ಕೊರೊನಾದಿಂದ ರಾಜ್ಯ ಸರ್ಕಾರ ಅಕ್ಷರಶಃ ತಬ್ಬಿಬ್ಬಾಗಿ ಹೋಗಿದೆ; ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಹೆಚ್. ವಿಶ್ವನಾಥ್ ಕಿಡಿಕಿಡಿ
ಕೊರೊನಾ ಮೊದಲ ಅಲೆ ಮುಗಿದ ಮೇಲೆ ಬರೀ ಬಿಲ್ ಮಾಡೋದರಲ್ಲಿ ಕಾಲ ಕಳೆದಿರಿ. WHO ಸದಸ್ಯರು ಹೇಳಿದ್ರೂ ನೀವೇನು ತಯಾರಿ ಮಾಡಿಕೊಂಡಿದ್ರಿ? 2 ಸಾವಿರ ಹಾಸಿಗೆ ತಂದ್ರಲ್ಲ ಅದು ಏನಾಯ್ತು? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು? ಬರೀ ಮೀಟಿಂಗ್ ಮಾಡ್ತೀರಾ, ತೀರ್ಮಾನ ಏನಾಗಿದೆ ಅಂತಾನೂ ಹೇಳಿ: ಹೆಚ್.ವಿಶ್ವನಾಥ್
ಮೈಸೂರು: ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಸಿಗದೇ ಹಬ್ಬುತ್ತಿರುವ ಕೊರೊನಾ ಸೋಂಕಿನಿಂದ ರಾಜ್ಯ ಸರ್ಕಾರ ಅಕ್ಷರಶಃ ತಬ್ಬಿಬ್ಬಾಗಿ ಹೋಗಿದೆ. ಜನಸಾಮಾನ್ಯರು, ವಿರೋಧ ಪಕ್ಷದವರು ಮೇಲಿಂದ ಮೇಲೆ ಸರ್ಕಾರವನ್ನು ತಿವಿಯುತ್ತಿದ್ದಾರೆ. ಇದರ ನಡುವೆ ಸರ್ಕಾರಕ್ಕೆ ಸ್ವಪಕ್ಷದವರ ಹೇಳಿಕೆಯೂ ಬಿಸಿ ತುಪ್ಪದಂತಾಗುತ್ತಿದ್ದು, ಇದೀಗ ಹೆಚ್.ವಿಶ್ವನಾಥ್ ಕೊವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದಾರೆ.
ರಾಜ್ಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಸಿಎಂ ಒಬ್ಬರೇ ಅಂದಮೇಲೆ ಕ್ಯಾಬಿನೆಟ್ ಯಾಕೆ ಬೇಕು? ಕ್ಯಾಬಿನೆಟ್ ಮಿನಿಸ್ಟರ್ಗಳೇ ಸರ್ಕಾರ. ಆದರೆ, ಇಲ್ಲಿ ಏನ್ ಆಗ್ತಿದೆ? ಈಗ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಭೆ ನಡೆಸುವ ಮಾಹಿತಿ ಸಿಕ್ಕಿದೆ. ಚುನಾಯಿತ ಸರ್ಕಾರ ವಿಫಲವಾದಾಗ ಮಾತ್ರ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಹಾಗಾದರೆ, ಈಗ ಸರ್ಕಾರ ವಿಫಲವಾಗಿದೆಯಾ? ಎಂದು ಕುಟುಕಿದ್ದಾರೆ.
ಕೊರೊನಾ ಮೊದಲ ಅಲೆ ಮುಗಿದ ಮೇಲೆ ಬರೀ ಬಿಲ್ ಮಾಡೋದರಲ್ಲಿ ಕಾಲ ಕಳೆದಿರಿ. WHO ಸದಸ್ಯರು ಹೇಳಿದ್ರೂ ನೀವೇನು ತಯಾರಿ ಮಾಡಿಕೊಂಡಿದ್ರಿ? 2 ಸಾವಿರ ಹಾಸಿಗೆ ತಂದ್ರಲ್ಲ ಅದು ಏನಾಯ್ತು? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು? ಬರೀ ಮೀಟಿಂಗ್ ಮಾಡ್ತೀರಾ, ತೀರ್ಮಾನ ಏನಾಗಿದೆ ಅಂತಾನೂ ಹೇಳಿ. ರಾಜ್ಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಮುಖ್ಯಮಂತ್ರಿ ಒಬ್ಬರೇ ಎನ್ನುವ ಹಾಗಾಗಿದೆ. ಹೀಗಿದ್ದಾಗ ಕ್ಯಾಬಿನೆಟ್ ಯಾಕೆ ಬೇಕು? ಕ್ಯಾಬಿನೆಟ್ ಮಿನಿಸ್ಟರ್ಗಳೇ ಸರ್ಕಾರ. ಆದರೆ, ಇಲ್ಲಿ ಏನ್ ಆಗ್ತಿದೆ? ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‌ಎಸ್ ಅಧಿಕಾರಿಗಳು ಯಾವ ಮಂತ್ರಿಯ ಮಾತನ್ನೂ ಕೇಳುತ್ತಿಲ್ಲ. ಇನ್ನಾದರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ಕೊಡಬೇಕು. ನಿರ್ಧಾರ ತೆಗೆದುಕೊಳ್ಳುವ ಹಣಕಾಸು ವ್ಯವಸ್ಥೆಯನ್ನು ಸರ್ಕಾರ ಸೂಕ್ತವಾಗಿ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಲಾಕ್ಡೌನ್.. ಸರ್ವ ಪಕ್ಷ ಸಭೆಯಲ್ಲಿ ಇಂದು ನಿರ್ಧಾರವಾಗುತ್ತೆ ಬೆಂಗಳೂರು ಭವಿಷ್ಯ