ಶೂಟಿಂಗ್ ವೇಳೆ ಆದ ಅವಘಡದಿಂದ ತೊಂದರೆ ಅನುಭವಿಸಿದ ಕಲಾವಿದರಿವರು
ಮುಖ್ಯಮಂತ್ರಿ ಚಂದ್ರು ಅವರಿಗೆ ಶೂಟಿಂಗ್ ವೇಳೆ ಒಂದು ಕಣ್ಣಿಗೆ ಪೆಟ್ಟಾಗಿತ್ತು. ಅವರಿಗೆ ಈಗಲೂ ಒಂದು ಕಣ್ಣು ಕಾಣುವುದಿಲ್ಲ. ಈ ಬಗ್ಗೆ ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದರು. ಈ ರೀತಿ ಶೂಟಿಂಗ್ ವೇಳೆ ಅವಘಡ ಮಾಡಿಕೊಂಡ ಅನೇಕ ಕಲಾವಿದರು ಇದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬಾಲಿವುಡ್ ನಟಿ ಜಾಸ್ಮಿನ್ ಭಾಸಿನ್ ಅವರು ಇತ್ತೀಚೆಗೆ ತೊಂದರೆ ಅನುಭವಿಸಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವಾಗ ಆದ ಎಡವಟ್ಟಿನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರಿಗೆ ದೃಷ್ಟಿ ದೋಷ ಆಗಿದೆ. ನಾಲ್ಕೈದು ದಿನಗಳಲ್ಲಿ ಇದು ಸರಿಹೋಗಬಹುದು ಎಂದು ವೈದ್ಯರು ಹೇಳಿದ್ದಾರೆ. ಅನೇಕ ಹೀರೋಗಳು ಶೂಟಿಂಗ್ ಸಂದರ್ಭದಲ್ಲಿ ಆದ ಅವಘಡಗಳಿಂದ ಸಮಸ್ಯೆ ಎದುರಿಸಿದ್ದಾರೆ ಆ ಬಗ್ಗೆ ಇಲ್ಲಿದೆ ವಿವರ.
ದಿಗಂತ್ ಮಂಚಾಲೆ
ಕನ್ನಡದ ನಟ ದಿಗಂತ್ ಮಂಚಾಲೆ ಅವರ ಒಂದು ಕಣ್ಣಿಗೆ ಪೆಟ್ಟಾಗಿತ್ತು. ‘ಟಿಕೆಟ್ ಟು ಬಾಲಿವುಡ್’ ಸಿನಿಮಾದ ಶೂಟಿಂಗ್ ವೇಳೆ ನಾಯಕಿ ಹೈ ಹೀಲ್ಡ್ ಚಪ್ಪಲಿಯನ್ನ ದಿಗಂತ್ ಕಡೆಗೆ ಎಸೆದಿದ್ದರು. ಇದರಿಂದ ದಿಗಂತ್ ಕಣ್ಣಿಗೆ ಪೆಟ್ಟಾಯಿತು. ಬಲಗಣ್ಣಿನ ಕಾರ್ನಿಯಾಗೆ ಪೆಟ್ಟಾದ ಪರಿಣಾ, ನಟ ದಿಗಂತ್ ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದರು.
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು ಅವರಿಗೆ ಶೂಟಿಂಗ್ ವೇಳೆ ಒಂದು ಕಣ್ಣಿಗೆ ಪೆಟ್ಟಾಗಿತ್ತು. ಅವರಿಗೆ ಈಗಲೂ ಒಂದು ಕಣ್ಣು ಕಾಣುವುದಿಲ್ಲ. ಈ ಬಗ್ಗೆ ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದರು.
ದರ್ಶನ್
ನಟ ದರ್ಶನ್ ಅವರು ಇತ್ತೀಚೆಗೆ ‘ಡೆವಿಲ್’ ಸಿನಿಮಾ ಶೂಟ್ ಮಾಡುವಾಗ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಇದರಿಂದ ಅವರು ಆಪರೇಷನ್ ಕೂಡ ಮಾಡಿಸಿಕೊಳ್ಳಬೇಕಾಯಿತು. ಸದ್ಯ ಅವರು ಜೈಲಿನಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರು 1982ರಲ್ಲಿ ‘ಕೂಲಿ’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದರು. ಫೈಟ್ ದೃಶ್ಯದ ಶೂಟ್ ವೇಳೆ ಗಾಯ ಆಗಿತ್ತು. ಅವರಿಗೆ ಆಂತರಿಕವಾಗಿ ಬ್ಲೀಡಿಂಗ್ ಆಗಿತ್ತು. ಅವರಿಗೆ ಸಾಕಷ್ಟು ಸರ್ಜರಿ ಮಾಡಲಾಯಿತು. ಕೊನೆಗೂ ಅವರು ಬದುಕಿ ಬಂದರು.
ಶಾರುಖ್ ಖಾನ್
ಶಾರುಖ್ ಖಾನ್ ಅವರ ‘ದುಲಾ ಮಿಲ್ ಗಯಾ’ ಶೂಟಿಂಗ್ ವೇಳೆ ಸಮಸ್ಯೆ ಆಗಿತ್ತು. ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ಅವರಿಗೆ ಭುಜಕ್ಕೆ ಗಾಯ ಆಗಿತ್ತು.
ಆಲಿಯಾ ಭಟ್
ಆಲಿಯಾ ಭಟ್ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಶೂಟ್ನಲ್ಲಿ ಭಾಗಿ ಆಗಿದ್ದರು. ಬಲ್ಗೇರಿಯಾದಲ್ಲಿ ಆ್ಯಕ್ಷನ್ ದೃಶ್ಯ ಮಾಡುವಾಗ ಭುಜ ಹಾಗೂ ಕೈಗೆ ಇಂಜೂರಿ ಆಗಿತ್ತು. ಇದರಿಂದ ಅವರು ಶೂಟಿಂಗ್ಗೆ ಬ್ರೇಕ್ ಕೊಟ್ಟಿದ್ದರು.
ಹೃತಿಕ್ ರೋಷನ್
ಹೃತಿಕ್ ರೋಷನ್ ಅವರು ‘ಬ್ಯಾಂಗ್ ಬ್ಯಾಂಗ್’ ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ಅವರು ಹೈ ರಿಸ್ಕ್ ಸ್ಟಂಟ್ಗಳನ್ನು ಮಾಡಿದ್ದರು. ಆ ಬಳಿಕ ಅವರಿಗೆ ಸರ್ಜರಿ ಮಾಡಿಸಲಾಯಿತು.
ಕಂಗನಾ ರಣಾವತ್
ನಟಿ ಹಾಗೂ ಸಂಸದೆ ಕಂಗನಾ ರಣವಾತ್ ಅವರು ‘ಮಣಿಕರ್ಣಿಕಾ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದರಿಂದ ಅವರ ಹಣೆಗೆ ಕಲೆ ಬಿದ್ದಿದೆ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ನಟನೆಯ ಸೀರಿಸ್ ‘ಸಿಟಾಡೆಲ್’ ಶೂಟಿಂಗ್ ವೇಳೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು. ಸದ್ಯ ಅವರು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.