Driverless Car: ಬೆಂಗಳೂರಿನಲ್ಲಿ ರಸ್ತೆಗಿಳಿದ ಸ್ವಯಂಚಾಲಿತ ಕಾರು: ಸಾರ್ವಜನಿಕರ ಅಚ್ಚರಿಗೆ ಕಾರಣವಾಯ್ತು ಝಡ್ ಪಾಡ್
ಝಡ್ ಪಾಡ್ ಎಂಬ ಕಾರು ಬೆಂಗಳೂರು ಮೂಲದ ಮೈನಸ್ ಝೀರೋ ಎಂಬ ಸ್ಟಾರ್ಟ್ಅಪ್ನ ಕನಸಿನ ಕೂಸಾಗಿದೆ. ಇದು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭಾರತದ ಮೊದಲ ಸ್ವಯಂ ಚಾಲಿತ ವಾಹನ ಎಂದು ಗುರುತಿಸಲಾಗಿದೆ.
ಬೆಂಗಳೂರು, ಜುಲೈ 28: ನಗರದಲ್ಲಿ ಚಾಲಕ ರಹಿತ ಕಾರು (car) ಒಂದು ರಸ್ತೆಗೆ ಇಳಿದಿರುವುದು ಕಂಡುಬಂದಿದೆ. ಯಾವುದೇ ಮನುಷ್ಯರ ಸಹಾಯವಿಲ್ಲದೇ ರಸ್ತೆಯಲ್ಲಿ ಸಂಚರಿಸುವ ಈ ಕಾರನ್ನು ಕಂಡು ಸಿಲಿಕಾನ್ ಸಿಟಿ ಜನರು ಒಂದು ಕ್ಷಣ ದಂಗಾಗಿದ್ದಾರೆ. ಶಿವಾಜಿನಗರ, ಫ್ರೇಜರ್ ಟೌನ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಸಂಚರಿಸುತ್ತಿರುವ ಈ ಕಾರು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಸ್ವಯಂ ಚಾಲಿತ ತಂತ್ರಜ್ಞಾನವನ್ನು ಮೊದಲು ಅಮೆರಿಕದ ಕಾರು ತಯಾರಕ ಕಂಪನಿ ಆದ ಟೆಸ್ಲಾ ಪರಿಚಯಿಸಿತು. ಅಂತೆಯೇ, ಚಾಲಕರಹಿತ ಕಾರು ಬೆಂಗಳೂರಿನಲ್ಲಿ ರಸ್ತೆಗೆ ಇಳಿದಿದ್ದು ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅನಿರುದ್ಧ್ ರವಿಶಂಕರ್ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಸ್ವಯಂ ಚಾಲಿತ ಮತ್ತು ವಿಚಿತ್ರವಾಗಿ ಕಾಣುವ ಕಾರಿನ ವಿಡಿಯೋವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಜನರು ಕುತೂಹಲದಿಂದ ಕಾರನ್ನು ನೋಡುತ್ತಿರುವುದು ಗಮನಿಸಬಹುದು. ಅವರು ಟ್ವೀಟ್ ಮಾಡಿದ ಬಳಿಕ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಈ ವಿಡಿಯೋ 12 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಮೈನಸ್ ಝೀರೋ ಸ್ಟಾರ್ಟ್ ಅಪ್ ಕಂಪನಿಗೆ ಸೇರಿದ ಈ ಸ್ವಯಂ ಚಾಲಿತ ಕಾರಿಗೆ ಝಡ್ ಪಾಡ್ ಎಂದು ಹೆಸರಿಡಲಾಗಿದೆ. ಈ ವಿಚಿತ್ರ ಕಾರಿನ ಬಗ್ಗೆ ನೆಟ್ಟಿಗರು ಸಾಕಷ್ಟು ಕಮೆಂಟ್ ಮಾಡಿದ್ದಾರೆ.
On the streets of Bengaluru. @peakbengaluru pic.twitter.com/VtahXpa6Mh
— anirudh ravishankar (@anrdh89) July 22, 2023
ಭಾರತದ ಮೊದಲ ಸ್ವಯಂ ಚಾಲಿತ ವಾಹನ
ಝಡ್ ಪಾಡ್ ಎಂಬ ಈ ಕಾರು ಬೆಂಗಳೂರು ಮೂಲದ ಮೈನಸ್ ಝೀರೋ ಎಂಬ ಸ್ಟಾರ್ಟ್ಅಪ್ನ ಕನಸಿನ ಕೂಸಾಗಿದೆ. ಇದು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭಾರತದ ಮೊದಲ ಸ್ವಯಂ ಚಾಲಿತ ವಾಹನ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್: ಟಾಟಾ ಕಂಪನಿಯಿಂದ 921 ವಿದ್ಯುತ್ ಚಾಲಿತ ಬಸ್ ಖರೀದಿ
ಈ ಝಡ್ ಪಾಡ್ ಕಾರು ಸಂಪೂರ್ಣ ಸ್ವಯಂ ಚಾಲಿತವಾಗಿದ್ದು, ಆರು ಕ್ಯಾಮೆರಾಗಳು, ಪರಸ್ಪರ ಎದುರಾಗಿ ನಾಲ್ಕು ಆಸನಗಳನ್ನು ಹೊಂದಿದೆ. ಇದನ್ನು ಯಾವುದೇ ಭೌಗೋಳಿಕ ಸ್ಥಳ ಅಥವಾ ಪರಿಸರದಲ್ಲಿ ಸಂಚರಿಸಬಹುದು ಎಂದು ಕಂಪನಿ ತಿಳಿಸಿದೆ. ಕಾರಿನಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಸೆರೆಹಿಡಿದ ಚಿತ್ರಗಳ ಆಧಾರದ ಮೇಲೆ ಚಲನೆ ಮಾಡುತ್ತಿದೆ. ಜೊತೆಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತದೆ.
ಸಂಚಾರ ದಟ್ಟಣೆ ಮತ್ತು ರಸ್ತೆ ಅಪಘಾತಗಳು ಕಡಿಮೆ
ಈ ಕಾರಿನ ಇನ್ನೊಂದು ವಿಶೇಷವೆಂದರೆ, ಧ್ವನಿ ಆದೇಶಗಳ ಮೂಲಕವೂ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಕಾರನ್ನು ಆನ್ ಮತ್ತು ಆಫ್ ಮಾಡಲು ಆದೇಶಿಸಬಹುದಾಗಿದೆ. ಇದು ಎರಡು ದಿಕ್ಕಿನಲ್ಲಿ ಸಂಚರಿಸುತ್ತದೆ ಮತ್ತು ಸ್ಟೀರಿಂಗ್ನ ಅಗತ್ಯವಿರುವುದಿಲ್ಲ. ಸಂಚಾರ ದಟ್ಟಣೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಮೈನಸ್ ಝೀರೋ ಉದ್ದೇಶವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Fri, 28 July 23