AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಜನೋತ್ಸವ ಸ್ಪರ್ಧೆಗಳ ಬಹುಮಾನ ಮೊತ್ತ ಹೆಚ್ಚಳ: ವೈಯಕ್ತಿಕ ಸ್ಪರ್ಧೆಗೆ 15 ಸಾವಿರ, ಗುಂಪು ಸ್ಪರ್ಧೆಗೆ 20 ಸಾವಿರ ಮೊದಲ ಬಹುಮಾನ

ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ ₹ 15 ಸಾವಿರ, ಎರಡನೇ ಬಹುಮಾನ ₹ 10 ಸಾವಿರ, ಮೂರನೇ ಬಹುಮಾನ ₹ 5 ಸಾವಿರ ನಿಗದಿಪಡಿಸಲಾಗಿದೆ

ಯುವಜನೋತ್ಸವ ಸ್ಪರ್ಧೆಗಳ ಬಹುಮಾನ ಮೊತ್ತ ಹೆಚ್ಚಳ: ವೈಯಕ್ತಿಕ ಸ್ಪರ್ಧೆಗೆ 15 ಸಾವಿರ, ಗುಂಪು ಸ್ಪರ್ಧೆಗೆ 20 ಸಾವಿರ ಮೊದಲ ಬಹುಮಾನ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ
TV9 Web
| Edited By: |

Updated on: Feb 03, 2022 | 3:58 PM

Share

ಬೆಂಗಳೂರು: ಯುವ ಜನೋತ್ಸವ ಸ್ಪರ್ಧೆಗಳ ವಿಜೇತರ ಬಹುಮಾನ ಮೊತ್ತವನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರ (Govt of Karnataka) ಆದೇಶ ಹೊರಡಿಸಿದೆ. ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳ ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ ₹ 15 ಸಾವಿರ, ಎರಡನೇ ಬಹುಮಾನ ₹ 10 ಸಾವಿರ, ಮೂರನೇ ಬಹುಮಾನ ₹ 5 ಸಾವಿರ ನಿಗದಿಪಡಿಸಲಾಗಿದೆ. ಗುಂಪುಗಳಿಗೆ ನೀಡುವ ಮೊದಲ ಬಹುಮಾನ ₹ 25 ಸಾವಿರ, ಎರಡನೇ ಬಹುಮಾನ ₹ 15 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ. ಯುವ ಸಬಲೀಕರಣ ಇಲಾಖೆ ಸಚಿವ ನಾರಾಯಣ ಗೌಡ ಅವರ ಸೂಚನೆ ಮೇರೆಗೆ ಬಹುಮಾನಗಳ ಮೊತ್ತ ಪರಿಷ್ಕರಿಸಲಾಗಿದೆ.

ಗ್ರಾಮೀಣ ಮಟ್ಟದಿಂದಲೇ ಸಬಲೀಕರಣಕ್ಕೆ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಿಂದಲೇ ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಜೊತೆಗೂಡಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ನೇರವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಸಹಯೋಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಸ್ಥಳೀಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಗ್ರಾಮೀಣ ಕ್ರೀಡೋತ್ಸವಗಳನ್ನು ಆಯೋಜಿಸುವ ಮೂಲಕ ದೇಸೀ ಕಲೆಗಳು ಹಾಗೂ ಜಾನಪದ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಶಾಲೆಗಾಗಿ ಗಣನೀಯ ಕೊಡುಗೆ ನೀಡಿದ ಯುವ ಸಂಘಗಳನ್ನು ಗುರುತಿಸಿ ಪುರಸ್ಕರಿಸಲು ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಇದರ ಜೊತೆಗೆ ಧಾರ್ಮಿಕ ಸಾಮರಸ್ಯಕ್ಕಾಗಿಯೂ ಕೆಲ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Fact Check: ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ಯುವಜನರಿಗೆ ರೂ. 4000 ಕೊಡ್ತಾರಂತೆ! ಇದರಲ್ಲಿ ನಿಜ ಇದೆಯಾ? ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?