ಮೈಸೂರಿನಲ್ಲಿ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

|

Updated on: Apr 17, 2021 | 6:05 PM

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗ್ರಂಥಾಲಯಕ್ಕೆ ರಾತ್ರಿ 10 ಗಂಟೆಗೆ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ಸ್ಥಳಿಯರು ಬೆಂಕಿ ನಂದಿಸಿದ್ದರು. ಆದರೆ ಮತ್ತೆ ಅದೇ ಸ್ಥಳದಲ್ಲಿ ರಾತ್ರಿ 2 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅದಕ್ಕೆ ಕಾರಣವಾಗಿರುವುದು ವ್ಯಕ್ತಿಯೊಬ್ಬ ಬೀಡಿ ಹಚ್ಚಿಕೊಂಡು ಬೆಂಕಿ ಕಡ್ಡಿಯನ್ನು ಪಕ್ಕದ ಸೋಫಾ ಅಂಗಡಿಯತ್ತ ಬಿಸಾಡಿದ್ದ. ಸೋಫಾ ಅಂಗಡಿಯಿಂದ ಗ್ರಂಥಾಲಯಕ್ಕೆ ಬೆಂಕಿ ಹರಡಿತ್ತು ಎಂಬ ಆತಂಕಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ. ಹೀಗೆ ಬೆಂಕಿ […]

ಮೈಸೂರಿನಲ್ಲಿ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ
Follow us on

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗ್ರಂಥಾಲಯಕ್ಕೆ ರಾತ್ರಿ 10 ಗಂಟೆಗೆ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ಸ್ಥಳಿಯರು ಬೆಂಕಿ ನಂದಿಸಿದ್ದರು. ಆದರೆ ಮತ್ತೆ ಅದೇ ಸ್ಥಳದಲ್ಲಿ ರಾತ್ರಿ 2 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅದಕ್ಕೆ ಕಾರಣವಾಗಿರುವುದು ವ್ಯಕ್ತಿಯೊಬ್ಬ ಬೀಡಿ ಹಚ್ಚಿಕೊಂಡು ಬೆಂಕಿ ಕಡ್ಡಿಯನ್ನು ಪಕ್ಕದ ಸೋಫಾ ಅಂಗಡಿಯತ್ತ ಬಿಸಾಡಿದ್ದ. ಸೋಫಾ ಅಂಗಡಿಯಿಂದ ಗ್ರಂಥಾಲಯಕ್ಕೆ ಬೆಂಕಿ ಹರಡಿತ್ತು ಎಂಬ ಆತಂಕಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ. ಹೀಗೆ ಬೆಂಕಿ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಕರಣದ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಮೊದಲು ಚಿಕ್ಕದಾಗಿ ಸೋಫಾ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿ ಗ್ರಂಥಾಲಯಕ್ಕೂ ಹರಡಿತ್ತು. ಸೈಯದ್ ನಾಸೀರ್ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಸೈಯದ್ ನಾಸೀರ್ ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿದ್ದಾ? ಅಥವಾ ಅಕಸ್ಮಿಕವಾಗಿ ಬೆಂಕಿ ಕಿಡಿ ಎಸೆದಿದ್ದಾನಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಂಪೂರ್ಣ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಏನಾಗಿತ್ತು?: ಮೈಸೂರಿನ ರಾಜೀವ್‌ ನಗರದಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಅವ​ರ ಗ್ರಂಥಾಲಯದ 11 ಸಾವಿರ ಪುಸ್ತಕಗಳು ಸುಟ್ಟು ಕರಕಲಾಗಿದ್ದವು. ಈ ಜ್ಞಾನ ದೇಗುಲವನ್ನು 2011ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಸಯ್ಯದ್ ಇಸಾಕ್ ತಮ್ಮ ಉಳಿತಾಯದ ಹಣದಲ್ಲಿ ಗುಡಿಸಿಲಿನಲ್ಲೇ ಗ್ರಂಥಾಲಯ ನಿರ್ಮಿಸಿದ್ದರು. ತನಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಇತರರಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಿದ್ದ ಸಯ್ಯದ್​ರ ಗ್ರಂಥಾಲಯ ಹಾಗೂ ಅವರ ಈ ಪ್ರೀತಿ ಮೈಸೂರಿನಲ್ಲಿ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದರು.

ಇನ್ನು ಸಯ್ಯದ್ ತಮ್ಮ ಗ್ರಂಥಾಲಯದಲ್ಲಿ ಭಗವದ್ಗೀತೆ, ಕುರಾನ್, ಬೈಬಲ್‌ನ ಕನ್ನಡ ಪುಸ್ತಕಗಳನ್ನ ಓದಲು ಇಟ್ಟಿದ್ದರು. ಚರಂಡಿ ಸ್ವಚ್ಛತೆ, ಮ್ಯಾನ್‌ಹೋಲ್ ಕ್ಲೀನಿಂಗ್ ಮಾಡುವ ಕಾಯಕದ ಸಯ್ಯದ್ ಬೆಂಕಿಗಾಹುತಿಯಾಗಿರುವ ಪುಸ್ತಕಗಳ ನೋಡಿ ಇಡೀ ನಾಡು ಮಮ್ಮಲಮರುಗಿತ್ತು; ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ಪ್ರಕರಣ ಏನು? ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ

(big twist to syed isak library fire incident in rajivnagar mysuru)

Published On - 5:59 pm, Sat, 17 April 21