ಬೆಂಗಳೂರು: ಲೇಡಿಸ್ ಪಿಜಿಯಲ್ಲಿ ಕತ್ತು ಕೊಯ್ದು ಯುವತಿಯ ಕೊಲೆ, ಆರೋಪಿಗಾಗಿ ಹುಡುಕಾಟ

ಬೆಂಗಳೂರಿನ ಲೇಡಿಸ್ ಪಿಜಿಯೊಂದರಲ್ಲಿ ಯುವತಿಯ ಬರ್ಬರ ಕೊಲೆಯಾಗಿದೆ. ರಾತ್ರಿ ಪಿಜಿಗೆ ಚಾಕುವಿನೊಂದಿಗೆ ಎಂಟ್ರಿಕೊಟ್ಟ ಯುವಕ ಕೃತಿ ಕುಮಾರಿ‌ಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿನಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ,

ಬೆಂಗಳೂರು: ಲೇಡಿಸ್ ಪಿಜಿಯಲ್ಲಿ ಕತ್ತು ಕೊಯ್ದು ಯುವತಿಯ ಕೊಲೆ, ಆರೋಪಿಗಾಗಿ ಹುಡುಕಾಟ
ಕೊಲೆ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Jul 24, 2024 | 6:53 AM

ಬೆಂಗಳೂರು, ಜುಲೈ.24: ಕೋರಮಂಗಲದ ವಿಆರ್ ಲೇಔಟ್​​​ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ (Murder) ಮಾಡಲಾಗಿದೆ. ಬಿಹಾರ ಮೂಲದ ಕೃತಿ ಕುಮಾರಿ‌(24) ಕೊಲೆಯಾದ ಯುವತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ‌ಯನ್ನು ರಾತ್ರಿ ಸುಮಾರು 11.10 ರಿಂದ 11.30ರ ನಡುವೆ ಕೊಲೆ ಮಾಡಲಾಗಿದೆ.

ರಾತ್ರಿ 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೃತಿ ಕುಮಾರಿ‌ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶೂಟಿಂಗ್ ವೇಳೆ ಆದ ಅವಘಡದಿಂದ ತೊಂದರೆ ಅನುಭವಿಸಿದ ಕಲಾವಿದರಿವರು

ಪತಿಗೆ ಕಡಿಮೆ ಸಂಬಳ.. ಮನನೊಂದು ಪತ್ನಿ ಆತ್ಮಹತ್ಯೆ

ಕುಟುಂಬದ ಆದಾಯಕ್ಕೆ ವಿಷಯವಾಗಿ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನೆಲಮಂಗಲದ ಅರಿಶಿನಕುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. 30 ವರ್ಷದ ನಂದಿನಿ ಮನೆಯಲ್ಲಿ 8ವರ್ಷದ ಹೆಣ್ಣು ಮಗಳನ್ನ ಬಿಟ್ಟು ನೇಣಿಗೆ ಶರಣಾಗಿದ್ದಾಳೆ. ಮೃತ ನಂದಿನಿ 8ವರ್ಷದ ಹಿಂದೆ ಚಾಲಕ ಸುನಿಲ್ ಜತೆ ವಿವಾಹವಾಗಿದ್ರು. ಪದವಿ ವ್ಯಾಸಂಗ ಮಾಡಿದ್ದ ಪತಿ ಸುನಿಲ್ ಖಾಸಗಿ ಶಾಲೆಯಲ್ಲಿ ಚಾಲಕನಾಗಿದ್ದ. ಪತಿಗೆ ಬರುವ ಅಲ್ಪ ವೇತನದಲ್ಲೇ ನಂದಿನಿ ಜೀವನ ನಡೆಸುತ್ತಿದ್ಳು. ಬಿಕಾಂ ಓದಿದ್ದ ನಂದಿನಿ, ಉತ್ತಮ ರೀತಿಯಲ್ಲಿ ಬದುಕುವ ಆಸೆ ಹೊಂದಿದ್ದಳು. ಆದ್ರೆ, ಅದು ಸಾಧ್ಯವಾಗಿಲ್ಲ. ಇದ್ರಿಂದ ಮನನೊಂದು ಪತಿ ಕೆಲಸಕ್ಕೆ ತೆರಳಿದ್ದ ವೇಳೆ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತನ್ನ ಮಕ್ಕಳನ್ನೇ ಹತ್ಯೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿಯಲ್ಲಿ ಘಟನೆ ನಡೆದಿದೆ. 2021ರ ಜುಲೈನಲ್ಲಿ ಅನಿಲ್ ಚಂದ್ರಕಾಂತ ಬಾಂದೇಕರ್ ಎಂಬಾತ ಮಕ್ಕಳ ಮೇಲೆ ಮಾಟ ಮಂತ್ರ ಆಗಿದೆ ಎಂದು ನೊಂದಿದ್ದ. ಇದ್ರಿಂದ ವಿಷ ಉಣಿಸಿ ಅನನ್ಯ ಮತ್ತು ಅಂಜಲಿ ಎಂಬ ತನ್ನೆರಡು ಮಕ್ಕಳನ್ನ ಕೊಂದಿದ್ದ. ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಳು. ವಿಚಾರಣೆ ನಡೆಸಿದ ಬೆಳಗಾವಿ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ, 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ