ಬೀದರ್ನಲ್ಲಿ ಘೋರ ದುರಂತ: ಒಂದೇ ಕುಟುಂಬ ನಾಲ್ವರು ಆತ್ಮಹತ್ಯೆ, ಕಾರಣವೇನು?
ಒಂದೇ ಕುಟುಂಬ ಆರು ಜನ ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರು ಮಕ್ಕಳ ಸಮೇತ ದಂಪತಿ ತುಂಬಿ ಹರಿಯುತ್ತಿರುವ ಕಾಲುವೆಗೆ ಹಾರಿದ್ದಾರೆ. ಈ ಆರು ಜನರ ಪೈಕಿ ನಾಲ್ವರು ಸಾವನ್ನಪ್ಪಿದ್ದರೆ ಇನ್ನಿಬ್ಬರು ಬದುಕುಳಿದಿದ್ದಾರೆ. ಇನ್ನು ಇಡೀ ಕುಟುಂಬ ಆತ್ಮಹತ್ಯೆಗೆ ಕಾರಣವೇನು? ಎನ್ನುವ ವಿವರ ಇಲ್ಲಿದೆ.

ಬೀದರ್, (ಸೆಪ್ಟೆಂಬರ್ 09): ಕಾಲುವೆಗೆ ಜಿಗಿದು ಒಂದೇ ಕುಟುಂಬದ (Family) ನಾಲ್ವರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘೋರ ದುರಂತ ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕಿನ ಮರೂರು ಬಳಿ ನಡೆದಿದೆ. ನಾಲ್ವರು ಮಕ್ಕಳ ಹಾಗೂ ದಂಪತಿ ಸೇರಿ ಒಟ್ಟು 6 ಜನರು ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 6 ಜನರ ಪೈಕಿ ನಾಲ್ವರು ಸಾವಪ್ಪಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೀದರ್ ಮೈಲೂರಿನ ಶಿವಮೂರ್ತಿ(45), ಶ್ರೀಕಾಂತ್(8), ಹೃತಿಕ್(4), 7 ತಿಂಗಳ ಮಗು ರಾಕೇಶ್ ಮೃತ ದುರ್ವೈವಿಗಳು. ಅದೃಷ್ಟವಶಾತ್ ತಾಯಿ ರಮಾಬಾಯಿ(42) ಹಾಗೂ ಪುತ್ರ ಶ್ರೀಕಾಂತ್(7) ಬದುಕಿಳಿದಿದ್ದಾರೆ.
ಬೀದರ್ ನಗರದ ಮೈಲೂರಿನಲ್ಲಿ ವಾಸ ಮಾಡುತ್ತಿದ್ದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ದಂಪತಿ ತಮ್ಮ ನಾಲ್ವರು ಮಕ್ಕಳೊಂದಿಗೆ ಒಂದೇ ಸಾರಿ ಕ್ಯಾನಲ್ ಗೆ ಹಾರಿದ್ದು, ತಂದೆ ಹಾಗೂ ಪುಟ್ಟ ಮಗು ಸಾರಿ ಮೂರು ಮಕ್ಕಳು ನಾಲೆಯಲ್ಲೇ ದಾರುಣವಾಗಿ ಸಾವುಕಂಡಿದ್ದಾರೆ. ಇನ್ನು ತಾಯಿ ಹಾಗೂ ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲಬಾದೆಗೆ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ಹಾಗೂ ಸಚಿವ ಈಶ್ವರ್ ಖಂಡ್ರೆ ಭೇಟಿ ಪರಿಶೀಲನೆ ನಡೆಸಿದ್ದು, ಸದ್ಯ ಮೃತದೇಹಗಳನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
Published On - 7:16 pm, Tue, 9 September 25



