AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್​​ ರೂಮ್ ವಿಡಿಯೋ ಕೇಸಿಗೆ ಸ್ಫೋಟಕ ತಿರುವು: ಹೆಂಡ್ತಿಯ ಅಸಲಿ ಆಟ ಬಿಚ್ಚಿಟ್ಟ ಗಂಡ

ಬೆಡ್​ ರೂಮ್​ ನ ಖಾಸಗಿ ಕ್ಷಣದ ವಿಡಿಯೋ ಮಾಡಿ ಗಂಡ ಸ್ನೇಹಿತರಿಗೆ ಶೇರ್ ಮಾಡುತ್ತಿದ್ದ ಎಂಬ ಪತ್ನಿಯ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪತ್ನಿ ಮಾಡಿದ ಆರೋಪಕ್ಕೆ ಇದೀಗ ಗಂಡ ಇನಾಮುಲ್ ಹಕ್, ವಿಡಿಯೋ ಬಿಡುಗಡೆ ಮಾಡಿದ್ದು, ಹೆಂಡತಿ ಬಗ್ಗೆಯೇ ಸಾಲು ಸಾಲು ಆರೋಪ ಮಾಡಿದ್ದಾನೆ. ಹಾಗಾದ್ರೆ ಇನಾಮುಲ್ ಹಕ್ ರಿಲೀಸ್ ಮಾಡಿರುವ ವಿಡಿಯೋನಲ್ಲಿ ಏನಿದೆ? ಎನ್ನುವ ವಿವರ ಇಲ್ಲಿದೆ.

ಬೆಡ್​​ ರೂಮ್ ವಿಡಿಯೋ ಕೇಸಿಗೆ ಸ್ಫೋಟಕ ತಿರುವು: ಹೆಂಡ್ತಿಯ ಅಸಲಿ ಆಟ ಬಿಚ್ಚಿಟ್ಟ ಗಂಡ
Syed Inamul
ರಮೇಶ್ ಬಿ. ಜವಳಗೇರಾ
|

Updated on:Oct 05, 2025 | 7:15 PM

Share

ಬೆಂಗಳೂರು, (ಅಕ್ಟೋಬರ್ 05): ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಪತಿಯೇ ತನ್ನ ಸ್ನೇಹಿತರ ಜತೆ ಹಂಚಿಕೊಂಡ ಆರೋಪಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮನೆಯ ಬೆಡ್​ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ ಹೆಂಡತಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆ ಖಾಸಗಿ ವಿಡಿಯೋಗಳನ್ನು ದುಬೈಯಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ಗಂಡ ಇನಾಮುಲ್ ಹಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪತ್ನಿಯ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾನೆ.

21 ಮದುವೆಯ ಆರೋಪಕ್ಕೆ ಉತ್ತರ

ಪತಿ ಸೈಯದ್ ಇನಾಮುಲ್ ಹಕ್ 21 ಮದುವೆಯಾಗಿದ್ದಾನೆ ಎಂದು ಮಹಿಳೆ ಅರೋಪಿಸಿದ್ದರು. ಪತ್ನಿಯ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಸೈಯದ್ ಇನಾಮುಲ್ ಹಕ್, ಮದುವೆ ಮುಂಚೆಯೇ ಆಕೆಯೊಂದಿಗೆ ಸಂಬಂಧ ಹೊಂದಿದ್ದು ನಿಜ. ನಾನು 21 ಮದುವೆಯಾಗಿಲ್ಲ, ನನಗೆ ಆಗಿರುವುದು ಒಂದೇ ಮದುವೆ. ನನ್ನ ಬಳಿಯೇ ಅವರು 17 ಲಕ್ಷ ಹಣ ವಸೂಲಿ ಮಾಡಿದ್ದಾರೆ. ನನ್ನ ಪತ್ನಿಗೆ 13 ಲಕ್ಷದ ಒಡವೆ ನಾನೇ ಕೊಡಿಸಿದ್ದೇನೆ. ನಾನು 21 ಮದುವೆ ಆಗಿದ್ದೆ ಆದರೆ ಆಕೆ ಯಾಕೆ ನನ್ನನ್ನು ಮದುವೆಯಾದಳು? ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.‌

ಇದನ್ನೂ ಓದಿ: ಬೆಡ್ ರೂಂನಲ್ಲೇ ರಹಸ್ಯ ಕ್ಯಾಮರಾ, ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸ್ತಿದ್ದ ಪತಿ! ದೂರು ದಾಖಲಾಗ್ತಿದ್ದಂತೆಯೇ ಪರಾರಿ

ಸೈಕೋ ರೀತಿಯಲ್ಲಿ ವರ್ತನೆ

ಆಕೆಯೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರಿಂದ ಸಂಬಂಧ ಬೆಳೆಯಿತು. ಆದರೆ ಆಕೆಯೇ ನನ್ನನ್ನು ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ನನಗೆ ಸಾಕಷ್ಟು ಟಾರ್ಚರ್ ಕೊಡುತ್ತಿದ್ದಳು.

ಪತ್ನಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಪತ್ನಿಯ ಅಕ್ಕಳಿಗೂ ಎರಡು ಬಾರಿ ಡಿವೋರ್ಸ್ ಆಗಿದೆ. ಆಕೆಯೂ ಮಾಜಿ ಪತಿಗಳಿಂದ ಹಣ ವಸೂಲಿ ಮಾಡಿದ್ದಾರೆ. ನಾನು ಆಕೆಯನ್ನು ಲವ್ ಮಾಡಿ ಮದುವೆಯಾಗಿದ್ದೇನೆ. ಯಾವ ವ್ಯಕ್ತಿ ತನ್ನ ಹೆಂಡತಿ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸುತ್ತಾನೆ ಹೇಳಿ ಎಂದು ಆರೋಪಿ ಸೈಯದ್ ಇನಾಮುಲ್ ಹಕ್ ಪ್ರಶ್ನಿಸಿದ್ದಾನೆ,

ಪತ್ನಿ ನನ್ನ ತಂದೆ ತಾಯಿಗೆ ಪ್ರತಿ ನಿತ್ಯ ಹೊಡೆಯುತ್ತಿದ್ದಳು. ಆಗಲೂ ಸಹ ನಾನು ಸಿಸಿಟಿವಿ ಹಾಕಿಸಿಲ್ಲ. ನಾನು ಯಾವುದೇ ವಿಡಿಯೋ ಶೂಟ್ ಮಾಡಿಲ್ಲ ಎಂದು ಸೈಯದ್ ಇನಾಮುಲ್ ಹಕ್ ತನ್ನ ಅಳಲು ತೋಡಿಕೊಂಡಿದ್ದಾನೆ. ಪತ್ನಿಯ ಈ ಆರೋಪಗಳಿಂದ ನೊಂದಿದ್ದೇನೆ ಅಂತಾನೂ ಹೇಳಿಕೊಂಡಿದ್ದಾನೆ. ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿರುವ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Sun, 5 October 25