ಮಹಿಳಾ PSI ಮೇಲೆ ಹಲ್ಲೆ; ಕಾನ್ಸಸ್ಟೇಬಲ್ ವಿರುದ್ದ ಗಂಭೀರ ಆರೋಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 4:53 PM

ಬೀದರ್(Bidar)​ನ ನ್ಯೂಟೌನ್ ಠಾಣೆ ಕಾನ್ಸ್​ಟೇಬಲ್​ವೊಬ್ಬ ಮಹಿಳಾ ಪಿಎಸ್ಐ ಮೇಲೆ​ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪಿಸಿ ತಡವಾಗಿ ಬಂದಿದ್ದರು. ಇದನ್ನು ಪ್ರಶ್ನಿಸಿದ ಪಿಎಸ್ಐ ಯಲ್ಲಮ್ಮ ಅವರ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾರಂತೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮಹಿಳಾ PSI ಮೇಲೆ ಹಲ್ಲೆ; ಕಾನ್ಸಸ್ಟೇಬಲ್ ವಿರುದ್ದ ಗಂಭೀರ ಆರೋಪ
ಆರೋಪಿ ಕಾನ್ಸ್​ಟೇಬಲ್​, ಹಲ್ಲೆಗೊಳಗಾದ ಪಿಎಸ್​ಐ
Follow us on

ಬೀದರ್, ಸೆ.29: ಮಹಿಳಾ ಪಿಎಸ್ಐ ಮೇಲೆ​ ಹಲ್ಲೆ ಮಾಡಿದ ಆರೋಪ ಬೀದರ್(Bidar)​ನ ನ್ಯೂಟೌನ್ ಠಾಣೆ ಕಾನ್ಸ್​ಟೇಬಲ್ ಧನರಾಜ್​ ವಿರುದ್ಧ​ ಕೇಳಿಬಂದಿದೆ. ಇಂದು ಗ್ರಾಮ ಆಡಳಿತಾಧಿಕಾರಿ ಪರೀಕ್ಷಾ ಹಿನ್ನಲೆ ಬೀದರ್​ನ ಮಾದವನಗರದ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರು. ಅದರಂತೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪಿಸಿ ತಡವಾಗಿ ಬಂದಿದ್ದರು. ಇದನ್ನು ಪ್ರಶ್ನಿಸಿದ ಪಿಎಸ್ಐ ಯಲ್ಲಮ್ಮ ಅವರ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಪಿಎಸ್​ಐ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳೆ ವಿಚಾರಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಬಳಿ ಸೆ.13ರಂದು ಮಹಿಳೆ ವಿಚಾರಕ್ಕೆ ತನ್ನ  ಸ್ನೇಹಿತ ಕೈರ್ ಸಿಂಗ್(29)ಎಂಬಾತನನ್ನು ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಸುಶಾಂತ್ ಸಿಂಗ್ ಹಾಗೂ ಸಾಧನ್ ಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದೇ ಶೆಡ್‌ನಲ್ಲಿದ್ದುಕೊಂಡು ಕೂಲಿ ಕೆಲಸ ಮಾಡ್ತಿದ್ದ ಮೂವರು ಸ್ನೇಹಿತರ ಮಧ್ಯೆ ಮಹಿಳೆ ವಿಚಾರಕ್ಕೆ ಪರಸ್ಪರ ಜಗಳ ನಡೆದಿದ್ದರಿಂದ ಕೊಲೆಗೈದು ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಪ್ರೇಯಸಿ ತಾಯಿಗೆ ಚಾಕು ಹಾಕಿದ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು

ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಕಾರ್ಮಿಕ ಸಾವು,

ಕೋಲಾರ: ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದ ಬಳಿ ಇರುವ ಪ್ರಕಾಶ್ ಬ್ಯುಲ್ಡ್ ಕಾನ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಮೇಲಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.  ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ಬಳಸದೆ ಇರುವುದೇ ಸಾವಿಗೆ ಕಾರಣ ಎನ್ನಲಾಗಿದೆ. ಬಿಹಾರ ಮೂಲದ ಶಿವಶಂಕರ್ ರಾಯ್ ಮೃತ ಕಾರ್ಮಿಕ, ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sun, 29 September 24