ಖರ್ಚಿಗೆ ಹಣವಿಲ್ಲವೆಂದು ನ್ಯೂಸ್ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆ ಎಫ್ಐಆರ್, ಕಾರಣವೇನು?
ಖರ್ಚಿಗೆ ಹಣ ಇಲ್ಲ ಎಂದು ಮನೆಯಲ್ಲಿದ್ದ ನ್ಯೂಸ್ ಪೇಪರ್ ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್ಐಆರ್ ದಾಖಲಿಸಿದ್ದಾನೆ.
ಬೆಂಗಳೂರು: ನಗರದಲ್ಲಿ ಫೇಕ್ ಸ್ಕೇಲ್ ದಂಧೆ(Fake Scale Scam) ಮುಂದುವರೆದಿದೆ. ಖರ್ಚಿಗೆ ಹಣವಿಲ್ಲ ಎಂದು ಪೇಪರ್ ಮಾರಲು ಹೋದ ಯುವಕ ಗುಜರಿ ಅಂಗಡಿ ಮೇಲೆಯೇ ಎಫ್ಐಆರ್ ದಾಖಲಿಸಿದ ಘಟನೆ ನಡೆದಿದೆ. ಪೇಪರ್ ಮಾರ್ಟ್ಗಳಲ್ಲಿ(ಗುಜರಿ ಅಂಗಡಿ) ಕೂಡ ವಂಚನೆ ನಡೆಯುತ್ತಿವೆ. ಖರ್ಚಿಗೆ ಹಣ ಇಲ್ಲ ಎಂದು ಮನೆಯಲ್ಲಿದ್ದ ನ್ಯೂಸ್ ಪೇಪರ್(News Paper) ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್ಐಆರ್ ದಾಖಲಿಸಿದ್ದಾನೆ.
ಜೀವನ್, ನಾಗೇಂದ್ರ ಬ್ಲಾಕ್ ಬಳಿ ಇರುವ ಮಾರಮ್ಮ ಪೇಪರ್ ಮಾರ್ಟ್ಗೆ 8 ಕೆಜಿ ಪೇಪರ್ ಕೊಂಡೊಯ್ದಿದ್ದ. 1 ಕೆಜಿಗೆ 16 ರೂಪಾಯಿ ತೂಗುತ್ತೆ. ಪೇಪರ್ ಸ್ಕೇಲ್ನಲ್ಲಿ 8 ಕೆಜಿಯಷ್ಟು ಪೇಪರ್ ಕೇವಲ 6 ಕೆ.ಜಿ 900 ಗ್ರಾಂ ಎಂದು ತೋರಿಸಿದೆ. ಅದೇ ಬಂಡಲನ್ನು ಮನೆಯ ಬಳಿಯ ಅಂಗಡಿಯೊಂದರಲ್ಲಿ ತೂಕ ಮಾಡಿದಾಗ 8 ಕೆ.ಜಿ 700 ಗ್ರಾಂ ಇತ್ತು. ಬಳಿಕ ಜೀವನ್ಗೆ ಇಲ್ಲಿ ಮೋಸ ಆಗುತ್ತಿರುವುದು ಗೊತ್ತಾಗಿದೆ. ಬಳಿಕ ಮಾರಮ್ಮ ಪೇಪರ್ ಮಾರ್ಟ್ಗೆ ಹೋದ ಜೀವನ್ ಮತ್ತೆ ತೂಕ ಮಾಡಿಸಿದ್ದಾರೆ. ಆಗ ಅಲ್ಲಿ ಕೆಳ ಭಾಗದಲ್ಲಿ ಮಾತ್ರ ತೂಕ ಮೇಲ್ಭಾಗದಲ್ಲಿ 6ಕೆ.ಜಿ 900 ಗ್ರಾಂ ಬರುತ್ತಿತ್ತು. ಇದನ್ನ ಪ್ರಶ್ನಿಸಿದಕ್ಕೆ, ಇಷ್ಟವಿದ್ದರೆ ಮಾರು ಇಲ್ಲ ಈ ವಿಚಾರ ಯಾರಿಗೂ ಹೇಳಬೇಡ, ಹೇಳಿದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಗುಜರಿ ಅಂಗಡಿಯಲ್ಲಿದ್ದವ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜೀವನ್ ದೂರು ದಾಖಲಿಸಿದ್ದಾರೆ. ದೂರಿನನ್ವಯ Legal metrology act ನಡಿ ಗಿರಿನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ:Mumbai Mira Road murder: ಮನೋಜ್ ಮತ್ತು ಸರಸ್ವತಿಯದ್ದು ಲಿವ್- ಇನ್ ರಿಲೇಷನ್ಶಿಪ್ ಅಲ್ಲ, ಅವರು ಗಂಡ ಹೆಂಡತಿ?
ಬೆಂಗಳೂರಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಬಂಧನ
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ವಿಳ್ಳುಪುರಂ ನಿವಾಸಿ ಮಣಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 17 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಸಂಜಯನಗರ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದ ಮಣಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೃತ್ಯ ಮುಂದುವರಿಸಿದ್ದ. ತಮಿಳುನಾಡಿನಲ್ಲೂ ಆರೋಪಿ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ವಿಚಾರಣೆ ವೇಳೆ ಆರೋಪಿ ಮಣಿ ಕೃತ್ಯದ ಅಸಲಿಯತ್ತು ಬಿಚ್ಚಿಟ್ಟಿದ್ದಾನೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಮಿಡ್ನೈಟ್ನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಜಸ್ಟ್ 6 ಗಂಟೆಗಳಲ್ಲಿ ಮಣಿ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದ. ಮನೆಗಳ್ಳತನಕ್ಕಾಗಿಯೇ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ. ಕಳೆದ 3 ದಶಕಗಳಿಂದ ಕಳ್ಳತನವೇ ವೃತ್ತಿಯಾಗಿಸಿಕೊಂಡಿರುವ ಮಣಿ ರಾತ್ರಿ 9ರಿಂದ ಮಧ್ಯರಾತ್ರಿ 3 ಗಂಟೆ ನಡುವೆ ಕಳ್ಳತನ ಮಾಡಿ ಕೂಡಲೇ ಬಸ್ನಲ್ಲಿ ತಮಿಳುನಾಡಿಗೆ ಎಸ್ಕೇಪ್ ಆಗುತ್ತಿದ್ದ. ವಿದ್ಯಾರಣ್ಯಪುರ ಪೊಲೀಸರ ಮುಂದೆ ಕೃತ್ಯದ ಬಗ್ಗೆ ಮಣಿ ಮಾಹಿತಿ ಬಯ್ಬಿಟ್ಟಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:39 am, Sat, 10 June 23