ಕೊವಿಡ್ ವ್ಯಾಕ್ಸಿನ್ ಬಗ್ಗೆ ಬಿಲ್ ಗೇಟ್ಸ್ ಅವರೇ ಮೆಚ್ಚಿದ್ದಾರೆ; ಕಾಂಗ್ರೆಸ್ ಟೀಕೆ ಮಾಡಿಕೊಂಡು ಕೂತಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Bill gates: ಕಾಂಗ್ರೆಸ್ ಪಕ್ಷವು ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ. ಒಂದು ದೇಶವಾಗಿ ಶತಮಾನದ ವ್ಯಾಕ್ಸಿನೇಷನ್ ದೊಡ್ಡ ಸಾಧನೆ. 9 ತಿಂಗಳ ಅವಧಿಯಲ್ಲಿ ನೂರು ಕೋಟಿ ಜನರಿಗೆ ನಾವು ವ್ಯಾಕ್ಸಿನ್ ಕೊಟ್ಟಿದ್ದು ಜಗತ್ತೇ ಕೊಂಡಾಡಿದೆ. ಬಿಲ್ ಗೆಟ್ಸ್ ಸಹಿತ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ: ಕೋವಿಡ್ ವಿರುದ್ಧದ ಸಮದಲ್ಲಿ ಭಾರತ ಸರ್ಕಾರ ಸಾಧಿಸಿರುವ ಶತಕೋಟಿ ಕೋವ್ಯಾಕ್ಸಿನ್ ವಿರುದ್ಧ ಕಾಂಗ್ರೆಸ್ ಟೀಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದು, ಕೊವಿಡ್ ವ್ಯಾಕ್ಸಿನ್ ಬಗ್ಗೆ ಬಿಲ್ ಗೇಟ್ಸ್ ಅವರೇ ಮೆಚ್ಚಿದ್ದಾರೆ. ಆ ಬಗ್ಗೆ ಟ್ವಿಟ್ ಮಾಡಿದ್ದಾರೆ. ಅಂತಹುದರಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಟೀಕೆ ಮಾಡಿಕೊಂಡು ಕೂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ. ಒಂದು ದೇಶವಾಗಿ ಶತಮಾನದ ವ್ಯಾಕ್ಸಿನೇಷನ್ ದೊಡ್ಡ ಸಾಧನೆ. 9 ತಿಂಗಳ ಅವಧಿಯಲ್ಲಿ ನೂರು ಕೋಟಿ ಜನರಿಗೆ ನಾವು ವ್ಯಾಕ್ಸಿನ್ ಕೊಟ್ಟಿದ್ದು ಜಗತ್ತೇ ಕೊಂಡಾಡಿದೆ. ಬಿಲ್ ಗೆಟ್ಸ್ ಸಹಿತ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಆದರೆ ಇಂಥ ನಾಯಕರು (ಕಾಂಗ್ರೆಸ್) ಇರುವುದು ನಮ್ಮ ದೇಶದ ದೌರ್ಭಾಗ್ಯವೇ ಸರಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಇಡೀ ಜಗತ್ತಿನಲ್ಲಿ 700 ಕೋಟಿ ವ್ಯಾಕ್ಸಿನ್ ಆಗಿದೆ. ಅದರಲ್ಲಿ 100 ಕೋಟಿ ಭಾರತದಲ್ಲಿ ಆಗಿದೆ. ಸಿದ್ಧರಾಮಯ್ಯನವರು ಹಾಗೂ ಅವರ ಮುಖಂಡರು ರಾಹುಲ್ ಗಾಂಧಿ ತರಹ ನೀವು ಆಡಬೇಡಿ. ರಾಹುಲ್ ಗಾಂಧಿಗೆ ಅರ್ಥ ಆಗಲ್ಲ, ನೀವು ಯಾಕೆ ಹೀಗೆ ಮಾತಾಡ್ತಿರಿ ಎಂದು ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಮೋದಿ ಅವರಿಗೆ ಈ ಕ್ರೆಡಿಟ್ ಕೊಡಬೇಕು ಅಂತಾ ನಾವು ಬಯಸಿಲ್ಲ, ಸ್ವತಃ ಮೋದಿನೇ ಬಯಸಿಲ್ಲ. ದೇಶಕ್ಕೆ ಈ ಕ್ರೆಡಿಟ್ ಕೊಡಿ ಎಂದು ಅವರು ಹೇಳಿದರು.
India has administered 1 billion vaccine doses, a testament to India’s innovation, ability to manufacture at scale, and the efforts of millions of health workers backed by CoWIN. Congratulations @narendramodi @mansukhmandviya @PMOIndia @MoHFW_India https://t.co/vygRkSkPRm
— Bill Gates (@BillGates) October 22, 2021
(Bill gates tweet appreciated india’s 100 crore vaccination but congres is criticising says union minister pralhad joshi)
Published On - 1:31 pm, Sat, 23 October 21