ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಅಪಘಾತ ಪ್ರಕರಣ; ಮಧ್ಯಾಹ್ನ 3 ಗಂಟೆಗೆ ಬೀದರ್ ತಲುಪಲಿದೆ 8 ಮೃತದೇಹಗಳು

ಬೆಳಗ್ಗೆ 10 ಗಂಟೆಗೆ ಲಖನೌನಿಂದ ವಿಮಾನದಲ್ಲಿ ಮೃತದೇಹಗಳನ್ನ ರವಾನೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ವಿಮಾನ ಹೈದರಾಬಾದ್ ತಲುಪುತ್ತದೆ. ನಂತರ ಌಂಬುಲೆನ್ಸ್ ಮೂಲಕ ಮೃತದೇಹಗಳು ಹುಟ್ಟೂರಿಗೆ ಬರಲಿವೆ.

ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಅಪಘಾತ ಪ್ರಕರಣ; ಮಧ್ಯಾಹ್ನ 3 ಗಂಟೆಗೆ ಬೀದರ್ ತಲುಪಲಿದೆ 8 ಮೃತದೇಹಗಳು
ಟಿಟಿ ವಾಹನ ಮತ್ತು ಲಾರಿ ನಡುವೆ ಅಪಘಾತ ನಡೆದಿದೆ
Updated By: sandhya thejappa

Updated on: May 30, 2022 | 8:38 AM

ಬೀದರ್: ಉತ್ತರ ಪ್ರದೇಶದ (Uttar Pradesh) ಲಖೀಂಪುರ ಖೇರಿ ಬಳಿ ನಿನ್ನೆ (ಮೇ 29) ಸಂಭವಿಸಿದ ಅಪಘಾತದಲ್ಲಿ (Accident) ಒಂದೇ ಕುಟುಂಬದ ಎಂಟು ಜನರು ಮೃತಪಟ್ಟಿದ್ದಾರೆ. 8 ಮೃತದೇಹಗಳನ್ನ ಇಂದು ಬೀದರ್​ಗೆ ತರಲಾಗುತ್ತದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮೃತದೇಹಗಳು ಬೀದರ್ ತಲುಪಲಿವೆ. ಬೆಳಗ್ಗೆ 10 ಗಂಟೆಗೆ ಲಖನೌನಿಂದ ವಿಮಾನದಲ್ಲಿ ಮೃತದೇಹಗಳನ್ನ ರವಾನೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ವಿಮಾನ ಹೈದರಾಬಾದ್ ತಲುಪುತ್ತದೆ. ನಂತರ ಆ್ಯಂಬುಲೆನ್ಸ್ ಮೂಲಕ ಮೃತದೇಹಗಳು ಹುಟ್ಟೂರಿಗೆ ಬರಲಿವೆ.

ಅಯೋಧ್ಯೆಗೆ ತೆರಳುತ್ತಿದ್ದಾಗ ಟಿಟಿಗೆ ಟ್ರಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಎಂಟು ಜನರು ಸಾವಿಗೀಡಾಗಿದ್ದಾರೆ. ಶವಗಳನ್ನ ಶವಗಳನ್ನು ಕಳುಹಿಸಿ ಕೊಡಲು ವ್ಯವಸ್ಥೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಪ್ರದೇಶ ಸಿಎಂ ಯೋಗಿಗೆ ಮನವಿ ಮಾಡಿದ್ದರು. ಘಟನೆಯಲ್ಲಿ ಸುಮಾರು 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು 8 ಜನರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಕುಮಾರ್(28), ಜಗದಾಂಬಾ(52), ಮನ್ಮಥ(36), ಅನಿಲ್(30) ಸಂತೋಷ(29), ಶಶಿಕಲಾ(38), ಸರಸ್ವತಿ(42) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Trending: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ

ಇದನ್ನೂ ಓದಿ
ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ ಪ್ರಕರಣ: ಪ್ರಿನ್ಸಿಪಾಲ್, ಪಿಎಸ್ಐ ಮತ್ತು ಐವರು ಕಾನ್ಸ್‌ಟೇಬಲ್​ಗಳು ಸೇರಿ 7 ಜನರ ವಿರುದ್ಧ ಎಫ್​ಐಆರ್​ ದಾಖಲು
Trending: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ
GT vs RR, IPL 2022 Final: ಫೈನಲ್​ನಲ್ಲಿ ಗೆದ್ದ ತಕ್ಷಣ ಗುಜರಾತ್ ಟೈಟಾನ್ಸ್ ಆಟಗಾರರು ಮಾಡಿದ್ದೇನು ನೋಡಿ
ವಿಮಾನ ಪತನದ ಸ್ಥಳ ಗುರುತಿಸಿದ ನೇಪಾಳ ಸೇನೆ: 22 ಮಂದಿ ಜೀವಂತ ಇರುವುದು ಅನುಮಾನ

ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು:
ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನೈಸ್ ರಸ್ತೆಯಲ್ಲಿ ನಡೆದಿದೆ. ರಾಮನಗರ ಮೂಲದ ಅಡುಗೆ ಭಟ್ಟ ಶಿವರಾಜ್(40) ಮೃತ ವ್ಯಕ್ತಿ. ಈ ಬಗ್ಗೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 8:30 am, Mon, 30 May 22