಾಪಿಸಲಾಗಿದೆ. ಕ್ಯಾಮೆರಾ ಮೂಲಕ ಹಾಗು ಮಾತನಾಡಿ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಾಗುತ್ತೆ. ಇದನ್ನು ಜಾರಿಗೆ ತಂದ ಮೇಲೆ ಮೊದಲ ಬಾರಿಗೆ ಒರ್ವ ವಿದೇಶಿ ಪ್ರಜೆಗೆ ಸಹಾಯವಾಗಿದೆ. ಇದು ಸೇಫ್ಟಿ ಐಲ್ಯಾಂಡ್​ನ ಮೊದಲ ಸಕ್ಸಸ್ ಸ್ಟೋರಿ ಎಂದು ಹೇಳಿದುರ.

ಒಂದು ದಿನ ಆಟೋದಲ್ಲಿ ವಿದೇಶಿ ಪ್ರಜೆ ಪ್ರಯಾಣಿಸಿದ್ದರು. ಆಟೋದಲ್ಲಿ  ವಿದೇಶಿ  ಕರೆನ್ಸಿ, ಲ್ಯಾಪ್ ಟಾಪ್ ಹಾಗೂ ಇತರ ವಸ್ತುಗಳನ್ನು ಮರೆತಿದ್ದರು. ಆಗ ವಿದೇಶಿ ಪ್ರಜೆ ಸೇಫ್ಟಿ ಐಲ್ಯಾಂಡ್ ಮೂಲಕ ಮಾಹಿತಿ ನೀಡಿದರು. ನಂತರ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಬಳಿಕ ಆಟೋ ಡ್ರೈವರ್ ಅನ್ನು ಪತ್ತೆ ಮಾಡಿ ವಸ್ತುಗಳನ್ನು ಮರಳಿ ನೀಡಲಾಗಿದೆ. ಮೊಬೈಲ್ ಸಹ ಇಲ್ಲದೆ ಸೇಫ್ಟಿ ಐಲ್ಯಾಂಡ್ ಉಪಯೋಗ ಮಾಡಿದ್ದಾರೆ. ಇನ್ನು ಪ್ರಕರಣ ನಡೆದು  ಕೆಲವೇ ಘಂಟೆಯಲ್ಲಿ ಪತ್ತೆಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜನರ ಸುರಕ್ಷತೆಗಾಗಿ ಬಂದಿದೆ ಸೇಫ್ಟಿ ಐಲ್ಯಾಂಡ್, ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ

ಸೇಫ್ಟಿ ಐಲ್ಯಾಂಡ್ ಸಾಧನ ಹೇಗಿರುತ್ತೆ?

ಈ (Safety Island) ನಗರದ ವಿವಿಧ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾಗಿದೆ. ಮಷೀನ್​​ ನೀಲಿ ಬಣ್ಣದಿಂದ ಕೂಡಿದ್ದು ಟೆಲಿಫೋನ್ ಬೂತ್‌ನಂತೆ ಕಾಣುತ್ತದೆ. ಯಾರಾದರೂ ತೊಂದರೆಯಲ್ಲಿದ್ದಾಗ ದೂರು ನೀಡಲು ಸಾಧ್ಯವಾಗದಿದ್ದರೇ ಅಥವಾ ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗದಿದ್ದರೇ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸುರಕ್ಷತಾ ದ್ವೀಪಗಳನ್ನು ಬಳಸಬಹುದು. ಪ್ರತಿ ಸುರಕ್ಷತಾ ದ್ವೀಪದ ಬಳಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Tue, 27 June 23