ಬೆಂಗಳೂರು, ಮಾರ್ಚ್ 17: ಮಹಿಳೆಯರ ಸಬಲೀಕರಣಕ್ಕಾಗಿ ಜಾರಿ ಮಾಡಿರುವ ಶಕ್ತಿ ಯೋಜನೆ ಇದೀಗ ಮಹಿಳಾ ಕಂಡಕ್ಟರ್ (conductor) ಗಳಿಗೆ ಮುಳುವಾದಂತಾಗಿದೆ. ಏಕೆಂದರೆ ಶಕ್ತಿ ಯೋಜನೆಗಾಗಿ ಹಗಲು ರಾತ್ರಿ ಶ್ರಮಿಸುವ ಮಹಿಳಾ ಕಂಡಕ್ಟರ್‌ಗೆ ಅಧಿಕಾರಿಗಳಿಂದ ಟಾರ್ಚರ್ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿವೆಂಬತೆ ಕೆಎಸ್ಆರ್ಟಿಸಿ ಮಹಿಳಾ ಕಂಡಕ್ಟರ್ ಒಬ್ಬರು ವಿಡಿಯೋ ಮಾಡಿ ಕಣ್ಣಿರಿಟ್ಟಿದ್ದಾರೆ. ಸದ್ಯ ಈ ವಿಚಾರವಾಗಿ ನಿಮಗೆ ನಿಜಕ್ಕೂ ಮಹಿಳೆಯರ ಮೇಲೆ ಕಿಂಚಿತ್ತು ಕಾಳಜಿ ಇದ್ದರೆ ಮೊದಲು ರಾಜ್ಯದ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಬಿಜೆಪಿ ವಾಗ್ದಾಳಿ ಮಾಡಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ, ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡುವುದು, ಮಹಿಳೆಯರ ಮೂಗನ್ನು ಕತ್ತರಿಸುವುದು, ಮಹಿಳಾ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು, ಮಹಿಳೆಯರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು, ಇವೇ ಕಾಂಗ್ರೆಸ್ ಸರ್ಕಾರದ ಅಸಲಿ ಮಹಿಳಾ ಸಬಲೀಕರಣ ನೀತಿಗಳು ಎಂದು ಕಿಡಿಕಾರಿದೆ.
ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡುವುದು, ಮಹಿಳೆಯರ ಮೂಗನ್ನು ಕತ್ತರಿಸುವುದು, ಮಹಿಳಾ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು, ಮಹಿಳೆಯರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು, ಇವೇ @INCKarnataka ಸರ್ಕಾರದ ಅಸಲಿ ಮಹಿಳಾ ಸಬಲೀಕರಣ ನೀತಿಗಳು.
ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗೆ ಅವರ ಮೇಲಧಿಕಾರಿಗಳು ಇನ್ನಿಲ್ಲದಂತೆ ನೀಡಿದ… pic.twitter.com/1QcWiJOaL6
— BJP Karnataka (@BJP4Karnataka) March 17, 2024
ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗೆ ಅವರ ಮೇಲಧಿಕಾರಿಗಳು ಇನ್ನಿಲ್ಲದಂತೆ ನೀಡಿದ ಕಿರುಕುಳದ ಬಗ್ಗೆ ದೂರು ನೀಡಿ ನಾಲ್ಕು ದಿನಗಳಾದರೂ ಯಾವುದೇ ಕ್ರಮವಿಲ್ಲ, ಕನಿಷ್ಟ ದೂರು ನೀಡಿದ ಮಹಿಳೆಗೆ ಸಾಂತ್ವನವೂ ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರೇ, ಇದೇನಾ ನೀವು ಮಹಿಳೆಯರಿಗೆ ನೀಡಿದ “ಶಕ್ತಿ” ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: KSRTC ಮಹಿಳಾ ಕಂಡಕ್ಟರ್ಗಳಿಗೆ ಅಧಿಕಾರಿಗಳಿಂದ ಟಾರ್ಚರ್; ಕಣ್ಣೀರು ಹಾಕಿ ನೋವು ಹೇಳಿಕೊಂಡ ಸಿಬ್ಬಂದಿ
ಡಿಪೋ ಮ್ಯಾನೇಜರ್ ಎಂ.ಕೃಷ್ಣಪ್ಪ ಅವರು ಬೇಗ ಬಂದರೂ ಲೇಟ್ ಆಗಿ ಡ್ಯೂಟಿ ನೀಡುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಟಾರ್ಚರ್ ನೀಡುತ್ತಿದ್ದಾರೆ ಅಂತ ಆರೋಪ ಮಾಡಲಾಗಿದೆ. ಡಿಪೋದ ಇತರೆ ಅಧಿಕಾರಿಗಳ ಗಮನಕ್ಕೂ ತಂದರೂ ಅವರಿಂದಲೂ ಟಾರ್ಚರ್ ಅಂತೆ. ಅಧಿಕಾರಿಗಳ ಟಾರ್ಚರ್ಗೆ ರೋಸಿ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:08 pm, Sun, 17 March 24