ಬೀದರ್: ಘೋಡವಾಡಿಯಲ್ಲಿ ದಾಳಿ ಮಾಡುತ್ತಿರುವ ಮಂಗಗಳು, ಕೋಲು ಹಿಡಿದು ಓಡಾಡುತ್ತಿರುವ ಜನರು

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಮಂಗಗಳು ಜನರಲ್ಲಿ ಭಯ ಹುಟ್ಟಿಸಿವೆ. ಕಂಡಕಂಡವರ ಮೇಲೆ ದಾಳಿ ನಡೆಸುತ್ತಿದ್ದು, ಕಳೆದ ಒಂದು ವಾರದಲ್ಲಿ 20 ಮಂದಿ ಗಾಯಗೊಂಡಿದ್ದಾರೆ.

ಬೀದರ್: ಘೋಡವಾಡಿಯಲ್ಲಿ ದಾಳಿ ಮಾಡುತ್ತಿರುವ ಮಂಗಗಳು, ಕೋಲು ಹಿಡಿದು ಓಡಾಡುತ್ತಿರುವ ಜನರು
ಮಂಗಗಳು ದಾಳಿ ನಡೆಸುತ್ತಿರುವ ಹಿನ್ನೆಲೆ ರಕ್ಷಣೆಗಾಗಿ ಕೋಲುಗಳನ್ನು ಹಿಡಿದು ಓಡಾಡುತ್ತಿರುವ ಘೋಡವಾಡಿ ಗ್ರಾಮದ ಜನರು
Follow us
ಸುರೇಶ ನಾಯಕ
| Updated By: Rakesh Nayak Manchi

Updated on: Aug 13, 2023 | 9:07 PM

ಬೀದರ್, ಆಗಸ್ಟ್ 13: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಮಂಗಗಳು ಕಂಡ ಕಂಡವರ ಮೇಲೆ ದಾಳಿ (Monkey Attack) ನಡೆಸುತ್ತಿವೆ. ಕಳೆದ ಒಂದು ವಾರದಲ್ಲಿ 20 ಜನರು ಮಂಗನ ಕಡಿತಕ್ಕೆ ಒಳಗಾಗಿದ್ದಾರೆ. ಮಂಗಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತೇವೆಯಾದರೂ ಕೈಗೆ ಸಿಗುತ್ತಿಲ್ಲವೆಂದು ಗ್ರಾಮಸ್ಥರು ಅಸಾಹಯಕತೆ ತೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೂಡಲೇ ಅವುಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಹುಮ್ನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದ ಜನರ ನೆಮ್ಮಂದಿಯನ್ನ ಮಂಗಗಳು ಹಾಳು ಮಾಡಿದ್ದು, ಕಳೆದ ಎರಡು ವಾರದಿಂದ ಗ್ರಾಮದ 20 ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿವೆ. ಸಿಕ್ಕಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ.

ಗ್ರಾಮದಲ್ಲಿ ಜನರು ಹೊರಗೆ ಓಡಾಡಲು ಕೂಡ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದ ಮನೆಗಳ ಬಾಗಿಲುಗಳನ್ನ ಮುಚ್ಚಿಕೊಂಡು ಕೋಲು ಹಿಡಿದುಕೊಂಡು ಊರಲ್ಲಿ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಪರಿಸ್ಥಿತಿ ಹೀಗಿದ್ದರೂ ಕೋತಿಗಳನ್ನು ಅರಣ್ಯ ಇಲಾಖೆಯವರು ಸೆರೆಹಿಡಿದಿಲ್ಲ. ಗ್ರಾಮದ ಸುತ್ತಮುತ್ತಲೂ ಓಡಾಡುತ್ತಿರುವುದರಿಂದ ಗ್ರಾಮಸ್ಥರಿಗೆ ಭಯ ಶುರುವಾಗಿದೆ. ಜನರು ಭಯದಲ್ಲಿಯೇ ಪ್ರತಿದಿನವೂ ಕಾಲ ಕಳೆಯುತ್ತಿದ್ದಾರೆ. ಈ ಕೋತಿಗಳು ಚಿಕ್ಕವರು ದೊಡ್ಡವರು, ಮಕ್ಕಳು, ಮಹಿಳೆಯರು ಎನ್ನದೆ ದಾಳಿ ನಡೆಸುತ್ತಿದ್ದು, ಗ್ರಾಮದ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಚಿರತೆ ದಾಳಿಗೆ ಮಹಿಳೆ ಬಲಿ; ಅರಣ್ಯಾಧಿಕಾರಿಗಳ ವಿರುದ್ದ ಕುಟುಂಬಸ್ಥರ ಆಕ್ರೋಶ

ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಕೋತಿಯನ್ನ ಸೇರಿಹಿಡಿಯುವ ಭರವಸೆ ಕೊಟ್ಟು ಹೋಗಿದ್ದಾರೆ. ಹೀಗೆ ಹೋದವರು ಮತ್ತೆ ಗ್ರಾಮಕ್ಕೆ ಅಧಿಕಾರಿಗಳು ಕಾಲಿಟ್ಟಿಲ್ಲ. ಇನ್ನೊಂದೆಡೆ, ಗ್ರಾಮಸ್ಥರು ಕೋತಿಯನ್ನ ಸೇರೆಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಯಾರ ಕೈಗೂ ಸಿಗುತ್ತಿಲ್ಲ. ಇದು ಸಹಜವಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದ್ದು, ಕೋತಿ ಹಿಡಿಯುವವರನ್ನ ಕರೆತಂದು ಕೋತಿ ಹಿಡಿಯಿರಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡುತ್ತಿದ್ದಾರೆ.

ಮಂಗನ ಪುಂಡಾಟಕ್ಕೆ ಬೇಸತ್ತ ಜನರು ಕಳೆದ ಹಲವು ದಿನಗಳಿಂದ ಮನೆಯಿಂದ ಹೊರಬರಲು ಹಿಂದೆಟು ಹಾಕುತ್ತಿದ್ದಾರೆ. ಯಾವಾಗ ಎಲ್ಲಿ ಈ ಹುಚ್ಚು ಕೋತಿ ದಾಳಿ ಮಾಡತ್ತೊ ಎಂದು ಭಯಗೊಂಡಿಂದ್ದಾರೆ. “ನಾನು ಕೂಲಿ ಕೆಸಕ್ಕೆ ಹೋಗುವಾಗ ಕೋತಿ ಕಚ್ಚಿದೆ, ಈಗ ಕೆಲಸವಿಲ್ಲದೆ ಮೆನೆಯಲ್ಲಿದ್ದೇನೆ ಏನು ಮಾಡುವುದು” ಎಂದು ದೇವೆಂದ್ರ ಡಾಂಗೆ ಅಳಲು ತೋಡಿಕೊಂಡಿದ್ದಾರೆ.

ಯಾವೊಂದು ಪ್ರಾಣಿಯನ್ನ ಕೆಣಕದ ಹೊರತು ಅದು ಯಾರೊಬ್ಬರ ಮೇಲೂ ಆಕ್ರಮಣ ಮಾಡುವುದಿಲ್ಲ. ಆದರೆ ಇಲ್ಲಿನ ಮಂಗಗಳು ಅದ್ಯಾಕೇ ಹೀಗೆ ಮಾಡುತ್ತಿವೆ ಅನ್ನೊದು ಮಾತ್ರ ಈ ಗ್ರಾಮದ ಜನರಿಗೆ ಯಕ್ಷ ಪ್ರಶ್ನೇಯಾಗಿ ಕಾಡುತ್ತಿದೆ. ಸುಮ್ಮನಿದ್ದವರು, ಮಲಗಿದ್ದವರನ್ನೂ ಅಟ್ಟಾಡಿಸಿಕೊಂಡು ಮಂಗಗಳು ಕಚ್ಚುತ್ತಿವೆ. ಹುಚ್ಚುಚ್ಚಾಗಿ ವರ್ತಸುತ್ತಾ ಜನರ ಮೇಲೆ ಆಕ್ರಮಣ ಮಾಡಿ ಗ್ರಾಮದ ಜನರ ನಿದ್ದೆಗೆಡಿಸುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಮಂಗಗಳನ್ನು ಸೆರೆ ಹಿಡಿಯುತ್ತಾರಾ ಎಂದು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು