World’s Oldest Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ, Rip….
ಪ್ರಪಂಚದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ. ಹಿರಿಯ ನಾಯಿ ಎಂದೇ ಗಿನ್ನಿಸ್ ದಾಖಲೆ ಮಾಡಿದ್ದ ಈ ಹೆಣ್ಣು ನಾಯಿ ಇನ್ನೂ ನೆನಪು ಮಾತ್ರ.

ಅಮೆರಿಕಾದ ಸೌತ್ ಕರೋಲಿನಾದ ವಿಶ್ವದ ಅತ್ಯಂತ ಹಿರಿಯ ಫಾಕ್ಸ್ ಟೆರಿಯರ್ ಶ್ವಾನ (World’s Oldest Dog ) ಇನ್ನಿಲ್ಲ. 22 ವರ್ಷದ ಫಾಕ್ಸ್ ಟೆರಿಯರ್ ತಳಿಯ ಈ ನಾಯಿ ಅಕ್ಟೋಬರ್ 3ರಂದು ನಿಧನವಾಗಿದೆ.
2000 ಮಾರ್ಚ್ 28ರಂದು ಜನಿಸಿದ್ದ ಈ ಹಿರಿಯ ನಾಯಿಗೆ 22 ವರ್ಷವಾಗಿತ್ತು. ಆದ್ರೆ, ಇದೀಗ 23 ವರ್ಷ ತುಂಬಲು ಇನ್ನೇನು ಕೇವಲ ಐದು ತಿಂಗಳ ಇರುವಾಗಲೇ ವಯೋಸಹಜದಿಂದ ಅದು ಮೊನ್ನೇ ಸೋಮವಾರ ಕೊನೆಯುಸಿರೆಳೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಒದಿ: ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ, ಎಕ್ಸ್-ರೇ ನೋಡಿ ಬೆಚ್ಚಿಬಿದ್ದ ವೈದ್ಯರು!
ಜೀವಂತವಾಗಿರುವ ಅತ್ಯಂತ ಹಿರಿಯ ನಾಯಿ ಎನ್ನಿಸಿಕೊಂಡಿದ್ದ ಟೋಬಿಕೀತ್ ಎಂಬ 21 ವರ್ಷದ ನಾಯಿ ದಾಖಲೆಯನ್ನು ಈ ಸೌತ್ ಕೆರೊಲಿನಾದ 22 ವರ್ಷದ ಫಾಕ್ಸ್ ಟೆರಿಯರ್ ನಾಯಿ ಮುರಿದು ಗಿನ್ನಿಸ್ ದಾಖಲೆ ಮಾಡಿತ್ತು.
ಇಷ್ಟು ವರ್ಷಗಳ ಅದರ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದೆ. ನನ್ನ ಮನೆಯ ಯುವರಾಣಿಯಾಗಿದ್ದಳು. 2017ರಲ್ಲಿ 16 ವಯಸ್ಸಿನಲ್ಲಿ 32 ನಾಯಿಮರಿಗಳಿಗೆ ಜನ್ಮ ನೀಡಿತ್ತು ಎಂದು ಶ್ವಾನದ ಮಾಲೀಕಾರದ ಜೂಲಿ ಗ್ರೆಗೊರಿಯವರ ಅಂದಿನ ನೆನಪುಗಳನ್ನ ಮೆಲುಕುಹಾಕಿದ್ದಾರೆ.
ಪೆಬಲ್ಸ್ ಸಾಮಾನ್ಯವಾಗಿ ಶಾಂತ ಮತ್ತು ಪ್ರೀತಿಯ ನಾಯಿ ಆದರೆ ಎಚ್ಚರವಾದಾಗ ಮುಂಗೋಪದಲ್ಲಿರುತ್ತದೆ. ಬೆಣಚುಕಲ್ಲುಗಳು ಹಗಲಿನಲ್ಲಿ ಮಲಗಲು ಇಷ್ಟಪಡುತ್ತದೆ ಮತ್ತು ರಾತ್ರಿಯಿಡೀ ಎಚ್ಚರದಿಂದಿರುತ್ತದೆ ಎನ್ನುವುದು ಜೂಲಿ ಗ್ರೆಗೊರಿಯವರ ಮಾತು.
ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Thu, 6 October 22