1 ರಿಂದ 9 ಮೌಲ್ಯಾಂಕನ ಮೂಲಕ ಪಾಸ್ ಮಾಡಲು ರಾಜ್ಯ ಸರ್ಕಾರ ನಿರ್ಧಾರ; ಬೇಸಿಗೆ ರಜೆ ಘೋಷಣೆ

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಮೂಲಕ ವಿದ್ಯಾರ್ಥಿಗಳು ಪಾಸ್

1 ರಿಂದ 9 ಮೌಲ್ಯಾಂಕನ ಮೂಲಕ ಪಾಸ್ ಮಾಡಲು ರಾಜ್ಯ ಸರ್ಕಾರ ನಿರ್ಧಾರ; ಬೇಸಿಗೆ ರಜೆ ಘೋಷಣೆ
1 ರಿಂದ 9 ಮೌಲ್ಯಾಂಕನ ಮೂಲಕ ಪಾಸ್ ಮಾಡಲು ರಾಜ್ಯ ಸರ್ಕಾರ ನಿರ್ಧಾರ
Follow us
ಸಾಧು ಶ್ರೀನಾಥ್​
|

Updated on:Apr 20, 2021 | 5:24 PM

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಮೂಲಕ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪರೀಕ್ಷೆ ಇಲ್ಲದೆಯೇ ಪಾಸ್ ಅನ್ನೋ ವಿಚಾರಕ್ಕೆ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಟಿವಿ9 ಗೆ ಸ್ಪಷ್ಟನೆ ನೀಡಿದ್ದು, ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಉತ್ತೀರ್ಣಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಆಧಾರದ ಮೇಲೆ ಉತ್ತೀರ್ಣ ಮಾಡಲು ಸೂಚಿಸಲಾಗಿದೆ. 1 ರಿಂದ 5ನೇ ತರಗತಿ ಮಕ್ಕಳ ಹಿಂದಿನ ಕಲಿಕೆ ಆಧಾರದ ಮೇಲೆ ಉತ್ತೀರ್ಣ ಮಾಡಲು ಆದೇಶಿಸಲಾಗಿದೆ. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೇಸಿಗೆ ರಜೆ ಘೋಷಣೆ, ಜೂನ್​ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ: 1ರಿಂದ 9ನೇ ತರಗತಿ ಮಕ್ಕಳಿಗೆ ಮೇ 1ರಿಂದ ಜೂನ್​ 14ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಜೂ. 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಪ್ರೌಢಶಾಲೆ ಶಿಕ್ಷಕರಿಗೆ ಜೂನ್ 15ರಿಂದ ಜುಲೈ 14 ರವರೆಗೆ ರಜೆ ಇರುತ್ತದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಧರಿಸುವ ಬದಲು ಮೌಲ್ಯಾಂಕನ ಮೂಲಕ ಉತ್ತೀರ್ಣಕ್ಕೆ ಮುಂದಾಗಿರೋದು ಸ್ವಾಗತಾರ್ಹ: 1 ರಿಂದ 9ನೇ ತರಗತಿಗೆ ಮೌಲ್ಯಾಂಕನ ಮೂಲಕ ಪಾಸ್ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದ್ದಾರೆ.

ಮೂಲಭೂತ ಶಿಕ್ಷಣ ಕಾಯ್ದೆ ಎತ್ತಿ ಹಿಡಿಯಲಾಗಿದೆ. ಮಕ್ಕಳನ್ನ ಪರೀಕ್ಷೆ ಇಲ್ಲದೆಯೇ ಪಾಸ್/ ಫೇಸ್ ಅಂತ ಅವೈಜ್ಞಾನಿಕವಾಗಿ ನಿರ್ಧರಿಸುವ ಬದಲು ಮೌಲ್ಯಾಂಕನ ಮೂಲಕ ಉತ್ತೀರ್ಣಕ್ಕೆ ಮುಂದಾಗಿರೋದು ಸ್ವಾಗತಾರ್ಹ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಡಿ 2009 ಹಾಗೂ ವ್ಯಾಪಕ ಮೌಲ್ಯಮಾಪನದ ಅಡಿ ಮಕ್ಕಳ ಕಲಿಕೆಯನ್ನ ಸಮಗ್ರವಾಗಿ ಪರಿಶೀಲಿಸಿ ಸಿಸಿಇ ಅನ್ವಯ ಸಂಚಿತ ಕಲಿಕೆ, ಸಂಕ್ಷಿಪ್ತ ಚಿತ್ರಣ ಆಧರಿಸಿ ತೇರ್ಗಡೆ ತೀರ್ಮಾನ ತೆಗೆದುಕೊಳ್ಳುವುದು ಕಾನೂನು ಬದ್ಧವಾಗಿವಾಗಿದೆ. ಅದು ಸ್ವಾಗತಾರ್ಹ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

(Coronavirus effect karnataka government decides to pass 1 to 9th standard students says minister suresh kumar)

Published On - 1:27 pm, Tue, 20 April 21