AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಲ್ಕಿ ಬಳಿ ಭೀಕರ ಅಪಘಾತ: ಗಾಣಗಾಪುರಕ್ಕೆ ತೆರಳುತ್ತಿದ್ದ ತೆಲಂಗಾಣದ ಮೂವರು ಭಕ್ತರ ದುರ್ಮರಣ

ಬುಧವಾರ ಬೆಳ್ಳಂಬೆಳಗ್ಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಕಾರು ಮತ್ತು ಕೊರಿಯರ್​ ವಾಹನ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ಭಾಲ್ಕಿ ಬಳಿ ಭೀಕರ ಅಪಘಾತ: ಗಾಣಗಾಪುರಕ್ಕೆ ತೆರಳುತ್ತಿದ್ದ ತೆಲಂಗಾಣದ ಮೂವರು ಭಕ್ತರ ದುರ್ಮರಣ
ಭಾಲ್ಕಿ ನೀಲಮ್ಮನಳ್ಳಿ ತಾಂಡಾ ಬಳಿ ಭೀಕರ ಅಪಘಾತ
ಸುರೇಶ ನಾಯಕ
| Updated By: Ganapathi Sharma|

Updated on:Nov 05, 2025 | 9:45 AM

Share

ಬೀದರ್, ನವೆಂಬರ್ 5: ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ದುರ್ಮರಣ ಹೊಂದಿದ್ದಾರೆ. ಕಾರು ಮತ್ತು ಕೊರಿಯರ್​ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರು ತೆಲಂಗಾಣ ಮೂಲದವರು ಎಂಬುದು ತಿಳಿದುಬಂದಿದೆ. ಅವರೆಲ್ಲ ತೆಲಂಗಾಣದಿಂದ ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ತೆರಳುತ್ತಿದ್ದರು. ಮೃತಪಟ್ಟವರು ರಾಜಪ್ಪ, ನವೀನ್, ನಾಗರಾಜ್ ಎಂದು ತಿಳಿದು ಬಂದಿದೆ. ನಾಗರಾಜ್ ಎಂಬವರು ನಾರಾಯಣ ಖೇಡ್​ನಲ್ಲಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

ಮೈಸೂರು: ಬಿಳಿಕೆರೆ ಬಳಿ ಅಪಘಾತ, ಬೈಕ್ ಸವಾರ ಸಾವು

ಮೈಸೂರು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಬಿ.ಪಿ.ಪರಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹುಣಸೂರು – ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಗೇಟ್ ಬಳಿ ಅಪಘಾತ ಸಂಭವಿಸಿದೆ. ಮೃತ ಪರಮೇಶ್ ವಕೀಲರಾಗಿದ್ದು, ಹುಣಸೂರು ತಾಲೂಕಿನ ಗ್ರಾಮದ ನಿವಾಸಿಯಾಗಿದ್ದರು. ಜಡಗನಕೊಪ್ಪಲಿನಿಂದ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ವೇಗವಾಗಿ ಬಂದ ರೈಲು: ಮುಂದೇನಾಯ್ತು?

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Wed, 5 November 25

ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಹುಲಿ ದಾಳಿ ಮಾಡದಂತೆ ಮಾನವ ಮುಖವಾಡದ ಮಾಸ್ಕ್: ಹೇಗೆ ವರ್ಕ್ ಆಗುತ್ತೆ?
ಹುಲಿ ದಾಳಿ ಮಾಡದಂತೆ ಮಾನವ ಮುಖವಾಡದ ಮಾಸ್ಕ್: ಹೇಗೆ ವರ್ಕ್ ಆಗುತ್ತೆ?