ಬೆಳಗಾವಿ (ಡಿಸೆಂಬರ್.19): ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಸಿಟಿ ರವಿ ವಿರುದ್ಧ ಆಕ್ರೋಶಗೊಂಡಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಬಿಗಿಪಟ್ಟು ಹಿಡಿದಿದೆ.
ರಾಜ್ಯಸಭೆಯಲ್ಲಿ ಅಮಿತ್ ಶಾ (Amit Shah) ಹೇಳಿಕೆ ಖಂಡಿಸಿ ಪರಿಷತ್‌ನಲ್ಲಿ (Vidhan Parishad) ಇಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಪ್ರಾಸ್ಟೂ* ಎಂಬ ಪದ ಬಳಕೆ ಮಾಡಿದ್ದಾರೆ. ಈ ಪದವನ್ನು ಬಳಕೆ ಮಾಡಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಂಡಾಮಂಡಲವಾಗಿದ್ದಾರೆ. ಇದರಿಂದ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರು ಸಿಟಿ ರವಿ ವಿರುದ್ಧ ಮುಗಿಬಿದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ.
ಅಶ್ಲೀಲ ಪದ ಬಳಿಕೆ ಮಾಡಿರುವ ಸಿಟಿ ರವಿ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕರು ಕಾನೂನ ಪರಿಣಿತರ ಜೊತೆ ಚರ್ಚೆ ನಡೆಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ ಚೇಂಬರ್ ನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ., ಬೋಸರಾಜ್ ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್ ಕೆ ಪಾಟೀಲ್ ಮಾತುಕತೆ ನಡೆಸಿದ್ದಾರೆ.
Tv9ಗೆ ಮಾಜಿ ಸಚಿವ ಉಮಾಶ್ರೀ ಪ್ರತಿಕ್ರಿಯಿಸಿ, ಯಾವ ಹೆಣ್ಣೂ ಸಹ ನನ್ನನ್ನ ಪ್ರಾಸಿಟ್ಯೂಟ್ ಅಂದ್ರು ಅಂತ ಸುಳ್ಳು ಅಥವಾ ಸುಮ್ಮನೆ ಹೇಳುವುದಿಲ್ಲ. ಸಿ.ಟಿ ರವಿ ಆ ಪದ ಬಳಕೆ ಮಾಡಿದ್ದು ನಿಜ/ ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಅಡಿಕ್ಟ್ ಎಂದು ಮಾತನಾಡಿದ್ರು ಆಗ ನೀವು ಅಪಘಾತದಲ್ಲಿ ಇಬ್ಬರ ಕೊಲೆ ಮಾಡಿದ್ದೀರಿ, ಕೊಲೆಗಡುಕರು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಕೂಗಿದ್ರು.. ಆಗ ಸಿ.ಟಿ. ರವಿ ಪ್ರಾಸಿಟ್ಯೂಟ್ ಅಂತ 10 ಬಾರೀ ಕೂಗಿದ್ರು. ಕೂಗಿದ್ದು ನಿಜ. ಸಭಾಪತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಕಾಂಗ್ರೆಸ್ ಎಂಎಲ್‌ಸಿ ನಾಗರಾಜ್ ಯಾದವ್ ಪ್ರತಿಕ್ರಿಯಿಸಿ, ಅಂಬೇಡ್ಕರ್ ಅಪಮಾನ ಮಾಡಿರೋ ಬಗ್ಗೆ ನಾವು ಸದನದಲ್ಲಿ ಮಾತಾಡ್ತಿದ್ದೇವೆ. ಅಮಿತ್ ಶಾ ವಿಚಾರ ಮತಾಡುವಾಗ ಗದ್ದಲ ಆಗುತ್ತೆ. ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿಗೆ ಕೊಲೆಗಾರ ಎನ್ನುವ ಶಬ್ದ ಬಳಕೆ ಮಾಡ್ತಾರೆ. ಆಗ ಸಿಟಿ ರವಿ ಸಹ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಕ್ಷೇಪಾರ್ಹ್ ಪದ ಬಳಕೆ ಮಾಡಿದ್ದಾರೆ. ಈ ಹಿನ್ನೆಲೆ ನಾವು ಸಭಾಪತಿಗಳಿಗೆ ದೂರನ್ನ ಕೊಟ್ಟಿದ್ದು, ಸಿಟಿ ರವಿಯನ್ನ ಪರಿಷತ್ ನಿಂದ ಹೊರಹಾಕಬೇಕೆದು ಮನವಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಜೆಡಿಎಸ್ ಪರಿಷತ್ ಸದಸ್ಯ ಶರವಣ ಮಾತನಾಡಿ, ಅಂಬೇಡ್ಕರ್ ವಿಚಾರವಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಸದನದಲ್ಲಿ ವಾಕ್ಸಮರ ನಡೆಯುತ್ತಿತ್ತು. ಸದನದ ಒಳಗಡೆ ನಾವೆಲ್ಲ ಪ್ರತಿಭಟನೆ ಮಾಡುತ್ತಿದ್ದೇವು. ಸ್ಪೀಕರ್ 10 ನಿಮಿಷ ಮುಂದೂಡಿಕೆ ಮಾಡಿದ್ರು. ಆಗ ಕೊಲೆಗಡುಕ ಡ್ರಗ್ಗಿಸ್ಟ್ ಪದ ಬಂತು. ನಾನು ಕೂಡ ಸಿಟಿ ರವಿ ಹತ್ತರದಿಂದ ನೋಡಿದ್ದೇನೆ. ಯಾವದೇ ಅಶ್ಲೀಲ ಪದ ಬಳಕೆ ನನ್ನ ಗಮನಕ್ಕೆ ಬಂದಿಲ್ಲ. ಅಂತ ಪದ ಬಳಕೆ ಮಾಡಿಲ್ಲ ಅಂದುಕೊಂಡಿರುವೆ ಎಂದು ಸಿಟಿ ರವಿ ಪರ ಬ್ಯಾಟಿಂಗ್ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Thu, 19 December 24