ಇದೆಂಥ ವಿಧಿಯಾಟ, ತನ್ನದೇ ಶಾಲಾ ಬಸ್ಗೆ ಬಲಿಯಾದ 8 ವರ್ಷದ ಬಾಲಕಿ
ರುತ್ವಿ ಎನ್ನುವ 8 ವರ್ಷದ ಬಾಲಕಿ ಬೀದರ್ ತಾಲೂಕಿನ ಜನವಾಡ ಗ್ರಾಮದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಇದೀಗ ಅದೇ ಶಾಲೆಯ ಬಸ್ಗೆ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಖುಷಿ ಖುಷಿಯಾಗಿ ಬೆಳಗ್ಗೆ ಶಾಲೆಗೆ ಹೋಗಿದ್ದ ಮಗು ವಾಪಸ್ ಬಸ್ ಇಳಿದು ಮನೆಗೆ ಹೋಗುವ ವೇಳೆಯಲ್ಲೇ ವಿಧಿ ಬಲಿ ಪಡೆದುಕೊಂಡಿದೆ.

ಬೀದರ್, (ಡಿಸೆಂಬರ್ 09): ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ (School Girl) ಬಲಿಯಾಗಿರುವ ಘಟನೆ ಬೀದರ್ (Bidar) ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ ಬಾಲಕಿ. ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಇನ್ನೇನು ಬಸ್ ಇಳಿದು ಮನಗೆ ಹೋಗಬೇಕೆನ್ನುವಷ್ಟರಲ್ಲೇ ವಿಧಿ ಬಲಿಪಡೆದುಕೊಂಡಿದೆ. ಹೌದು… ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ರುತ್ವಿ ಸಾವನ್ನಪ್ಪಿದ್ದಾಳೆ.
ಬಸ್ ಚಾಲಕ ಚಾಲಕ, ಗುರುನಾನಕ್ ಶಾಲೆಯಿಂದ ಮನೆಯ ವರೆಗೂ ಡ್ರಾಪ್ ಮಾಡಿದ್ದ. ಬಾಲಕಿ ಸ್ಕೂಲ್ ಬಸ್ ಇಳಿದು ಪಕ್ಕದಲ್ಲೇ ನಿಂತಿದೆ. ಇದನ್ನು ಗಮನಿಸಿದ ಚಾಲಕ ಹಾಗೇ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದು, ಅಲ್ಲೇ ನಿಂತಿದ್ದ ರುತ್ವಿ ಮೇಲೆ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ತೀವ್ರಗೊಂಡ ರುತ್ವಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹಾಗೂ ವಾಪಸ್ ಮನೆಗೆ ಕರೆತರುವಾಗ ಎಚ್ಚರ ವಹಿಸಬೇಕು. ಇನ್ನು ಸ್ಕೂಲ್ ಬಸ್ ಚಾಲಕರು ಸಹ ಓವರ್ ಸ್ಪೀಡ್ ಚಲಾಯಿಸಬಾರದು. ಹಾಗೇ ಮಕ್ಕಳು ಇಳಿಯುವಾಗ ಏರುವಾಗ ಎಚ್ಚರ ವಹಿಸಬೇಕು. ಕೊಂಚ ಯಾಮಾರಿದರೂ ಸಹ ಈ ರೀತಿ ಘಟನೆ ಸಂಭವಿಸುತ್ತವೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ
ಚಿಕ್ಕಬಳ್ಳಾಪುರ:ಜಿಲ್ಲೆ ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಲಾರಿ, ಬಸ್, ಆಟೋ ನಡುವೆ ಸಂಭವಿಸಿದ ಸರಣಿ ಅಪಘಾತ ಸಂಭವಿಸಿದ್ದು, ಚಿಲುವೆಂದುಲ ಗ್ರಾಮದ 68 ವರ್ಷದ ವೃದ್ಧ ಮೃತಪಟ್ಟಿದ್ದಾರೆ. 10 ಜನರನ್ನು ತುಂಬಿಕೊಂಡು ಸುಂಕುಲಮ್ಮ ದೇಗುಲದಿಂದ ಬಂದ ಆಟೋ ತಿರುವು ಪಡೆದುಕೊಳ್ಳುವ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿದ ರಭಸಕ್ಕೆ ಪಲ್ಟಿಯಾದ ಆಟೋ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಗೊಂಡಿರುವ 10 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.



