Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಕಲ್ಲಿನ ಕ್ವಾರಿ ಮೇಲೆ ಪೊಲೀಸರ ದಾಳಿ: ಸ್ಪೋಟಕ ವಸ್ತುಗಳು ಪತ್ತೆ

ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು 30 ಜಿಲೆಟಿನ್ ಕಡ್ಡಿ, ಎರಡು ಎಲೆಕ್ಟ್ರಾನಿಕ್ ಡಿಟೋನೇಟರ್​ ಹಾಗೂ ಗನ್​ ಪೌಡರ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಕಲ್ಲಿನ ಕ್ವಾರಿ ಮೇಲೆ ಪೊಲೀಸರ ದಾಳಿ: ಸ್ಪೋಟಕ ವಸ್ತುಗಳು ಪತ್ತೆ
ಕಲ್ಲಿನ ಕ್ವಾರಿಯ ಮೇಲೆ ಪೊಲೀಸರ ದಾಳಿ
Follow us
preethi shettigar
|

Updated on: Mar 17, 2021 | 11:58 AM

ದಾವಣಗೆರೆ: ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿರುವ ಘಟನೆ ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದ ಬಳಿ ನಡೆದಿದೆ. ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು 30 ಜಿಲೆಟಿನ್ ಕಡ್ಡಿ, ಎರಡು ಎಲೆಕ್ಟ್ರಾನಿಕ್ ಡಿಟೋನೇಟರ್​ ಹಾಗೂ ಗನ್​ ಪೌಡರ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ ಪೊಲೀಸ್ ವಶ ಬೆಂಗಳೂರಿನ ಅಮೃತಹಳ್ಳಿ, ಜಕ್ಕೂರಿನಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್ ಬಂಧಿತ ಆರೋಪಿಗಳು. ಬಂಧಿತರಿಂದ 65 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಕೊಕೇನ್, ಎಕ್ಸ್ಟಸಿ, ಎಲ್‌ಎಸ್‌ಡಿ ಸ್ಟ್ರಿಪ್ಸ್, ಎಂಡಿಎಂ ಜಪ್ತಿ ಮಾಡಲಾಗಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಇಂದು ಇಬ್ಬರು ನೈಜಿರಿಯನ್ ಡ್ರಗ್ ಪೆಡ್ಲರ್​ಗಳು ಅರೆಸ್ಟ್ ಆಗಿದ್ದಾರೆ. ಓರ್ವ ಬಿಸಿನೆಸ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ. ಮತ್ತೊಬ್ಬ ಟೂರಿಸ್ಟ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರು ಡ್ರಗ್ ಪೆಡ್ಲರ್ ಸಂಬಂಧ ಅಮೃತಹಳ್ಳಿ, ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಬಿಸಿನೆಸ್ ವೀಸಾದಡಿ ಬಂದು ಅಕ್ರಮವಾಗಿ ಡ್ರಗ್ ಬಿಸಿನೆಸ್ ಮಾಡುತ್ತಿದ್ದ. ಸದ್ಯ ಈತ ಅಮೃತಹಳ್ಳಿ ಜಕ್ಕೂರ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ ₹50 ಲಕ್ಷ ಮೌಲ್ಯದ 500ಗ್ರಾಂ ಎಂಡಿಎಂ, 91 ಎಕ್ಸ್ ಟಸಿ ಮಾತ್ರೆ, 56 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ.

ಇನ್ನು ಮತ್ತೋರ್ವ ಆರೋಪಿ ಜೋಸೆಫ್ ಡುಕ್ವೆ ಒಕಾಫಾರ್​ನನ್ನು ಯಲಹಂಕದಲ್ಲಿ ಬಂಧಿಸಿಲಾಗಿದ್ದು, ಈತ ಟೂರಿಸ್ಟ್ ವೀಸಾದಡಿ ಬಂದು ಅಕ್ರಮವಾಗಿ ನೆಲೆಸಿದ್ದ. ಬಂಧಿತನಿಂದ ₹15 ಲಕ್ಷ ಮೌಲ್ಯದ 65 ಗ್ರಾಂ ಕೊಕೇನ್, 50 ಎಕ್ಸ್ ಟಿಸಿ ಮಾತ್ರೆ, 58 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಮೃತಹಳ್ಳಿ ಹಾಗೂ ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:

ಭಾವನ ಮನೆಯಲ್ಲೇ ಕಳ್ಳತನ ಮಾಡಿದ್ದ, ಮಾಲು‌ ಮಾರಲಾಗದೆ ಪರದಾಡ್ತಿದ್ದ ಚೋರ ಸಿಕ್ಕಿಬಿದ್ದ!

ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ.. 75 ಲಕ್ಷ ಮೌಲ್ಯದ ಡ್ರಗ್ ಸೀಜ್

ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ