
ಬೀದರ್, ಜುಲೈ 03: ಅಪಘಾತದಲ್ಲಿ ಮೃತಪಟ್ಟ ಮಗನ (son) ಸಾವಿನ ಸುದ್ದಿ ತಿಳಿದು ತಾಯಿ (Mother) ಹೃದಯಾಘಾತದಿಂದ ಸಾವನಪ್ಪಿರುವಂತಹ ಘಟನೆ ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿಕಾಂತ್ ಜೋಶಿ ಅಲಿಯಾಸ್ ಕಾಂತರಾಜು (45) ಮತ್ತು ತಾಯಿ ಶಾರದಾಬಾಯಿ (86) ಮೃತರು. ಒಂದೇ ದಿನ ಅಮ್ಮ, ಮಗನ ದುರಂತ ಸಾವಿನಿಂದಾಗಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ಸಮೇತ ಗೂಡ್ಸ್ ವಾಹನ ಬಾವಿಗಿಗೆ ಬಿದ್ದು 7 ಜನರ ಪೈಕಿ ಇಬ್ಬರು ಮೃತಪಟ್ಟಿದ್ದು, 5 ಜನ ಗಾಯಗೊಂಡ ಘಟನೆ ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಬೀದರ್‌ನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ಹೋಗುವ ಮಾರ್ಗದಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆಂತರಿಕ ವಿಷಯಗಳನ್ನು ಮಾತಾಡಲ್ಲ ಎಂದ ಸಂಸದ ಯದುವೀರ್ ಒಡೆಯರ್
ಅತಿವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಗೆ ಬಿದಿದೆ. ಘೋಡಂಪಳ್ಳಿ ಗ್ರಾಮದ ಚಾಲಕ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತುರಾಜ್(45), ರವಿ (18) ಎಂಬುವವರು ಮೃತಪಟ್ಟಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತು.
ಅಪಘಾತದಲ್ಲಿ ಸಾವನ್ನಪ್ಪಿದ ಲಕ್ಷ್ಮಿಕಾಂತ್ ಜೋಶಿ ಅಲಿಯಾಸ್ ಕಾಂತರಾಜು ಸಾವಿನ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಶಾರದಾಬಾಯಿ (86) ಮೃತ ತಾಯಿ. ಅತ್ತ ಅಪಘಾತದಲ್ಲಿ ಮಗ ಬಲಿಯಾದರೆ, ಇತ್ತ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಅಮ್ಮ ಮತ್ತು ಮಗನ ದುರಂತ ಸಾವಿನ ಘಟನೆಯಿಂದ ಘೋಡಂಪಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಕೇರಳದ ಕೊಟ್ಟಿಯೂರು ದೇವಸ್ಥಾನದಿಂದ ಬರುವಾಗ ಕೇರಳ- ಕರ್ನಾಟಕ ಗಡಿ ಬಾವಲಿ ಸಮೀಪದ ಕಾಟಿಕೊಳಂ ಬಳಿ ಭೀಕರ ಅಪಘಾತ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮೈಸೂರಿನ ಸಿದ್ದಾರ್ಥ ಬಡಾವಣೆ ಅನಂತಭೂಷಣ್ ಮೃತ ಯುವಕ.
ಇದನ್ನೂ ಓದಿ: ಸ್ವಯಂ ನಿವೃತ್ತಿ ಬಗ್ಗೆ ಎಎಸ್ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ ಇಲ್ಲಿದೆ ನೋಡಿ
ಅಪಘಾತದ ದೃಶ್ಯ ಬಸ್ನ ಡ್ಯಾಶ್ ಬೋರ್ಡ್ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಮಳೆ ನೀರು ನಿಂತಿದ್ದ ಹೊಂಡಕ್ಕೆ ಬಿದ್ದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಹೆಲ್ಮೆಟ್ ಹಾಕಿದ್ದರೂ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಮ್ ಟ್ರೈನರ್ ಆಗಿ ಅನಂತಭೂಷಣ್ ಕೆಲಸ ಮಾಡುತ್ತಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:03 pm, Thu, 3 July 25