AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Costliest Dog: 20 ಕೋಟಿ ರೂ. ಕೊಟ್ಟು ಶ್ವಾನ ಖರೀದಿಸಿದ ಬೆಂಗಳೂರಿಗ! ಇದರ ವಿಶೇಷತೆ ಏನು?

ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ಶ್ವಾನಗಳಿರುವ ನಗರವಂತೆ, ಇದು ನಿಮಗೆ ತಿಳಿದಿದೆಯೇ?

Costliest Dog: 20 ಕೋಟಿ ರೂ. ಕೊಟ್ಟು ಶ್ವಾನ ಖರೀದಿಸಿದ ಬೆಂಗಳೂರಿಗ! ಇದರ ವಿಶೇಷತೆ ಏನು?
Satish and Dog
TV9 Web
| Updated By: ನಯನಾ ರಾಜೀವ್|

Updated on:Jan 05, 2023 | 1:14 PM

Share

ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ಶ್ವಾನಗಳಿರುವ ನಗರವಂತೆ, ಇದು ನಿಮಗೆ ತಿಳಿದಿದೆಯೇ?

ನೀವು ಕೂಡ ನಿಮ್ಮ ಮನೆಯಲ್ಲಿ ಶ್ವಾನವನ್ನು ಸಾಕಿರಬಹುದು ಆದರೆ ಇಷ್ಟೊಂದು ದುಬಾರಿಯ ಶ್ವಾನವನ್ನು ಸಾಕಿರಲು ಸಾಧ್ಯವೇ ಇಲ್ಲ. ಏಕೆಂದರೆ  ಕಡಬೊಮ್ ಕೆನ್ನೆಲ್ಸ್​ ಸಂಸ್ಥೆ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ಪ್ರಸಿದ್ಧರು. ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿಗಳು, ಬಹಳ ವಿಶ್ವಾಸ, ಧೈರ್ಯ, , ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು, ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು 10-12 ವರ್ಷ ಬದುಕಬಹುದು.

ಸತೀಶ್ ಅವರು ಇತ್ತೀಚೆಗೆ ಬರೋಬ್ಬರಿ ರೂ.20 ಕೋಟಿ ರೂ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ ನಾಯಿ ಖರೀದಿಸಿದ್ದಾರೆ, ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಕಾಣುವುದು ವಿರಳ.

ಅಮೆರಿಕನ್ ಕೆನ್ನೆಲ್ ಕ್ಲಬ್‌ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್  ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡಲು  ಬಳಕೆ ಮಾಡುತ್ತಾರೆ ಎಂದು ಸತೀಶ್ ತಿಳಿಸಿದ್ದಾರೆ.

ಇತ್ತೀಚೆಗೆ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್‌ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿದ್ದ ಅವರು,  ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಸತೀಶ್ ಅವರು ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.1 ಕೋಟಿ ಕೊಟ್ಟು ಖರೀದಿಸಿದ್ದರಂತೆ.

ಅದೇ ರೀತಿ ಅಲಾಶ್ಕನ್ ಮಾಲಾಮುಟೆ ರೂ.8 ಕೋಟಿ, ಟಿಬೇಟನ್ ಮಾಸ್ಟಿಫ್ ರೂ.10 ಕೋಟಿ ಕೊಟ್ಟು ಖರೀದಿಸಿದ್ದರಂತೆ. ಈ ರೂ.20 ಕೋಟಿ ಬೆಲೆಯ ‘ಕಡಬೊಮ್ ಹೈದರ್’ ಈಗ ಸುಮಾರು 1.5 ವರ್ಷ ವಯಸ್ಸಿನದಾಗಿದ್ದು, ಇದನ್ನು ಹೈದ್ರಾಬಾದ್‌ನಲ್ಲಿರುವ ನಾಯಿಗಳ ಮಾರಾಟ ಮಾಡುವವರಿಂದ ಖರೀಸಿದ್ದಾರೆ.

ಹೈದರ್ ಇಷ್ಟೊಂದು ಪದಕಗಳು ಹಾಗೂ ಟ್ರೋಫಿಗಳನ್ನು ಗೆದ್ದಿರುವುದನ್ನು ನೋಡಿ ಆಶ್ಚರ್ಯವಾಯಿತು. ಕೇವಲ ಏಳು ದಿನಗಳಲ್ಲಿ ಈ ನಾಯಿ 32 ಪದಕಗಳನ್ನು ಗೆದ್ದಿದೆ. ಈ ನಾಯಿ ನೋಡಲು ಬೃಹತ್ ಗಾತ್ರವನ್ನು ಹೊಂದಿದೆ, ಆದರೆ ಬಹಳ ಸ್ನೇಹಪರ ಜೀವಿಯಾಗಿದೆ. ಪ್ರಸ್ತುತ ಇದು ನನ್ನ ಹವಾನಿಯಂತ್ರಿತ ಮನೆಯಲ್ಲಿ ನನ್ನ ಜೊತೆಯಲ್ಲೇ ಇದೆ, ಎಂದು ಸತೀಶ್ ತಿಳಿಸಿದರು.

ಸತೀಶ್ ಅವರು ಇದೇ ಜಾತಿಯ ಎರಡು ಮರಿಗಳನ್ನು ರೂ.5 ಕೋಟಿ ಕೊಟ್ಟು ಖರೀದಿಸಿದ್ದಾರಂತೆ. ನಾನು ಈ ನಾಯಿಗಳನ್ನು ಮಾರುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ. ಇವುಗಳನ್ನು ತುಂಬಾ ನಾಜೂಕಾಗಿ ನೋಡಿಕೊಳ್ಳಬೇಕಾಗುತ್ತದೆ ಹಾಗೂ ಇದರ ಆರೈಕೆ ಬಹಳ ಮುಖ್ಯ ಎಂದಿದ್ದಾರೆ.

ಅದರ ಆರೈಕೆಗಾಗಿಯೇ ಜನರನ್ನು ಮೀಸಲಿಡಲಾಗಿದೆ, ಅದಕ್ಕೆ ಆಗಾಗ  ಬ್ರಷಿಂಗ್ ಮಾಡಬೇಕಾಗುತ್ತದೆ ಹಾಗೂ ಆಗಾಗ ಅದರ ಕಿವಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು ಮತ್ತು ಉಗುರಗಳನ್ನು ಕತ್ತರಿಸುತ್ತಿರಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ನಾಯಿಯನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿಗರಿಗೆ ಪರಿಚಯಿಸಬೇಕೆಂದುಕೊಂಡಿದ್ದೆ, ಆದರೆ ಆ ಸಮಯದಲ್ಲಿ ಈ ನಾಯಿಯ ಮೈಮೇಲಿನ ಕೂದಲು ಉದುರುತಿತ್ತು. ಹಾಗಾಗಿ, ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದೆ. ಈಗ ಫೆಬ್ರವರಿ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಅಲ್ಲಿ ಈ ನಾಯಿಯನ್ನು ಪ್ರದರ್ಶಿಸಬೇಕೆಂದು ಆಲೋಚಿಸಿದ್ದೇನೆ, ಎಂದು ಸತೀಶ್ ವಿವರಿಸಿದರು.

ಸತೀಶ್​ ಅವರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಡಾಗ್​ ಬ್ರೀಡಿಂಗ್​ನಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Thu, 5 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ