Guinness Record Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದು ಗಿನ್ನೆಸ್ ರೆಕಾರ್ಡ್ ಮಾಡಿದ 22 ವರ್ಷದ ‘ಗಿನೋ’
ಈ ಹಿಂದೆ 22 ವರ್ಷ ಹಾಗೂ 187 ದಿನಗಳಲ್ಲಿ ನಿಧನವಾದ ಶ್ವಾನ ಪೆಬಲ್ಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿತ್ತು. ಈ ವರ್ಷ ಗಿನೋ ಕೂಡ ಪಡೆದುಕೊಂಡಿದೆ.
ಅಮೆರಿಕದ ಚಿಹೋವಾ ಮಿಶ್ರ ತಳಿಯ ಶ್ವಾನ ಗಿನೋ ಗಿನ್ನಿಸ್ ವಿಶ್ವ ದಾಖಲೆಗಳಿಂದ ವಿಶ್ವದ ಅತಿ ಹೆಚ್ಚು ಕಾಲ ಬದುಕಿರುವ ಶ್ವಾನ ಎಂದು ಘೋಷಿಸಲ್ಪಟ್ಟಿದೆ. 22 ವರ್ಷ ಮತ್ತು 76 ದಿನಗಳಲ್ಲಿ ಗಿನೋ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಶ್ವಾನ ಎರಡು ವರ್ಷ ಇರುವಾಗ ಇದನ್ನು ದತ್ತು ಪಡೆದು ಸಾಕಲಾಯಿತು ಎಂದು ಇದರ ಮಾಲೀಕ ಅಲೆಕ್ಸ್ ವುಲ್ಫ್ ಹೇಳಿದ್ದಾರೆ.
ಇದನ್ನೂ ಓದಿ: World’s Oldest Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ, Rip….
ಈ ಹಿಂದೆ 22 ವರ್ಷ ಹಾಗೂ 187 ದಿನಗಳಲ್ಲಿ ನಿಧನವಾದ ಶ್ವಾನ ಪೆಬಲ್ಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿತ್ತು. ಕೊಲೊರಾಡೋ ವಿಶ್ವವಿದ್ಯಾನಿಲಯದಲ್ಲಿ ನಾನು ವ್ಯಾಸಂಗ ಮಾಡುತ್ತಿದ್ದಾಗ ಈ ಶ್ವಾನವನ್ನು ದತ್ತು ಪಡೆದುಕೊಂಡು ಸಾಕಿದ್ದೇ 22 ವರ್ಷದಿಂದ ನನ್ನೊಂದಿಗೆ ನನ್ನ ಮನೆಯವರ ತರಾನೇ ಇದೆ ಎಂದು ಅಲೆಕ್ಸ್ ವುಲ್ಫ್ ಸಂತೋಷ ವ್ಯಕ್ತ ಪಡಿಸಿದ್ದಾರೆ. ಗೀನೋದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಮುದ್ದಾದ ಫೋಟೋ ಇಲ್ಲಿದೆ.
View this post on Instagram
ಇದನ್ನು ಓದಿ: ಅಯೋಧ್ಯೆಯಲ್ಲಿ ಬೆಳಗಿದ 15 ಲಕ್ಷ ದೀಪಗಳು; ಹೊಸ ಗಿನ್ನಿಸ್ ವಿಶ್ವ ದಾಖಲೆ
ಗಿನೋ ಈಗಾಗಲೇ ವಯಸ್ಸಾಗಿದ್ದು ವಿರಾಮದ ಜೀವನವನ್ನು ನಡೆಸುತ್ತಿದೆ. ಜೊತೆಗೆ ದೃಷ್ಟಿ ಹದಗೆಟ್ಟಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದೆ ಎಂದು ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಶ್ವಾನದ ಆಹಾರಕ್ರಮಕ್ಕೆ ಸಂಬಂಧಿಸಿದಂತೆ, ಅನ್ನದೊಂದಿಗೆ ಬೇಯಿಸಿದ ಕೋಳಿ ಮತ್ತು ಕ್ಯಾರೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:25 pm, Sat, 10 December 22