ಬೆಂಗಳೂರು: ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ (Inspector) ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಪ್ರಾಪರ್ಟಿ ವಿಚಾರವಾಗಿ ಮನೆಗೆ ನುಗ್ಗಿ ದುಷ್ಕರ್ಮಿಗಳು ದಾಂದಲೆ ಮಾಡಿ, ಗಲಾಟೆ ಮಾಡಿದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ ಅಂತ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ದೂರು ನೀಡಲು ಹೋದರೂ ಇನ್ಸ್‌ಪೆಕ್ಟರ್ ಎಫ್ಐಆರ್ (FIR) ದಾಖಲಿಸಿಲ್ಲ ಅಂತ ಇಬ್ಬರು ಮಹಿಳೆಯರು ಆರೋಪಿಸಿದ್ದಾರೆ. ಪ್ರಾಪರ್ಟಿ ವಿಚಾರವಾಗಿ ಕೋರ್ಟ್ನಿಂದ ಸ್ಟೇ ಆಗಿದ್ದರೂ, ಅಕ್ರಮ ಪ್ರವೇಶಕ್ಕೆ ಇನ್ಸ್‌ಪೆಕ್ಟರ್ ಸಾಥ್ ನೀಡಿದ್ದಾರೆ ಅಂತ ಮಹಿಳೆಯರು ಆರೋಪ ಮಾಡುತ್ತಿದ್ದಾರೆ.
ವಾಣಿ ಮತ್ತು ವರ್ಲಮತಿ ಎಂಬುವವರು ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ನಿವೃತ್ತ ಯೋಧ ದಿ.ಚಿನ್ನ ಸ್ವಾಮಿ ಸೈಟ್ಗೆ ಅಕ್ರಮವಾಗಿ ಪ್ರವೇಶಿಸಿ ದುಷ್ಕರ್ಮಿಗಳು ಕಾಂಪೌಂಡ್ ಹಾನಿಗೊಳಿಸಿದ್ದಾರೆ ಎಂದು ಆರೋಪಿಸುತ್ತಿರುವ ವಾಣಿ, ಮಹೇಂದ್ರ ಎಂಬುವವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ ಇನ್ಸ್‌ಪೆಕ್ಟರ್ ನಿರ್ಲಕ್ಷ್ಯ ತೋರಿದ್ದಾರೆ ಅಂತ ಈಗ ಮತ್ತೊಂದು ದೂರು ನೀಡಲು ಮುಂದಾಗಿದ್ದಾರೆ.
ವೀಣಾ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಲು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದರು. ಆದರೆ ಇಂದು ರಜೆ ಹಿನ್ನೆಲೆ ಸೋಮವಾರ ಬರಲು ಸಿಬ್ಬಂದಿ ಸೂಚನೆ ನೀಡಿದ್ದಾರೆ.
ವಸಂತ್ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದ ಮಹಿಳೆಯರು ಈ ಹಿಂದೆಯೂ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮಹಿಳೆಯರು ದೂರು ಸಲ್ಲಿಸಿದ್ದರು. ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾಗಿ ಹೆಣ್ಣೂರು ಠಾಣೆಗೆ ಮಹಿಳೆಯರು ದೂರು ನೀಡಿದ್ದರು. ಆದರೆ ಇನ್ಸ್‌ಪೆಕ್ಟರ್ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ
Xiaomi 11T Pro 5G: ಈ 120W ಹೈಪರ್ ಚಾರ್ಜರ್ ಫೋನ್ ಖರೀದಿಸಬಹುದೇ?: ಒಮ್ಮೆ ಇಲ್ಲಿ ಗಮನಿಸಿ
ಆಸ್ಕರ್ ರೇಸ್ನಲ್ಲಿ ‘ಜೈ ಭೀಮ್’ ಮತ್ತು ‘ಮರಕ್ಕರ್’; ಭಾರತೀಯ ಚಿತ್ರಕ್ಕೆ ಈ ಬಾರಿಯಾದರೂ ಒಲಿಯುತ್ತಾ ಪ್ರಶಸ್ತಿ?
Published On - 3:38 pm, Sat, 22 January 22