
ಬೆಂಗಳೂರು, (ಡಿಸೆಂಬರ್ 29): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ( assault Case) ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ (HD Revanna) ರಿಲೀಫ್ ಸಿಕ್ಕಿದೆ. ಎಚ್. ಡಿ. ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354A ಅಡಿಯ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹೆಚ್.ಡಿ.ರೇವಣ್ಣ ವಿರುದ್ಧದ ಎರಡು ಸೆಕ್ಷನ್‌ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದುಪಡಿಸಿತ್ತು. ಇದೀಗ ಮತ್ತೊಂದು ಸೆಕ್ಷನ್ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.
ಹೊಳೆನರಸಿಪುರದ ಮಹಿಳೆ ಹೆಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧಿತರಾಗಿದ್ದರು. ಎರಡು ಸೆಕ್ಷನ್ ಗಳಲ್ಲಿ ಹೈಕೋರ್ಟ್ ಒಂದು ಸೆಕ್ಷನ್ ರದ್ದುಪಡಿಸಿತ್ತು. 354 ಎ ಅಡಿಯ ಕೇಸ್ ಕಾಗ್ನಿಜೆನ್ಸ್ ಪಡೆಯಲು 42 ನೇ ಎಸಿಜೆಎಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಕೇಸ್ ರದ್ದಾಗಿದೆ. ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಅನ್ನು ಪರಿಗಣಿಸಲು ನಿರಾಕರಿಸಿದೆ.
ಯಾವುದೇ ಪುರುಷ ಈ ಕೆಳಗಿನ ಕೃತ್ಯಗಳಲ್ಲಿ ತೊಡಗಿದರೆ, ಅವನು ಲೈಂಗಿಕ ಕಿರುಕುಳದ ಅಪರಾಧವನ್ನು ಮಾಡಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಅಸಮ್ಮತಿಯೊಂದಿಗೆ ಮತ್ತು ಸ್ಪಷ್ಟವಾಗಿ ಲೈಂಗಿಕ ಆಸಕ್ತಿಗಳನ್ನು ತೋರಿಸುವ ದೈಹಿಕ ಸ್ಪರ್ಶ, ಲೈಂಗಿಕ ಪರವಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಲೈಂಗಿಕವಾಗಿ ಆಕ್ರಮಣಕಾರಿ ಟೀಕೆಗಳನ್ನು ಮಾಡುವುದು. ಇನ್ನು ಈ ಮೇಲಿನ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ದಂಡ, ಅಥವಾ ಎರಡೂ.
ಸೆಕ್ಷನ್ 354 ಅಡಿಯ ಕೇಸ್ ಅನ್ನು ಹೈಕೋರ್ಟ್ ರದ್ದುಪಡಿಸಿತ್ತು. ಈಗ 354A ಅಡಿಯ ಕೇಸ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಕೈಬಿಟ್ಟಿದೆ. ಹೀಗಾಗಿ ಒಟ್ಟಾರೆ ಪ್ರಕರಣದಿಂದ ಹೆಚ್ ಡಿ ರೇವಣ್ಣಗೆ ರಿಲೀಫ್ ಸಿಕ್ಕಿದೆ.
Published On - 7:28 pm, Mon, 29 December 25