AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪಾದಿಸಲು ಸಕ್ಷಮನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್​​

ಸಂಪಾದಿಸಲು ಸಕ್ಷಮನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ, ನ್ಯಾಯಮೂರ್ತಿ ಯಾಜೆ.ಎಂ.ಖಾಜಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಸಂಪಾದಿಸಲು ಸಕ್ಷಮನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್​​
ಕರ್ನಾಟಕ ಹೈಕೋರ್ಟ್
TV9 Web
| Edited By: |

Updated on: Jul 11, 2022 | 9:31 PM

Share

ಬೆಂಗಳೂರು: ಸಂಪಾದಿಸಲು ಸಕ್ಷಮನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ, ನ್ಯಾಯಮೂರ್ತಿ ಯಾಜೆ.ಎಂ.ಖಾಜಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಪತ್ನಿಯಿಂದ ಶಾಶ್ವತ ಜೀವನಾಂಶ ಕೋರಿ ಪತಿ  ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ದಂಪತಿ 1994ರಿಂದಲೂ ಬೇರೆಯಾಗಿ ವಾಸಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಕೆಲಸ ಬಿಟ್ಟಿರುವುದಾಗಿ ಪತ್ನಿಯಿಂದ ಜೀವನಾಂಶ ಕೋರಿ ಪತಿ ಅರ್ಜಿ ಸಲ್ಲಿಸಿದ್ದನು.

ಪತ್ನಿ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದು 8000 ಸಂಬಳವಿತ್ತು. ಈ ಮುಂಚೆ ಉಡುಪಿಯ ಕೋರ್ಟ್ ವಿಚ್ಛೇದನ ನೀಡಿ ಜೀವನಾಂಶ ನಿರಾಕರಿಸಿತ್ತು. ಜೀವನಾಂಶ ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದನು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ 15 ವರ್ಷದ ಮಗನನ್ನು ಪತ್ನಿಯೇ ನೋಡಿಕೊಳ್ಳುತ್ತಿದ್ದಾಳೆ. ಪತಿ ಸಂಪಾದಿಸಲು ಸಕ್ಷಮವಾದ ದೇಹದಾರ್ಢ್ಯ ಹೊಂದಿದ್ದಾನೆ. ಅಲ್ಲದೇ ಪತಿಗೆ ಪಿತ್ರಾರ್ಜಿತ ಮನೆ, ಆಸ್ತಿಯಲ್ಲಿ ಪಾಲಿರುವ ಹಿನ್ನೆಲೆ ಜೀವನಾಂಶ ಕೋರಿದ್ದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾವೇರಿಯ ಅವಹೇಳನ ಪ್ರಕರಣ ದಾಖಲು

ಕೊಡಗು: ಕನ್ನಡ ನಾಡಿನ ಜೀವನದಿ ಕಾವೇರಿ ನದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​​ ಹಾಕಿದ್ದ ಮಹಮ್ಮದ್ ಅಸ್ಫಾಕ್ ಎಂಬಾತನ ವಿರುದ್ಧ ಕೊಡಗಿನ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ವಿವಿಧ ಸಂಘಟನೆಗಳಿಂದ ಅಸ್ಫಾಕ್ ವಿರುದ್ಧ ದೂರು ನೀಡಲಾಗಿದೆ. ಇನ್ಸ್ಟಾಗ್ರಾಂ ನಲ್ಲಿ ಕಾವೇರಿ ಮಾತೆ ಬಗ್ಗೆ ತುಚ್ಛವಾಗಿ ಟೀಕೆ ಮಾಡಲಾಗಿತ್ತು. ಸಂಘಟನೆಗಳು ದುಷ್ಕರ್ಮಿ‌ ಬಂಧನಕ್ಕೆ ಪೊಲೀಸರಿಗೆ ಗಡುವು ನೀಡಿವೆ