30ಕ್ಕೂ ಹೆಚ್ಚು ಜನರ ಮೇಲೆ ಕೋತಿಗಳ ದಾಳಿ; ಮಂಗಗಳ ಉಪಟಳ ತಡೆಯಲು ಆಗ್ತಿಲ್ಲ ಅಂತಿದ್ದಾರೆ ನಿಟ್ಟೂರು ಗ್ರಾಮಸ್ಥರು
ಕಳೆದೊಂದು ತಿಂಗಳಲ್ಲಿ ನಿಟ್ಟೂರು ಗ್ರಾಮದ ಮೂವತ್ತಕ್ಕೂ ಹೆಚ್ಚು ಜನರ ಮೇಲೆ ಕೋತಿ ದಾಳಿ ಮಾಡಿದ್ದು, ಊರಿನ ಜನರ ನೆಮ್ಮದಿ ಕಸಿದುಕೊಂಡಿವೆ. ಜತೆಗೆ 30 ಕ್ಕೂ ಹೆಚ್ಚು ಜನರನ್ನ ಕಚ್ಚಿ ಗಾಯಗೊಳಿಸಿದೆ. ಕೆಲವರನ್ನು ಕೋತಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ.
ಬೀದರ್: ಮನುಷ್ಯರಿಂದ ಪ್ರಾಣಿಗಳು ತೊಂದರೆ ಅನುಭವಿಸಿದ ಅದೆಷ್ಟೋ ಘಟನೆಗಳ ಬಗ್ಗೆ ನಾವು ಓದಿದ್ದೇವೆ. ಆದರೆ ಬೀದರ್ನಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶವೊಂದು ನಡೆದಿದೆ. ಇದರ ಅರ್ಥ ಪ್ರಾಣಿಗಳೇ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕೋತಿಗಳು ದಾಳಿ ನಡೆಸಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮದಲ್ಲಿನ 30ಕ್ಕೂ ಹೆಚ್ಚು ಜನರನ್ನು ಕಚ್ಚಿ ಮಂಗಗಳು ಗಾಯಗೊಸಿಳಿದ್ದು, ಇಡೀ ಗ್ರಾಮವನ್ನೇ ಭಯಭೀತರನ್ನಾಗಿಸಿದೆ. ಮಂಗಗಳ ಕಿತಾಪತಿಗೆ ಗ್ರಾಮದ ಜನರು ಮನೆಯಿಂದ ಹೊರಬರಲು ಕೂಡಾ ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ.
ಕಳೆದೊಂದು ತಿಂಗಳಲ್ಲಿ ನಿಟ್ಟೂರು ಗ್ರಾಮದ ಮೂವತ್ತಕ್ಕೂ ಹೆಚ್ಚು ಜನರ ಮೇಲೆ ಕೋತಿ ದಾಳಿ ಮಾಡಿದ್ದು, ಊರಿನ ಜನರ ನೆಮ್ಮದಿ ಕಸಿದುಕೊಂಡಿವೆ. ಜತೆಗೆ 30 ಕ್ಕೂ ಹೆಚ್ಚು ಜನರನ್ನ ಕಚ್ಚಿ ಗಾಯಗೊಳಿಸಿದೆ. ಕೆಲವರನ್ನು ಕೋತಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮದಲ್ಲಿ ಜನರು ಹೊರಗೆ ಓಡಾಡಲು ಕೂಡ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದ ಮನೆಗಳಲ್ಲಿ ಸದಾ ಬಾಗಿಲು ಮುಚ್ಚಿರುತ್ತದೆ ಮತ್ತು ಓಡಾಡುವಾಗ ಕಟ್ಟಿಗೆ ಕೋಲು ಹಿಡಿದುಕೊಂಡು ಊರಲ್ಲಿ ಓಡಾಡಬೇಕಾದ ಅನಿವಾರ್ಯತೆಯುಂಟಾಗಿದೆ.
ಸದ್ಯ ಪದೇಪದೇ ಜನರ ಮೇಲೆ ದಾಳಿ ಮಾಡುವ ಒಂದು ಕೋತಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇನ್ನೂ ಹತ್ತಾರು ಮಂಗಳು ಗ್ರಾಮದ ಸುತ್ತಮುತ್ತಲೂ ಓಡಾಡುತ್ತಿವೆ. ಅದರಿಂದಾ ಗ್ರಾಮಸ್ಥರಿಗೆ ಸದ್ಯ ಏನು ತೊಂದರೆಯಾಗಿಲ್ಲ. ಆದರೆ ಅವುಗಳು ಕೂಡಾ ಜನರ ಮೇಲೆ ದಾಳಿ ಮಾಡಿದರೆ ಹೇಗೆ ಎಂದು ಇಲ್ಲಿನ ಜನರು ಭಯದಲ್ಲಿಯೇ ಪ್ರತಿದಿನವೂ ಕಾಲ ಕಳೆಯುತ್ತಿದ್ದಾರೆ. ಇನ್ನೂ ಈ ಕೋತಿಗಳು ಚಿಕ್ಕವರು, ದೊಡ್ಡವರು, ಮಕ್ಕಳು, ಮಹಿಳೆಯರು ಎನ್ನದೆ ದಾಳಿ ಮಾಡುತ್ತಿರುವ ಕೋತಿಗಳು ಗ್ರಾಮದ ಜನರ ನೆಮ್ಮದಿಯನ್ನು ಹಾಳು ಮಾಡಿದೆ ಎಂದು ಗ್ರಾಮಸ್ಥರಾದ ತುಕಾರಾಮ್ ತಿಳಿಸಿದ್ದಾರೆ.
ಗ್ರಾಮಸ್ಥರು ಹಣ ಸಂಗ್ರಹಿಸಿ ಕೋತಿಯನ್ನುಬಲೆಗೆ ಬೀಳಿಸಿದ್ದಾರೆ ಗ್ರಾಮದ ಜನರೆಲ್ಲ ಸೇರಿಕೊಂಡು ಕೋತಿ ಹಿಡಯುವವರಿಗೆ 20 ಸಾವಿರ ಹಣ ಕೊಟ್ಟು ಕೋತಿಯನ್ನು ಸೇರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇದರಿಂದ ಇಡೀ ಗ್ರಾಮದ ಜನ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವಾರದಲ್ಲಿ ಗ್ರಾಮದ ವೃದ್ಧ ಮಹಿಳೆ ಸುಲೋಚನ ಬಾಯಿ , ದೇವತಾ ಬಾಯಿ ಹಾಗೂ ಸೋಹಿಲ್ ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಕಚ್ಚಿದ್ದ ಕೋತಿ ಯಾರ ಕೈಗೂ ಸಿಕ್ಕಿರಲಿಲ್ಲ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ, ಬೈಕ್ ಮೇಲೆ ಹೋಗುತ್ತಿದ್ದ ಜನರ ಮೇಲೆ ಎಕಾಏಕಿ ದಾಳಿ ಮಾಡುತ್ತಿತ್ತು. ಕೊನೆಗೂ ಇದು ಸಾಧ್ಯವಿಲ್ಲ ಎಂದಾಗ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಆದರೆ ಅದು ಏನು ಪ್ರಯೋಜನಕ್ಕೆ ಬಂದಿಲ್ಲ. ಹೀಗಾಗಿ ಪಕ್ಕದ ಗ್ರಾಮದ ಕೋತಿ ಸೆರೆಹಿಡಿಯುವ ವ್ಯಕ್ತಿಗೆ ಹಣ ನೀಡಿ ಮಂಗನನ್ನು ಸೆರೆಹಿಡಿದಿದ್ದಾರೆ.
ಯಾವೊಂದು ಪ್ರಾಣಿಯನ್ನು ಕೆಣಕದ ಹೊರತು ಅದು ಯಾರೊಬ್ಬರ ಮೇಲೂ ಆಕ್ರಮಣ ಮಾಡುವುದಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿನ ಮಂಗಗಳು ಅದ್ಯಾಕೇ ಹೀಗೆ ಮಾಡುತ್ತಿವೆ ಎನ್ನುವುದು ಮಾತ್ರ ಈ ಗ್ರಾಮದ ಜನರಿಗೆ ಯಕ್ಷ ಪ್ರಶ್ನೇಯಾಗಿ ಕಾಡುತ್ತಿದೆ.
ಇದನ್ನೂ ಓದಿ: ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ
ದಾವಣಗೆರೆಯಲ್ಲಿ ಮುಸಿಯಾ ಉಪಟಳ; ವಾನರನನ್ನು ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ