ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ

ಮೈಸೂರಿನ ರಾಜೀವ್‌ ನಗರದಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಸಯ್ಯದ್ ಇಸಾಕ್​ರ ಗ್ರಂಥಾಲಯದ 11 ಸಾವಿರ ಪುಸ್ತಕಗಳು ಸುಟ್ಟುಭಸ್ಮವಾಗಿದೆ. ಈ ಜ್ಞಾನ ದೇಗುಲ 2011ರಲ್ಲಿ ಸ್ಥಾಪನೆ ಮಾಡಲಾಗಿದೆ. ಸಯ್ಯದ್ ಇಸಾಕ್ ತನ್ನ ಉಳಿತಾಯದ ಹಣದಲ್ಲಿ ಗುಡಿಸಿಲಿನಲ್ಲೇ ಗ್ರಂಥಾಲಯ ನಿರ್ಮಿಸಿದ್ರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ
ಕನ್ನಡ ಪ್ರೇಮಿ ಸಯ್ಯದ್ ಇಸಾಕ್​ರ ಗ್ರಂಥಾಲಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Apr 10, 2021 | 12:42 PM

ಮೈಸೂರು: ತಲೆ ತಗ್ಗಿಸಿ ನನ್ನನ್ನು ಓದು, ತಲೆ ಎತ್ತಿ ನಿಲ್ಲುವಷ್ಟು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಪುಸ್ತಕಗಳು ಹೇಳುತ್ತವೆ. ಯಾಕಂದ್ರೆ ಪುಸ್ತಕಗಳಿಗೆ ಅಷ್ಟು ಮಹತ್ವವಿದೆ. ವಿದ್ಯೆ ಬಲ್ಲವನು ಏನು ಬೇಕಾದರೂ ಮಾಡಬಲ್ಲ. ಆದರೆ ಮೈಸೂರಿನ ಗ್ರಂಥಾಲಯಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಗ್ರಂಥಾಲಯದಲ್ಲಿದ್ದ 11 ಸಾವಿರ ಪುಸ್ತಕಗಳು ಸುಟ್ಟುಭಸ್ಮವಾಗಿವೆ. ಸಾಂಸ್ಕೃತಿಕ ನಗರಿ ಮೈಸೂರಿನ ಕನ್ನಡ ಪ್ರೇಮಿ ಸಯ್ಯದ್ ಅವರ ಗ್ರಂಥಾಲಯಕ್ಕೆ ಬೆಂಕಿ ಹೊತ್ತುಕೊಂಡಿದ್ದು ಪುಸ್ತಕಗಳು ಬೆಂಕಿಗಾಹುತಿಯಾಗಿವೆ.

ಮೈಸೂರಿನ ರಾಜೀವ್‌ ನಗರದಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಅವ​ರ ಗ್ರಂಥಾಲಯದ 11 ಸಾವಿರ ಪುಸ್ತಕಗಳು ಸುಟ್ಟು ಕರಕಲಾಗಿವೆ. ಈ ಜ್ಞಾನ ದೇಗುಲವನ್ನು 2011ರಲ್ಲಿ ಸ್ಥಾಪನೆ ಮಾಡಲಾಗಿದೆ. ಸಯ್ಯದ್ ಇಸಾಕ್ ತಮ್ಮ ಉಳಿತಾಯದ ಹಣದಲ್ಲಿ ಗುಡಿಸಿಲಿನಲ್ಲೇ ಗ್ರಂಥಾಲಯ ನಿರ್ಮಿಸಿದ್ದರು. ತನಗೆ ಅಕ್ಷರ ಜ್ಞಾನ ಇಲ್ಲದಿದ್ದರೇನಂತೆ ಇತರರಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಿದ್ದ ಸಯ್ಯದ್​ರ ಗ್ರಂಥಾಲಯ ಹಾಗೂ ಅವರ ಈ ಪ್ರೀತಿ ಮೈಸೂರಿನಲ್ಲಿ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.

ಇನ್ನು ಸಯ್ಯದ್ ತಮ್ಮ ಗ್ರಂಥಾಲಯದಲ್ಲಿ ಭಗವದ್ಗೀತೆ, ಕುರಾನ್, ಬೈಬಲ್‌ನ ಕನ್ನಡ ಪುಸ್ತಕಗಳನ್ನ ಓದಲು ಇಟ್ಟಿದ್ದರು. ಚರಂಡಿ ಸ್ವಚ್ಛತೆ, ಮ್ಯಾನ್‌ಹೋಲ್ ಕ್ಲೀನಿಂಗ್ ಮಾಡುವ ಕಾಯಕದ ಸಯ್ಯದ್ ಬೆಂಕಿಗಾಹುತಿಯಾಗಿರುವ ಪುಸ್ತಕಗಳ ನೋಡಿ ಮಮ್ಮಲಮರುಗಿದ್ದಾರೆ; ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Eleven Thousand Books turned to ash

11 ಸಾವಿರ ಪುಸ್ತಕಗಳು ಸುಟ್ಟು ಭಸ್ಮ

Eleven Thousand Books turned to ash

11 ಸಾವಿರ ಪುಸ್ತಕಗಳು ಸುಟ್ಟು ಭಸ್ಮ

ಇದನ್ನೂ ಓದಿ: ಕೊರೊನಾ ಬಗ್ಗೆ ಆದೇಶ ಹಿಂಪಡೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ