ಯುವತಿಯರ ಲವ್ ಸ್ಟೋರಿ, ಬಾಸ್ಗೆ ಬಿತ್ತು ಪಂಗನಾಮ! ಕಂಪನಿ ಫೋನ್ ಪೇಯಿಂದ ಲವರ್ ಅಕೌಂಟ್ಗೆ ಹಣ ಟ್ರಾನ್ಸ್ಫರ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ
ಕೆಲಸ ಕೊಟ್ಟ ಬಾಸ್ ಅಕೌಂಟ್ನಿಂದ ತನ್ನ ಬಾಯ್ ಫ್ರೆಂಡ್ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾನೆ. ಲವರ್ಗೋಸ್ಕರ ಫೋನ್ ಪೇ ಯೂಸ್ ಮಾಡಿದ ಕ್ರೇಜಿ ಸ್ಟೋರಿ ಇಲ್ಲಿದೆ ನೋಡಿ.
ಬೆಂಗಳೂರು: ಕೆಲಸ ಕೊಟ್ಟ ಬಾಸ್ ಅಕೌಂಟ್ನಿಂದ ತನ್ನ ಬಾಯ್ ಫ್ರೆಂಡ್ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ(Vidyaranyapura) ಠಾಣೆಗೆ ದೂರು ನೀಡಿದ್ದಾನೆ. ಹೌದು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಕಂಪನಿ ನಡೆಸುತ್ತಿರುವ ವೆಂಕಟೇಶ ರೆಡ್ಡಿ ಎಂಬುವವರು ರೀತು ಎಂಬಾಕೆಯನ್ನ ರಿಸಪ್ಷನಿಸ್ಟ್(receptionist)ಆಗಿ ಸೇರಿಸಿಕೊಂಡಿದ್ದರು. ಆದರೆ, ಈ ಯುವತಿ ಇದೀಗ ಅದೇ ಕಂಪನಿ ಓನರ್ನನ್ನು ಠಾಣೆ ಮೆಟ್ಟಿಲೇರುವಂತೆ ಮಾಡಿದ್ದಾಳೆ. ಹೌದು ಮಾಲೀಕನ ಮೊಬೈಲ್ನಿಂದಲೇ ತನ್ನ ತಂಗಿ, ಲವರ್ ಖರ್ಚಿಗೆಂದು ಹಣ ಕಳಿಸಿದ್ದಾಳೆ. ಇವಳಷ್ಟೇ ಅಲ್ಲ, ಇವಳು ಸೇರಿ ಒಟ್ಟು ಮೂವರು ಯುವತಿಯರು ತಮ್ಮ ತಮ್ಮ ಬಾಯ್ ಫ್ರೆಂಡ್ಗಳ ಅಕೌಂಟ್ಗೆ ಹಣ ಕಳಿಸಿದ್ದಾರೆ.
ಕಂಪನಿಗೆ ಸಂಬಂಧಿಸಿದ ಅಕೌಂಟ್ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ ಮಾಲೀಕ
ಮಾಲೀಕ ತನ್ನ ಕಂಪನಿಗೆ ಸಂಬಂಧಿಸಿದ ಅಕೌಂಟ್ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ. ಜೊತೆಗೆ ರೀತು ಎಂಬಾಕೆಯ ಮೂಲಕ ಪಾಸ್ವರ್ಡ್ ಕೂಡ ಸೆಟ್ ಮಾಡಿಸಿದ್ದ ಮಾಲೀಕ ವೆಂಕಟೇಶ ರೆಡ್ಡಿ. ನಂತರ ಹಣದ ವ್ಯವಹಾರದಲ್ಲೂ ರೀತು ವರ್ಗಾವಣೆ ಮಾಡುತ್ತಿದ್ದಳು. ಇದೇ ವೇಳೆ ತನ್ನ ಹಾಗೂ ತನ್ನ ಸಹೋದರಿಯರ ಅಕೌಂಟ್ ಗೂ ಹಣ ವರ್ಗಾವಣೆ ಮಾಡಿದ್ದ ರಿಯಾ. ಬಳಿಕ ತನ್ನ ಬಾಯ್ ಫ್ರೆಂಡ್ ಸೇರಿ ಮೂವರಿಗೆ ಹಣ ಕಳಿಸಿದ್ದಾಳೆ. ಇದುವರೆಗೂ 2 ಲಕ್ಷ 70ಸಾವಿರ ಹಣ ವರ್ಗಾಯಿಸಿದ್ದಾಳೆ.
ಇದನ್ನೂ ಓದಿ:Banana Diet: ತೂಕ ನಷ್ಟಕ್ಕೆ ಬಾಳೆಹಣ್ಣು ಮಾತ್ರ ತಿನ್ನುವುದು ಸುರಕ್ಷಿತವೇ?
ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್
ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್ ಬಂದಿದೆ. ಅಕೌಂಟ್ನಲ್ಲಿ ಹಣ ಇದ್ರೂ, ಡ್ಯೂ ಮೆಸೆಜ್ ಬಂದಿರೋದ್ರ ಬಗ್ಗೆ ವೆಂಕಟೇಶ್ ರೆಡ್ಡಿ ಪರಿಶೀಲಿಸಿದ್ದ. ಈ ವೇಳೆ ರೀತು ತನ್ನ ಲವರ್ ಸೇರಿ ನಕ್ಷು, ಕುಶಾಲಪ್ಪ, ಮಾಲ್ತೇಶ್, ರಾಹುಲ್ ಎಂಬುವರಿಗೆ ಹಣ ವರ್ಗಾಯಿಸಿರೋದು ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಫೀಸ್ ಉದ್ಯೋಗಿಯೊಬ್ಬಳ ಕೈಚಳಕದಿಂದ ಇದೀಗ ಕಂಪನಿ ಮಾಲೀಕ ಠಾಣೆ ಮೆಟ್ಟಿಲೇರಿದ್ದಾನೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ