ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟದ ಹಿಂದೆ ನೂರೆಂಟು ಲೆಕ್ಕಾಚಾರ: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಹೈಕಮಾಂಡ್ ಸ್ಕೆಚ್!

| Updated By: ಗಣಪತಿ ಶರ್ಮ

Updated on: Nov 11, 2023 | 12:09 PM

ಇಷ್ಟೇ ಅಲ್ಲದೆ, ಉಪಚುನಾವಣೆ ಎಕ್ಸ್​ಪರ್ಟ್ ಎಂದೇ ವಿಜಯೇಂದ್ರಗೆ ಹೆಸರಿದೆ. ಹಲವು ಚುನಾವಣೆಗಳಲ್ಲಿ, ಕಠಿಣ ಹಾದಿಯಲ್ಲೂ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬಂದ ಖ್ಯಾತಿ ವಿಜಯೇಂದ್ರ ಅವರಿಗಿದೆ.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟದ ಹಿಂದೆ ನೂರೆಂಟು ಲೆಕ್ಕಾಚಾರ: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಹೈಕಮಾಂಡ್ ಸ್ಕೆಚ್!
ವಿಜಯೇಂದ್ರ
Follow us on

ಬೆಂಗಳೂರು, ನವೆಂಬರ್ 11: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ (BY Vijayendra) ನೇಮಕವಾಗಿದೆ. ರಾಜಾಹುಲಿ ಎಂದೇ ಖ್ಯಾತರಾದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಪುತ್ರನಿಗೆ ಹೈಕಮಾಂಡ್ (BJP Highcommand) ಮಣೆ ಹಾಕಿದೆ. ಅಷ್ಟಕ್ಕೂ ಯಾವ ಮಾನದಂಡವನ್ನ ಅನುಸರಿಸಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಕಾರಣ ಕೆದಕುತ್ತಾ ಹೋದರೆ ಹಲವು ಲೆಕ್ಕಾಚಾರಗಳನ್ನು ಹೈಕಮಾಂಡ್ ಹಾಕಿರುವುದು ಸ್ಪಷ್ಟ.

ವಿಧಾನಸಭೆ ಚುನಾವಣೆಯಲ್ಲಿ ದೂರವಾದ ಲಿಂಗಾಯತ ಮತಗಳನ್ನು ಮತ್ತೆ ಸೆಳೆಯುವ ಯತ್ನವನ್ನು ಬಿಜೆಪಿ ಹೈಕಮಾಂಡ್ ವಿಜಯೇಂದ್ರಗೆ ಪಟ್ಟ ನೀಡುವ ಮೂಲಕ ಮಾಡಿದೆ ಎಂಬುದು ಸ್ಪಷ್ಟ. ಈ ಮಧ್ಯೆ, ಜೆಡಿಎಸ್ ಈಗಾಗಲೇ ಎನ್​ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಹೀಗಾಗಿ ಒಕ್ಕಲಿಗ ಸಮುದಾಯ ಹೊರತುಪಡಿಸಿದ ಯುವ ನಾಯಕತ್ವದ ವರ್ಚಸ್ಸು ವಿಜಯೇಂದ್ರಗೆ ಇದೆ. ಇದಲ್ಲದೆ, ಬಿಜೆಪಿ ಯುವ ಮೋರ್ಚಾದಲ್ಲಿ ವಿಜಯೇಂದ್ರಗೆ ಹಿಡಿತವಿದೆ. ಇನ್ನು ಬಿಜಯೇಂದ್ರ ಅವರನ್ನ ನೇಮಕಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ತಂದೆ ಯಡಿಯೂರಪ್ಪ ಅವರನ್ನ ತೊಡಗಿಸಿಕೊಳ್ಳುವಂತೆ ಮಾಡುವ ಯತ್ನವನ್ನೂ ಹೈಕಮಾಂಡ್ ಮಾಡಿದೆ. ಅಂದರೆ, ವಿಜಯೇಂದ್ರ ಅಧ್ಯಕ್ಷರಾದರೆ ಯಡಿಯೂರಪ್ಪ ತಾವೇ ಅಧ್ಯಕ್ಷ ಎಂಬಂತೆ ಕೆಲಸ ಮಾಡುತ್ತಾರೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್​ದು ಎನ್ನಲಾಗುತ್ತಿದೆ.

ಇಷ್ಟೇ ಅಲ್ಲದೆ, ಉಪಚುನಾವಣೆ ಎಕ್ಸ್​ಪರ್ಟ್ ಎಂದೇ ವಿಜಯೇಂದ್ರಗೆ ಹೆಸರಿದೆ. ಹಲವು ಚುನಾವಣೆಗಳಲ್ಲಿ, ಕಠಿಣ ಹಾದಿಯಲ್ಲೂ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬಂದ ಖ್ಯಾತಿ ವಿಜಯೇಂದ್ರ ಅವರಿಗಿದೆ.

2009ರಲ್ಲಿ ಬೆಂಗಳೂರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬ ಹೆಗ್ಗಳಿಕೆಗೆ ವಿಜಯೇಂದ್ರ ಪಾತ್ರರಾಗಿದ್ದಾರೆ. ಲಿಂಗಾಯತ ಸಮುದಾಯದ ಯುವ ನಾಯಕರಾಗಿರುವ ವಿಜಯೇಂದ್ರ, 2020ರಲ್ಲಿ ಶಿರಾ, ಕೆ.ಆರ್‌ ಪೇಟೆ ವಿಧಾನಸಭಾ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬೈಎಲೆಕ್ಷನ್ ಎಕ್ಸ್‌ಪರ್ಟ್ ಎಂಬ ಖ್ಯಾತಿ ಗಳಿಸಿದ್ದಾರೆ.

ಇದನ್ನೂ ಓದಿ: ಬಿವೈ ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷ; ಯಡಿಯೂರಪ್ಪರಂತೆ ಮಗನ ಮುಂದೆಯೂ ಇದೆ ಸವಾಲುಗಳ ಸರಮಾಲೆ

2020ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾದರು. ಬಿಎಸ್‌ವೈ ಚುನಾವಣಾ ನಿವೃತ್ತಿ ನಂತ್ರ ಶಿಕಾರಿಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಇದೀಗ ಈ ಎಲ್ಲಾ ಏಳ -ಬೀಳುಗಳನ್ನು ಮೆಟ್ಟಿ ನಿಂತ ವಿಜಯೇಂದ್ರ, ರಾಜ್ಯಾಧ್ಯಕ್ಷ ಪಟ್ಟಕ್ಕೇರಿದ್ದಾರೆ. ಅಪ್ಪನಂತೆ ಪಕ್ಷ ಕಟ್ಟುತ್ತೇನೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲುತ್ತೇವೆ ಅಂತಾ ಶಪಥ ಮಾಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ