ಬೀದರ್: ತಾಲೂಕು ಮತ್ತು ಭಾಲ್ಕಿ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 1972 ರಲ್ಲಿ ಬೀದರ್ ಬಳಿ ಕಾರಂಜಾ ಜಲಾಶಯವನ್ನ ನಿರ್ಮಿಸಲಾಗಿತ್ತು. ಜಲಾಶಯ ನಿರ್ಮಾಣದಿಂದಾಗಿ 9 ಹಳ್ಳಿಗಳು ಮುಳುಗಡೆಯಾಗಿ 10 ಸಾವಿರ ಕುಟುಂಬಗಳು ಬೀದಿಗೆ ಬಿದ್ದುವು. 18 ಸಾವಿರ ಎಕರೆ ಬಂಗಾರದ ಬೆಳೆ ಬೆಳೆಯುತ್ತಿದ್ದ 26 ಹಳ್ಳಿಯ ಜನರು ಫವತ್ತಾದ ಭೂಮಿಯನ್ನ ಡ್ಯಾಂ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟರು. ಆದರೆ ಸರಕಾರ ಮಾತ್ರ ಇನ್ನೂವರೆಗೂ ರೈತರಿಗೆ ಕೊಡಬೇಕಾದ ಪರಿಹಾರವನ್ನ ಮಾತ್ರ ಕೊಟ್ಟಿಲ್ಲ. ಕಳೆದ 4 ದಶಕದಿಂದ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ನ್ಯಾಯಯುತವಾಗಿ ರೈತರಿಗೆ ಸಿಗಬೇಕಾಗಿದ್ದ ಪರಿಹಾರ ಮಾತ್ರ ಸಿಗುತ್ತಿಲ್ಲ. ಯಾರದೋ ಸುಃಖಕ್ಕಾಗಿ ಜಮೀನು ಕಳೆದಕೊಂಡು ರೈತರು ಸಾಕಷ್ಟು ಸಲ ಪ್ರತಿಭಟನೆ ರ್ಯಾಲಿ, ರಸ್ತೆ ತಡೆ ಮಾಡಿದಾಗ ನೆಪಕ್ಕೆ ಭೆಟ್ಟಿ ನೀಡಿದ ರಾಜಕಾರಣಿಗಳು ಸೂಕ್ತ ಪರಿಹಾರ ಕೊಡಿಸುವುದಾಗಿ ಪೊಳ್ಳು ಭರವಸೆಯನ್ನ ನೀಡಿದರೇ ಹೊರತು ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡಲಿಲ್ಲ. ಹೀಗಾಗಿ ಕಳೆದ 130 ದಿನದಿಂದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇನ್ನೂ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶವ್ಯಕ್ತ ಪಡಿಸುತ್ತಿರುವ ರೈತರು ಪರಿಹಾರ ಕೊಡುತ್ತೇವೆಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ನಮಗೆ ಇನ್ನೂ ಪರಿಹಾರ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಈ ಹಿಂದೆ 2018ರ ಸಪ್ಟಂಬರ್ನಲ್ಲಿ 76 ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿದ್ದ ರೈತರು ಆ ಸಮಯದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ರಾಜ್ಯಮಟ್ಟದ ನಾಯಕರುಗಳು ಬಂದು ಹೋದರೇ ಹೊರತು ಯಾವೊಬ್ಬ ರಾಜಕಾರಣಿಯೂ ಕೂಡಾ ರೈತರ ಸಮಸ್ಯೆಯ ಬಗ್ಗೆ ಮತ್ತು ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಮಾತನಾಡಿಲ್ಲ. ಕೆವಲ ಹೆಸರಿಗೆ ಮಾತ್ರ ಭೇಟ್ಟಿ ನಿಡುವ ರಾಜಕಾರಣಿಗಳು ಧರಣಿ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೆವೆಂದು ಹೇಳಿ ಹೋದವರು ಸುಮ್ಮನಾಗಿದ್ದಾರೆ. ಇದು ಸಹಜವಾಗಿಯೇ ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಡ್ಯಾಂನಿಂದ ಭೂಮಿ ಮನೆಗಳನ್ನ ಕಳೆದುಕೊಂಡ ಕುಟುಂಬವನ್ನ ಗುರುತಿಸಿದ ಅಂದಿನ ಸರಕಾರ ಅವರಿಗೆ ಪರಿಹಾರವನ್ನ ಘೋಷಣೆ ಮಾಡಿ ಘೋಷನೆಯಾದ ಪರಿಹಾರದಲ್ಲಿ ಮೊದಲ ಹಂತವಾಗಿ ಅರ್ಧ ಹಣವನ್ನ ಭೂಮಿ ಮನೆಗಳನ್ನು ಕಳೆದುಕೊಂಡ ಕುಟುಂಬಕ್ಕೆ ನೀಡಿತ್ತು. ಆದರೆ ಇನ್ನೂಳಿದ ಹಣವನ್ನ ಮಾತ್ರ ಸರಕಾರ ಇಲ್ಲಿಯವರೆಗೂ ನೀಡಿಲ್ಲ. ಬಾಕಿ ಪರಿಹಾರಕ್ಕಾಗಿ ಮೂರು ದಶಕದಿಂದ ಸುದೀರ್ಘ ಹೋರಾಟ ನಡೆಸುತ್ತಿದ್ದು ಇಂದಿನವರೆಗೂ ನಿಂತಿಲ್ಲ. ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದ ರೈತರು ಸುಸ್ತಾಗಿದ್ದಾರೆಯೇ ಹೊರತು ಪರಿಹಾರ ಸಿಕ್ಕಿಲ್ಲ.
ಇನ್ನೂ ಇದೇ ವೇಳೆಯಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣ ಕಾರ್ಯ ನಡೆದಿತ್ತು. ಅಲ್ಲಿನ ರೈತರಿಗೆ ಎಕರೆಗೆ ಎರಡು ಲಕ್ಷ ರೂಪಾಯಿ, ಮನೆಕಟ್ಟಲು ಸೈಟ್ ಕೂಡಾ ನಿಡಿತ್ತು. ಆದರೆ ಮನಗೆ ಮಾತ್ರ ಎಕರೆಗೆ 30 ಸಾವಿರ ರೂಪಾಯಿ ನಿಗದಿ ಮಾಡಿ ಅದರಲ್ಲಿ 15 ಸಾವಿರ ರೂಪಾಯಿ ಮಾತ್ರ ಕೊಟ್ಟು ಕೈತೊಳೆದುಕೊಂಡು ಕುಳಿತಿದೆ. ಆಲಮಟ್ಟಿ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯ, ಕಾರಂಜಾ ಡ್ಯಾಂನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ನ್ಯಾಯವೇ ಎಂದು ರೈತರು ಪ್ರಶ್ನೀಸುತ್ತಿದ್ದಾರೆ.
ಸುಮಾರು 9 ಸಾವಿರ ಕುಟುಂಬಗಳು ಸರಕಾರ ಕೊಡುವ ಪರಿಹಾರದ ನಿರಿಕ್ಷೇಯಲ್ಲಿ ಪ್ರತಿನಿತ್ಯ ಚಾತಕ ಪಕ್ಷೀಯಂತೆ ಕಾಯುತ್ತಿವೆ. ಮನೆ ಆಸ್ತಿ ಪಾಸ್ತಿಹೋಗಿದೆ, ಸರಕಾರ ಪರಿಹಾರಕ್ಕೊಟ್ಟರೆ ನಮ್ಮ ಬಾಳುಕೂಡಾ ಬೆಳಕಾಗಬಹುದೆಂಬ ಆಶಯದೊಂದಿಗೆ ತಮ್ಮ ಬದುಕನ್ನ ಕಳೆಯುತ್ತಿದ್ದಾರೆ. ಪರಿಹಾರಕ್ಕಾಗಿ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನೊಂದ ರೈತರ ಸಮಸ್ಯೆಯನ್ನ ಪರಿಹರಿಸುವ ಕಡೆಗೆ ಒಲವು ತೋರಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನ ಕೈಡ ರೈತರು ಕೊಡುತ್ತಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Tue, 8 November 22