ಚಿತ್ರದುರ್ಗದಲ್ಲಿ ಪ್ರತ್ಯೇಕ ಅಪಘಾತ; ಇಬ್ಬರ ಸಾವು
ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು ಇಬ್ಬರು ಮರಣ ಹೊಂದಿರುವ ಘಟನೆ ನಡೆದಿದೆ. ಅಪಘಾತ ನಡೆದ ಸ್ಥಳ ನೋಡಲು ಬಂದಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮರಣ ಹೊಂದಿದ್ದಾರೆ.

ಚಿತ್ರದುರ್ಗ: ಬೈಕ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮರಣ ಹೊಂದಿರುವ ಘಟನೆ ನಡೆದಿದೆ. ಇದೇ ವೇಳೆ ಅಪಘಾತವಾದ ಸ್ಥಳ ನೋಡಲು ಬಂದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ನಿಂತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಘಟನೆ ಹೊಳಲ್ಕೆರೆ ತಾಲೂಕಿನ ಟಿ. ನುಲೇನೂರು ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯಲ್ಲಿ 2 ಪ್ರತ್ಯೇಕ ಅಪಘಾತದಿಂದ ಇಬ್ಬರ ಸಾವು ಸಂಭವಿಸಿದೆ. ಬೈಕ್ ಮತ್ತು ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಲಕ್ಷ್ಮೀಸಾಗರದ ಕುಮಾರ (40) ಮರಣ ಹೊಂದಿದ್ದಾರೆ. ಅಪಘಾತ ನಡೆದ ಸ್ಥಳ ನೋಡಲು ಬಂದಿದ್ದ ನಾಗರಾಜು (40) ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ನಾಗರಾಜು ಬಿ.ಜಿ.ಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯಪುರದಲ್ಲಿ ಅಪಘಾತ ಇಬ್ಬರು ಸಾವು ಲಾರಿ ಹಾಗೂ ಟವೇರಾ ಕಾರ್ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಕ್ರೀಡಾಪಟುಗಳ ಸಾವು ಸಂಭವಿಸಿದೆ. ಇತರೆ ಮೂವರು ಕ್ರೀಡಾಪಟುಗಳಿಗೆ ಗಂಭೀರ ಗಾಯವಾಗಿದೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್ ಬಳಿಯ ಎನ್ಎಚ್ 218 ರಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗವಾಗಿ ಸೊಲ್ಲಾಪುರಕ್ಕೆ ತೆರಳುತ್ತಿದ್ದ ಸೊಹೇಲ್ (22), ಮಹಾದೇವ (20) ಕ್ರೀಡಾಪಟುಗಳು ಮೃತಪಟ್ಟಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಡಬಲ್ ಮರ್ಡರ್ಗೆ ಕಾರಣವಾಯ್ತು ಒಂದು ಚಿಕ್ಕ ಬೈಕ್ ಅಪಘಾತ; ಇಬ್ಬರು ಯುವಕರನ್ನು ಕೊಂದ ಆರೋಪಿಗಳಲ್ಲಿ ಒಬ್ಬ ಬಾಲಕ
ಇದನ್ನೂ ಓದಿ: ತಂದೆ ಅಂತ್ಯಸಂಸ್ಕಾರಕ್ಕೆ ಹೂವು ತರಲು ಹೋದ ಮಗ, ಸಂಬಂಧಿ ಸಾವು: ಕೆಎಸ್ಆರ್ಟಿಸಿ ಬಸ್ – ಬೈಕ್ ನಡುವೆ ಅಪಘಾತ
Published On - 11:03 am, Wed, 17 March 21