ಬೀದರ: ಜಿಲ್ಲೆಯ ಬಸವಕಲ್ಯಾಣದಲ್ಲಿ (Basavakalyana) ನಡೆಯುತ್ತಿರುವ ಸ್ವಾಮೀಜಿಗಳ ನಡೆ ಮೂಲ ಅನುಭವ ಮಂಟಪದ (Anubhav Mantapa) ಕಡೆ ಸಮಾವೇಶದ ಹಿನ್ನಲೆಯಲ್ಲಿ ಬಸವಕಲ್ಯಾಣದಲ್ಲಿ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪವಿದೆ. ಅದು ಎಲ್ಲಿದೆ ಎಂದು ಎಲ್ಲರಿಗೂ ಇದೀಗ ಗೊತ್ತಾಗಿದೆ. ಇಂದು ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಪುರಾತತ್ವ ಇಲಾಖೆ ಮೂಲಕ ಪರಿಶೀಲನೆ ನಡೆಸಬೇಕು. ಮೂಲ ಅನುಭವ ಮಂಟಪದ ದರ್ಶನಕ್ಕೆ ಅವಕಾಶ ನೀಡಬೇಕು. ಪೀರ್ ಪಾಷಾ ಮಸೀದಿಯೇ ಅನುಭವ ಮಂಟಪ ಎಂದು ಬಸವಕಲ್ಯಾಣ ಪಟ್ಟಣದ ಮಹಾಮನೆಯಲ್ಲಿ ಶ್ರೀಗಳು ಹೇಳಿದರು.
ಸ್ವಾಮೀಜಿಗಳ ನಡೆ ಮೂಲ ಅನುಭವ ಮಂಟಪದ ಕಡೆ ಸಮಾವೇಶಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಶ್ರೀರಾಮಸೇನೆ ಸಂಘಟನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗೈರಾಗಿದ್ದಾರೆ.
ಇದನ್ನು ಓದಿ: ಬೀದರ್ ಬಸವಕಲ್ಯಾಣದಲ್ಲಿ ಮಠಾಧೀಶರಿಂದ ಸಭೆ: 14 ಸ್ಥಳಗಳಲ್ಲಿ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ
ಬಸವಕಲ್ಯಾಣದಲ್ಲಿ ಇಂದು (ಜೂನ್ 12) ‘ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ’ ಸಭೆ ನಡೆಯುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಶ್ರೀಗಳು ಜಿಲ್ಲೆಗೆ ಆಗಮಿಸಿದ್ದಾರೆ. ಸಭೆಯಲ್ಲಿ 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪಕ್ಕಾಗಿ ಹೋರಾಟ ನಡೆಸಲು ಶ್ರೀಗಳು ತಯಾರಿ ನಡೆಸಿಕೊಳ್ಳುತ್ತಾರೆ. ಸಭೆ ನಡೆಯುತ್ತಿರುವ ತೇರು ಮೈದಾನ ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹತ್ತು ಸಾವಿರ ಜನರಿಗೆ ಆಗುವಷ್ಟು ಊಟದ ವ್ಯವಸ್ಥೆ ಇದೆ. ಗೋದಿ ಹುಗ್ಗಿ, ರೊಟ್ಟಿ, ಹಿಟ್ಟಿನ ಪಲ್ಲೆ, ಅನ್ನ, ಸಾರು ಸಿದ್ಧವಾಗಿದೆ. ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಡುಗೆ ತಯಾರಿಯಾಗಿದೆ. ಮುಂಜಾನೆಯಿಂದ ಬಾಣಸಿಗರು ಅಡುಗೆ ಮಾಡುತ್ತಿದ್ದಾರೆ. ಮಠಾಧೀಶರ ಜೊತೆ ಸಾರ್ವಜನಿಕರು ಕೂಡಾ ಬರುತ್ತಿರುವ ಹಿನ್ನೆಲೆ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.