ಬೀದರ್, ಜೂ.08: ನಗರದ ಓಲ್ಡ್ ಸಿಡಿ ಹಾಗೂ ಬೀದರ್ ಜಿಲ್ಲೆಯ ಹುಮ್ನಾಬಾದ್(Humnabad) ಪಟ್ಣಣದಲ್ಲಿಂದು ಜನರು ಜೀವಂತ ಮೀನು(Alive Fish)ಗಳನ್ನ ನುಂಗುವುದಕ್ಕಾಗಿಯೇ ನೂರಾರು ಸಂಖ್ಯೆಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜನ ಜಂಗುಳಿಯೇ ಸೇರಿತ್ತು. ಜೂನ್ 8 ರಿಂದ ಮಿರಗ ಮಳೆ ಆರಂಭವಾಗುವ ಈ ದಿನದಂದೂ ಆರ್ಯುವೇದ ಔಷಧಿಯನ್ನ ಜೀವಂತ ಮೀನಿನ ಬಾಯಿಯೊಳಗೆ ಹಾಕಿ ಅದನ್ನ ಜೀವಂತವಾಗಿ ನುಂಗಿದರೆ ಕೆಮ್ಮು, ಧಮ್ಮು, ಕಮಾಲೇ, ಅಸ್ತಮಾದಂತಾ ಖಾಯಿಲೆಗಳು ವಾಸಿಯಾಗುತ್ತದೆ ಎಂದು ಜನರು ನಂಬಿಕೊಂಡಿದ್ದು, ಅದರಂತೆ ಇದು ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ.
ಶತಮಾನದಿಂದ ಇಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಪ್ರತಿವರ್ಷ ಜೂನ್ ತಿಂಗಳು ಆರಂಭದಲ್ಲಿ ಅಂದರೇ ಮಿರುಗು ಮಳೆಯಾದ ತಕ್ಷಣ ಇಲ್ಲಿ ಅಸ್ತಮಾ, ಕೆಮ್ಮಿ ಕಾಮಾಲೆ ರೋಗಗಳು ಇದ್ದವರು ಇಲ್ಲಿಗೆ ಬಂದು ಜಿವಂತ ಮೀನುಗಳನ್ನ ನುಂಗಿ ತಮ್ಮ ಕಾಯಿಲೆಗಳನ್ನ ಕಡಿಮೆಮಾಡಿಕೊಂಡು ಹೋಗುತ್ತಾರೆ. ಹುಮ್ನಾಬಾದ್ ಪಟ್ಟಣದ ಶರಣಪ್ಪ ಜಗದಾಳೆ ಕುಟುಂಬದವರು ಆರ್ಯುವೇದಿಕ ಔಷಧಿಯನ್ನ ಜೀವಂತ ಮೀನುಗಳ ಬಾಯಿಯಲ್ಲಿ ಹಾಕಿ ಅಸ್ತಮಾ, ಕಾಮಾಲೆಯಂತ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೀನು ನುಂಗಿಸಿ ಕಾಯಿಲೆಯನ್ನ ಕಡಿಮೆ ಮಾಡಿಸುವ ಕೆಲಸವನ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಎರಡು ತಿಂಗಳ ಕಾಲ ಮೀನುಗಾರಿಕೆ ಬಂದ್; ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ
ವರ್ಷದಲ್ಲಿ ಒಂದು ಸಲ ಮಾತ್ರ ಇವರು ಜನರಿಗೆ ಮೀನಿನಲ್ಲಿ ಆರ್ಯುವೇದಿಕ ಔಷದಿಯನ್ನ ಮೀನಿನ ಬಾಯಿಯಲ್ಲಿ ಹಾಕಿ ಜೀವಂತ ಮೀನುಗಳನ್ನ ನುಂಗಿಸುತ್ತಾರೆ. ಹೀಗೇ ಜೀವಂತ ಮೀನುಗಳನ್ನ ನುಂಗಿಸುವುದರಿಂದ ಕೆಮ್ಮ, ದಮ್ಮು, ಕಾಮಾಲೆಯಂತಹ ರೋಗಿಗಳು ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ ಎಂದು ಜನರು ಕೂಡ ನಂಬಿಕೊಂಡಿದ್ದು, ಶತಮಾನದಿಂದ ಇಲ್ಲಿ ಮೀನು ನುಂಗಿಸುವ ಕಾರ್ಯ ನಡೆಯುತ್ತಿದೆ.
ಇಲ್ಲಿ ಜೀವಂತ ಮೀನುಗಳನ್ನ ನುಂಗುವ ಸಲುವಾಗಿ ಕರ್ನಾಟಕ ಸೇರಿದಂತೆ ಬೇರೇ ಬೇರೆ ರಾಜ್ಯ ನೂರಾರು ಜನರು ಬಂದು ಮೀನುಗಳನ್ನ ನುಂಗಿ ಹೋಗುತ್ತಾರೆ. ಇಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರ ವರೆಗೂ ಮಿನುಗಳನ್ನ ನುಂಗುತ್ತಾರೆ. ಒಂದು ಇಂಚಿನ ಮೀನಿನಿಂದ ಹಿಡಿದು ಮೂರು ನಾಲ್ಕು ಇಂಚಿನ ಜೀವಂತ ಮೀನುಗಳನ್ನ ಗಂಟಲಿಗೆ ಇಟ್ಟುಕೊಂಡು ನುಂಗಿ ನೀರು ಕುಡಿಯುತ್ತಾರೆ. ಹೀಗೇ ಮಾಡುವುದರಿಂದ ಮನಷ್ಯನ ರೋಗಗಳು ವಾಸಿಯಾಗುತ್ತವೇಂದು ಆರ್ಯವೇದಿಕ ಔಷಧಿಕೊಡುವ ಕುಟುಂಬದವರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಬೀದರ್ನಲ್ಲಿ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ NCB ಅಧಿಕಾರಿಗಳು
ಇಲ್ಲಿನ ಇನ್ನೊಂದು ವಿಶೇಷವೆನೆಂದರೇ 3 ರಿಂದ 4ಇಂಚಿನ ಮೀನುಗಳನ್ನ ನುಂಗಿದರೂ ಯಾರೊಬ್ಬರಿಗೂ ಮೀನು ಗಂಟಲಿಗೆ ಸಿಕ್ಕಿಹಾಕೊಂಡ ಉದಾಹರಣೆ ಇಲ್ಲ. ಮಕ್ಕಳು ಕೂಡ ಇಲ್ಲಿನ ಮೀನುಗಳನ್ನ ನುಂಗಿ ಖುಷಿಪಡುತ್ತಾರೆ. ಕೆಲ ಮಕ್ಕಳು ಮೀನುಗಳನ್ನ ನೋಡಿ ಹೆದರಿಕೊಂಡು ಚಿರಾಡಿ ಅತ್ತರು ಕೂಡ ಪಾಲಕರು ಒತ್ತಾಯ ಪೂರ್ವಕವಾಗಿ ಮಕ್ಕಳಿಗೆ ಮೀನುಗಳನ್ನ ನುಂಗಿಸುತ್ತಾರೆ. ಮೀನುಗಳನ್ನ ಮಾರಾಟ ಮಾಡುವ ವ್ಯಾಪರಿಗಳಿಗೂ ಕೂಡ ಇದು ಸುಗ್ಗಿಯಕಾಲ ಅಂತಲೇ ಹೇಳಬಹುದು.
ಒಂದು ಚಿಕ್ಕ ಮೀನಿಗೆ ನೂರರಿಂದ ಎರಡು ನೂರು ರೂಪಾಯಿ ಹಣ ಪಡೆದು ಮೀನುಗಳನ್ನ ಮಾರಾಟ ಮಾಡುತ್ತಾರೆ. ಆದರೇ ಜನರು ಕೂಡ ಖಾಯಿಲೆ ಕಡಿಮೆಯಾಗುತ್ತದೆ ಎನ್ನುವ ಆಸೆಯಿಂದ ಎಷ್ಟೇ ಹಣವಾದರೂ ಕೊಟ್ಟು ಮೀನುಕೊಂಡು ನುಂಗಿ ತಮ್ಮ ಕಾಯಿಲೆಯನ್ನ ವಾಸಿಮಾಡಿಕೊಂಡು ಮನೆಗೆ ಹೋಗುತ್ತಾರೆ. ಇಲ್ಲಿಗೆ ಬಂದಿರುವ ಜನರ ಕಾಯಿಲೆ ಕಡಿಮೆಯಾಗಿದೆ ಅಂತಲೇ ಹೇಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ