AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದಬಳಕೆ ಬಗ್ಗೆ ಕೇಳಿದಾಗ ಸಿಟಿ ರವಿಯವರು ಡಾ ಬಿಅರ್ ಅಂಬೇಡ್ಕರ್ ಕುರಿತು ಮಾತಾಡಿದರು! 

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದಬಳಕೆ ಬಗ್ಗೆ ಕೇಳಿದಾಗ ಸಿಟಿ ರವಿಯವರು ಡಾ ಬಿಅರ್ ಅಂಬೇಡ್ಕರ್ ಕುರಿತು ಮಾತಾಡಿದರು! 

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 19, 2024 | 3:05 PM

Share

ಅಂಬೇಡ್ಕರ್ ಅವರ ಬಗ್ಗೆ ಮಾತಾಡುವ ರವಿ, ಅವರು ಬದುಕಿದ್ದಾಗ ಮತ್ತು ಸತ್ತಾಗಲೂ ಕಾಂಗ್ರೆಸ್ ಅವರನ್ನು ಅಪಮಾನಿಸಿತು, 1952 ಲೋಕಸಭಾ ಚುನಾವಣೆಯಲ್ಲಿ ಸೋಲುವಂತೆ ಮಾಡಿತು, ಅವರ ಶವಸಂಸ್ಕಾರಕ್ಕಾಗಿ ದೆಹಲಿಯಲ್ಲಿ ಜಾಗ ಕೊಡಲಿಲ್ಲ, ಶವಸಾಗಣೆಯ ವಿಮಾನ ಬಾಡಿಗೆಯನ್ನೂ ಕುಟುಂಬದಿಂದ ವಸೂಲು ಮಾಡಲಾಯಿತು, ಮತ್ತು ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ 1990 ರಲ್ಲಿ ನೀಡಿತು ಎಂದು ಹೇಳಿದರು.

ಬೆಳಗಾವಿ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಅಸಂಸದೀಯ ಪದ ಬಳಸಿರುವ ಆರೋಪ ಎದುರಿಸುತ್ತಿರುವ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ನಮ್ಮ ವರದಿಗಾರ ಪ್ರಶ್ನೆ ಕೇಳಿದಾಗ ಅವರು ಒಂದು ವಾಕ್ಯದಲ್ಲಿ ವಿಷಯದ ಬಗ್ಗೆ ಉತ್ತರ ನೀಡಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯ ಬಗ್ಗೆ ಮಾತಾಡುತ್ತಾರೆ. ಆದರೆ, ನಮ್ಮ ವರದಿಗಾರ ಉತ್ತರ ಪಡೆಯುವವರೆಗೆ ರವಿಯವರನ್ನು ಬಿಡೋದಿಲ್ಲ. ನೀವು ಅವಹೇಳನಕಾರಿ ಪದ ಬಳಸಿದ್ದು ಹೌದೋ ಇಲ್ಲವೋ ಅಂತ ಅವರು 3-4 ಬಾರಿ ಕೇಳುತ್ತಾರೆ. ಅವರು ಯಾಕೆ ಹಾಗೆ ಭಾವಿಸಿದ್ದರೋ ಗೊತ್ತಿಲ್ಲ, ಸದನದ ದಾಖಲೆಗಳಲ್ಲಿ ತಾನು ಮಾತಾಡಿದ್ದು ಇದೆ, ಅದನ್ನು ತೆಗೆಸಿ ನೋಡಿದರೆ ಗೊತ್ತಾಗುತ್ತದೆ ಎಂದು ರವಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ