
ಬೀದರ್, ಜೂನ್ 08: ಬೀದರ್ ನಗರದ ಓಲ್ಡ್ ಸಿಡಿ ಹಾಗೂ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ಪಟ್ಣಣದಲ್ಲಿ ರವಿವಾರ (ಜೂ.08) ಜೀವಂತ ಮೀನುಗಳನ್ನು (Fish) ನುಂಗುವುದಕ್ಕಾಗಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಜೂನ್ 8, ಮಿರಗ ಮಳೆ ಮತ್ತು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಜೀವಂತ ಮೀನಿನ ಬಾಯಿಯೊಳಗೆ ಆರ್ಯುವೇದ ಔಷಧಿಯನ್ನು ಹಾಕಿ ನುಂಗಿದರೆ ಕೆಮ್ಮು, ಧಮ್ಮು, ಕಮಾಲೆ, ಅಸ್ತಮಾದಂತಹ ಖಾಯಿಲೆಗಳು ವಾಸಿಯಾಗುತ್ತೆದೆ ಎಂಬುವುದು ಜನರ ನಂಬಿಕೆಯಾಗಿದೆ.
ಈ ರೀತಿಯಾಗಿ ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ. ವರ್ಷದಲ್ಲಿ ಒಂದು ದಿನ ಮಾತ್ರ ಜಿವಂತ ಮೀನುಗಳನ್ನ ನುಂಗಲಾಗುತ್ತದೆ. ಶತಮಾನದಿಂದ ಇಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಜೂನ್ ತಿಂಗಳು ಆರಂಭದಲ್ಲಿ ಅಂದರೇ ಮಿರುಗು ಮಳೆಯಾದ ತಕ್ಷಣ, ಅಸ್ತಮಾ, ಕೆಮ್ಮು, ಕಾಮಾಲೆ ರೋಗಗಳು ಇದ್ದವರು ಇಲ್ಲಿಗೆ ಬಂದು ಜಿವಂತ ಮೀನುಗಳನ್ನ ನುಂಗಿ ತಮ್ಮ ಕಾಯಿಲೆಗಳನ್ನು ಕಡಿಮೆಮಾಡಿಕೊಂಡು ಹೋಗುತ್ತಾರೆ.
“ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದ ಶರಣಪ್ಪ ಜಗದಾಳೆ ಕುಟುಂಬದವರು ಆರ್ಯುವೇದಿಕ ಔಷಧಿಯನ್ನು ಜೀವಂತ ಮೀನುಗಳ ಬಾಯಿಯಲ್ಲಿ ಹಾಕುತ್ತಾರೆ. ಬಳಿಕ, ಅಸ್ತಮಾ, ಕಾಮಾಲೆಯಂತ ರೋಗಳಿಂದ ಬಳಲುತ್ತಿರುವ ರೋಗಿಗಳಿಗೆ ನೀಡಿ, ಮೀನು ನುಂಗಿಸಿ ಕಾಯಿಲೆಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದಾರೆ. ವರ್ಷದಲ್ಲಿ ಒಂದು ಸಲ ಮಾತ್ರ ಇವರು ಜನರಿಗೆ ಆರ್ಯುವೇದಿಕ ಔಷಧಿಯನ್ನು ಮೀನಿನ ಬಾಯಿಯಲ್ಲಿ ಹಾಕಿ ಜೀವಂತ ಮೀನುಗಳನ್ನ ನುಂಗಿಸುತ್ತಾರೆ. ಹೀಗೇ ಜೀವಂತ ಮೀನುಗಳನ್ನ ನುಂಗಿಸುವುದರಿಂದ ಕೆಮ್ಮ, ದಮ್ಮು, ಕಾಮಾಲೆಯಂತಹ ರೋಗಿಗಳು ಒಂದೇ ವಾರದಲ್ಲಿ ಕಡಿಮೆಯಾಗತ್ತದೆ ಎಂದು ಜನರು ಕೂಡಾ ನಂಬಿಕೊಂಡಿದ್ದಾರೆ.
ಜೀವಂತ ಮೀನುಗಳನ್ನು ನುಂಗುವ ಸಲುವಾಗಿ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ನೂರಾರು ಜನರು ಬರುತ್ತಾರೆ. ಮೀನುಗಳನ್ನು ನುಂಗಿ ಹೋಗುತ್ತಾರೆ. ಇಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮಿನುಗಳನ್ನ ನುಂಗುತ್ತಾರೆ. ಒಂದು ಇಂಚಿನ ಮೀನಿನಿಂದ ಹಿಡಿದು ಮೂರು ನಾಲ್ಕು ಇಂಚಿನ ಜೀವಂತ ಮೀನುಗಳನ್ನು ಗಂಟಲಿಗೆ ಇಟ್ಟುಕೊಂಡು ನುಂಗಿ ನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಮನಷ್ಯನ ರೋಗಗಳು ವಾಸಿಯಾಗುತ್ತವೇಂದು ಆರ್ಯವೇದಿಕ ಔಷಧಿಕೊಡುವ ಕುಟುಂಬದವರು ಹೇಳಿದ್ದಾರೆ.
ಇಲ್ಲಿನ ಇನ್ನೊಂದು ವಿಶೇಷವೆನೆಂದರೇ 3 ರಿಂದ 4ಇಂಚಿನ ಮೀನುಗಳನ್ನು ನುಂಗಿದರೂ ಯಾರೊಬ್ಬರಿಗೂ ಮೀನು ಗಂಟಲಿಗೆ ಸಿಕ್ಕಿ ಹಾಕೊಂಡ ಉದಾಹರಣೆ ಇಲ್ಲ. ಮಕ್ಕಳು ಕೂಡ ಮೀನುಗಳನ್ನು ನುಂಗಿ ಖುಷಿಪಡುತ್ತಾರೆ. ಇನ್ನೂ ಕೆಲ ಮಕ್ಕಳು ಮೀನುಗಳನ್ನ ನೋಡಿ ಹೆದರಿಕೊಂಡು ಚಿರಾಡಿ ಅತ್ತರು ಕೂಡಾ ಪಾಲಕರು ಒತ್ತಾಯ ಪೂರ್ವಕವಾಗಿ ಮಕ್ಕಳಿಗೆ ಮೀನುಗಳನ್ನ ನುಂಗಿಸುತ್ತಾರೆ.
ಇದನ್ನೂ ಓದಿ: ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ
ಮೀನುಗಳನ್ನು ಮಾರಾಟ ಮಾಡುವ ವ್ಯಾಪರಿಗಳಿಗೂ ಕೂಡಾ ಇದು ಸುಗ್ಗಿಯಕಾಲ ಅಂತಲೇ ಹೇಳಬಹುದು. ಒಂದು ಚಿಕ್ಕ ಮೀನಿಗೆ ನೂರರಿಂದ ಎರಡು ನೂರು ರೂಪಾಯಿ ಹಣ ಪಡೆದು ಮೀನುಗಳನ್ನ ಮಾರಾಟ ಮಾಡುತ್ತಾರೆ. ಜನರು ಕೂಡ ಖಾಯಿಲೆ ಕಡಿಮೆಯಾಗುತ್ತದೆ ಅನ್ನುವ ಆಸೆಯಿಂದ ಎಷ್ಟೇ ಹಣವಾದರೂ ಕೊಟ್ಟು ಮೀನು ಖರೀದಿಸಿ, ನುಂಗಿ ತಮ್ಮ ಕಾಯಿಲೆಯನ್ನು ವಾಸಿಯಾಗುತ್ತೆ ಅಂತ ಅಂದುಕೊಂಡು ಮನೆಗೆ ಹೋಗುತ್ತಿದ್ದಾರೆ. ಇಲ್ಲಿಗೆ ಬಂದವರು ಜನರು ಕಾಯಿಲೆ ಕಡಿಮೆಯಾಗಿದೆ ಅಂತಲೇ ಹೇಳಿದ್ದಾರೆ.
Published On - 4:22 pm, Sun, 8 June 25