ತೇರು ಮೈದಾನದ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮಠಾಧೀಶರ ಸಮಾವೇಶ ನಡೆಯಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಎಸ್ಪಿ, ಎಎಸ್ಪಿ, ಮೂವರು ಡಿವೈಎಸ್ಪಿ, ಕೆಎಸ್ಆರ್ಪಿ ತುಕಡಿ, ಡಿಎಆರ್ ತುಕಡಿ ಸೇರಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನು ಸಮಾವೇಶಕ್ಕೆ ಆಗಮಿಸುವವರಿಗೆ ಮೈದಾನದಲ್ಲೇ ಊಟದ ವ್ಯವಸ್ಥೆ ಇರುತ್ತದೆ.
ಹತ್ತು ಸಾವಿರ ಜನರಿಗೆ ಆಗುವಷ್ಟು ಊಟದ ವ್ಯವಸ್ಥೆ ಇದೆ. ಗೋದಿ ಹುಗ್ಗಿ, ರೊಟ್ಟಿ, ಹಿಟ್ಟಿನ ಪಲ್ಲೆ, ಅನ್ನ, ಸಾರು ಸಿದ್ಧವಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಡುಗೆ ತಯಾರಿಯಾಗುತ್ತಿದೆ. ಮುಂಜಾನೆಯಿಂದ ಬಾಣಸಿಗರು ಅಡುಗೆ ಮಾಡುತ್ತಿದ್ದಾರೆ. ಮಠಾಧೀಶರ ಜೊತೆ ಸಾರ್ವಜನಿಕರು ಕೂಡಾ ಬರುತ್ತಿರುವ ಹಿನ್ನೆಲೆ ಊಟದ ವ್ಯವಸ್ಥೆ ಮಾಡಲಾಗಿದೆ.
ಬೃಹತ್ ವೇದಿಕೆ ಸಜ್ಜು:
ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜಾಗಿದೆ. ಸಾವಿರಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಂಘಟಕರು ಸಮಾವೇಶಕ್ಕೆ ಬರುವವರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಿದ್ದಾರೆ ವೇದಿಕೆ ಮೇಲೆ ಎಲ್ಸಿಡಿ ಸ್ಕ್ರೀನ್ ಕೂಡಾ ಅಳವಡಿಕೆ ಮಾಡಿದ್ದಾರೆ.
ಪೀರ್ ಪಾಷಾ ದರ್ಗಾವೇ ಮೂಲ ಅನುಭವ ಮಂಟಪ ಅಂತ ಕೆಲ ಮಠಾಧೀಶರು ಹೇಳುತ್ತಿದ್ದಾರೆ. ಹೀಗಾಗಿ ಪೀರ್ ಪಾಷಾ ದರ್ಗಾವನ್ನು ಸರ್ಕಾರ ವಶ ಪಡಿಸಿಕೊಳ್ಳಬೇಕು ಅಂತ ಆಗ್ರಹಿಸುತ್ತಿರುವ ಸ್ವಾಮೀಜಿಗಳು, ಹೋರಾಟಕ್ಕೆ ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ